ನವದೆಹಲಿ:ಅಳಿಯನಾಗಬೇಕಿದ್ದ ವ್ಯಕ್ತಿಯೊಬ್ಬನಿಗೆ ಕರೆ ಮಾಡಿ ತನ್ನ ಮನೆಗೆ ಕರೆಯಿಸಿಕೊಂಡ ಮಹಿಳೆ ಆತ ಬಂದ ಕೂಡಲೇ ಮೊಬೈಲ್​ ಕಸಿದುಕೊಂಡು ಪರಾರಿಯಾಗಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದಿದೆ.
ದೆಹಲಿಯ ಮದನ್​ಪುರ್​​​ ಖಾದರ್​ ಏರಿಯಾದಲ್ಲಿರುವ ತನ್ನ ಮನೆಗೆ ತನ್ನ ಮಗಳನ್ನು ಮದುವೆಯಾಗಬೇಕಿದ್ದ ಅಲೋಕ್​ ಕುಮಾರ್​ ಎಂಬಾತನನ್ನು ಮಹಿಳೆ ಕರೆಸಿಕೊಂಡಿದ್ದಳು. ಮೊಬೈಲ್​ ಕಿತ್ತುಕೊಂಡು ಓಡಿ ಹೋಗಿರುವ ಮಹಿಳೆಯ ವಿರುದ್ಧ ಅಲೋಕ್​ ಇದೀಗ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ:ಸುಶಾಂತ್​ ಸಿಂಗ್​ ರಜಪೂತ್​ ಮಾದಕ ದ್ರವ್ಯ ವ್ಯಸನಿಯೇ? ತನಿಖೆಯಲ್ಲಿ ಹೊರಬಿತ್ತು ಭಯಾನಕ ಸತ್ಯ…!
ದೂರಿನನ್ವಯ ಆರೋಪಿ ಉಷಾ ಎಂಬಾಕೆಯನ್ನು ಬಂಧಿಸಿ ವಿಚಾರಣೆ ನಡೆಸಿದಾಗ, ನನ್ನ ಮಗಳ ಜತೆ ದೂರುದಾರ ಅಲೋಕ್ ಕುಮಾರ್​ ಮದುವೆ ನಿಶ್ಚಯವಾಗಿತ್ತು. ಆದರೆ,​ ಕೆಲವು ವಿವಾದಗಳ ಬೆನ್ನಲ್ಲೇ ಸಂಬಂಧ ಮುರಿದುಬಿತ್ತು. ಆದರೂ ತನ್ನ ಮಗಳ ಫೋಟೋಗಳು ಅಲೋಕ್​ ಕುಮಾರ್​ ಮೊಬೈಲ್​ನಲ್ಲಿ ಇದ್ದವು. ಅವುಗಳನ್ನು ಡಿಲೀಟ್​ ಮಾಡುವುದಕ್ಕಾಗಿ ಮೊಬೈಲ್​ ಕಿತ್ತುಕೊಂಡೆ ಎಂದಿದ್ದಾರೆ.
ಉಷಾ ವಿಚಾರಣೆ ಬೆನ್ನಲ್ಲೇ ಅಲೋಕ್​ ಕುಮಾರ್​ ವಿಚಾರಣೆಯು ನಡೆಯಿತು. ಈ ವೇಳೆ ಉಷಾ ಅವರು ಹೇಳಿದ್ದು ಸರಿ ಎಂದು ಅಲೋಕ್​ ಕುಮಾರ್​ ಹೇಳಿದ್ದಾರೆ. ಸದ್ಯ ತನಿಖೆ ಮುಂದುವರಿದಿದೆ.(ಏಜೆನ್ಸೀಸ್​)
ಬೆಳ್ಳಂಬೆಳಗ್ಗೆ ಕಚೇರಿಯಲ್ಲೇ ಉದ್ಯಮಿ ಮೇಲೆ ಗುಂಡಿನ ದಾಳಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 6 =
Remember me
