ನವದೆಹಲಿ:ಸೋದರಸಂಬಂಧಿಯೊಬ್ಬ ಪಾರ್ಕಿನಲ್ಲೇ ಯುವತಿಯ ತಲೆಗೆ ರಾಡ್​ನಿಂದ ಹೊಡೆದು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಷ್ಟ್ರ ರಾಜಧಾನಿ ದೆಹಲಿಯ ಮಾಳವೀಯ ನಗರದಲ್ಲಿ ಶುಕ್ರವಾರ ನಡೆದಿದೆ. ಈ ಘಟನೆ ಜನತೆಗೆ ಆಘಾತಕ್ಕೆ ದೂಡಿದ್ದು, ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸಹ ಈ ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
ಮೃತ ವಿದ್ಯಾರ್ಥಿಯನ್ನು ನಗ್ರೀಸ್​ ಎಂದು ಗುರುತಿಸಲಾಗಿದೆ. ಈಕೆ ಕಮಲ ನೆಗರು ಕಾಲೇಜಿನ ವಿದ್ಯಾರ್ಥಿನಿ. ಪೊಲೀಸರ ಪ್ರಕಾರ ಮದುವೆಗೆ ಒಪ್ಪದಿದ್ದಕ್ಕೆ ಆಕೆಯ ಸೋದರಸಂಬಂಧಿಯಿಂದಲೇ ಹತ್ಯೆಯಾಗಿದ್ದಾಳೆ. ಈ ಘಟನೆ ದೆಹಲಿಯ ಅರಬಿಂದೋ ಕಾಲೇಜಿನ ಸಮೀಪ ಇರುವ ಮಾಳವೀಯ ನಗರದಲ್ಲಿ ನಡೆದಿದೆ. 28 ವರ್ಷದ ಆರೋಪಿ ಇರ್ಫಾನ್​ನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ:ಜಿಲ್ಲೆಯಲ್ಲಿ 2.47 ಗೃಹಲಕ್ಷ್ಮಿಯರ ನೋಂದಣಿ; ಅರ್ಜಿ ಸಲ್ಲಿಕೆಗೆ 536 ಕೇಂದ್ರಗಳು ಲಭ್ಯ; ಹಣ ಪಡೆದರೆ ಕಠಿಣ ಕ್ರಮ, ಡಿಸಿ ಎಚ್ಚರಿಕೆ
ಆರೋಪಿ ಇರ್ಫಾನ್​ ಸ್ವಿಗ್ಗಿ ಆ್ಯಪ್​ನಲ್ಲಿ ಫುಡ್​ ಡೆಲಿವರಿ ಬಾಯ್​ ಆಗಿ ಕೆಲಸ ಮಾಡುತ್ತಿದ್ದ. ಪ್ರಾಥಮಿಕ ತನಿಖೆಯ ಪ್ರಕಾರ ಇರ್ಫಾನ್​ ಸಂಪಾದನೆ ಕಡಿಮೆ ಇರುವುದರಿಂದ ಆತನಿಗೆ ಮದುವೆ ಮಾಡಿಕೊಡಲು ನಗ್ರೀಸ್​ ಕುಟುಂಬ ನಿರಾಕರಿಸಿತು. ಇದರ ಬೆನ್ನಲ್ಲೇ ನಗ್ರೀಸ್​ ಕೂಡ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದಳು. ಇದರಿಂದ ಇರ್ಫಾನ್​ ಅಸಮಾಧಾನಗೊಂಡಿದ್ದ. ಆಕೆ ನಿತ್ಯವೂ ಮಾಳವೀಯ ನಗರದಲ್ಲಿ ಕೋಚಿಂಗ್​ ಕ್ಲಾಸ್​ಗೆ ಹಾಜರಾಗುತ್ತಿದ್ದ ವಿಚಾರ ಇರ್ಫಾನ್​ಗೆ ತಿಳಿದಿತ್ತು. ಅದೇ ದಾರಿಯಲ್ಲಿ ಪಾರ್ಕಿನಲ್ಲಿ ಇಂದು ಆಕೆಯನ್ನು ಇರ್ಫಾನ್​ ಹತ್ಯೆ ಮಾಡಿದ್ದಾನೆ.
ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಇರ್ಫಾನ್​ ಪಾರ್ಕ್​ ತಲುಪಿದ. ಈ ವೇಳೆ ಆತನ ಎದುರಾಗ ನಗ್ರೀಸ್​ಗೆ ಮಾತನಾಡುವ ಬಯಕೆ ವ್ಯಕ್ತಪಡಿಸಿದ. ಆದರೆ, ಆಕೆ ಆತನ ಮಾತು ಕೇಳಲು ನಿರಾಕರಿಸಿದಳು. ಇದರಿಂದ ಕುಪಿತಗೊಂಡ ಇರ್ಫಾನ್​, ನಗ್ರೀಸ್​ ಮೇಲೆ ಕಬ್ಬಿಣದ ಸಲಾಕೆಯಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಮೂರು ದಿನದ ಮುಂಚೆಯೇ ಆಕೆಯನ್ನು ಹತ್ಯೆ ಮಾಡಬೇಕೆಂದು ಪ್ಲಾನ್​ ಮಾಡಿದ್ದೇ ಎಂದು ಇರ್ಫಾನ್​ ಪೊಲೀಸ್​ ತನಿಖೆಯಲ್ಲಿ ಬಾಯ್ಬಿಟ್ಟಿದ್ದಾನೆ.
ಕೊಲೆಯ ಬಗ್ಗೆ ಮಾಹಿತಿ ದೊರೆಯುತ್ತಿದ್ದಂತೆ ದೆಹಲಿ ದಕ್ಷಿಣ ವಿಭಾಗದ ಡೆಪ್ಯೂಟಿ ಪೊಲೀಸ್​ ಕಮಿಷನರ್​ ಮತ್ತು ಹಿರಿಯ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ನಡೆಸಿದರು. ಸ್ಥಳದಲ್ಲಿ ನಗ್ರೀಸ್​ ಮೃತದೇಹದ ಪಕ್ಕದಲ್ಲೇ ಒಂದು ಕಬ್ಬಿಣ ಸಲಾಕೆ ಪತ್ತೆಯಾಯಿತು. ನಗ್ರೀಸ್​ ತಲೆಗೆ ಬಲವಾಗಿ ಹೊಡೆದಿರುವುದರಿಂದ ಸ್ಥಳದಲ್ಲೇ ನಗ್ರೀಸ್​ ಮೃತಪಟ್ಟಿದ್ದಾಳೆ. ಸದ್ಯ ಇರ್ಫಾನ್​ ಬಂಧನವಾಗಿದ್ದು, ವಿಚಾರಣೆ ಮುಂದುವರಿದಿದೆ.
ಇದನ್ನೂ ಓದಿ:ಎಲ್ಲರೂ ಬೇಲಿ ಹಾರುತ್ತಿದ್ದಾರೆ ಎಂದ ಖುಷ್​​ಬೂ; ಉಡುಪಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರು ಹೀಗಂದಿದ್ದೇಕೆ?
ಈ ಘಟನೆಯ ಬಗ್ಗೆ ದೆಹಲಿ ಮಹಿಳಾ ಆಯೋಗದ ಮುಖ್ಯಸ್ಥೆ ಸ್ವಾತಿ ಮಾಲಿವಾಲ್ ಟ್ವೀಟ್​ ಮೂಲಕ​ ಪ್ರತಿಕ್ರಿಯೆ ನೀಡಿದ್ದಾರೆ. ಮಾಳವೀಯ ನಗರದಂತಹ ಐಷಾರಾಮಿ ಏರಿಯಾದಲ್ಲಿ ಯುವತಿಯೊಬ್ಬಳ ಮೇಲೆ ರಾಡ್​ನಿಂದ ಹೊಡೆದು ಹಲ್ಲೆ ಮಾಡಿರುವುದನ್ನು ನೋಡಿದರೆ, ದೆಹಲಿ ಅತ್ಯಂತ ಅಸುರಕ್ಷಿತವಾಗಿದೆ. ಇದು ಯಾರಿಗೂ ಮುಖ್ಯವಲ್ಲ ಎನ್ನುವಂತಾಗಿದೆ. ಕೇವಲ ಪತ್ರಿಕಾ ವರದಿಗಳಲ್ಲಿ ಹುಡುಗಿಯರ ಹೆಸರುಗಳನ್ನು ಬದಲಾಯಿಸಲಾಗುತ್ತದೆ ಹೊರತು ಅಪರಾಧಗಳು ಮಾತ್ರ ದೆಹಲಿಯಲ್ಲಿ ನಿಲ್ಲುತ್ತಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.(ಏಜೆನ್ಸೀಸ್​)
दिल्ली में जहां एक महिला को उसके घर के बाहर गोली मारके उसकी हत्या की गई वहीं दूसरी तरह मालवीय नगर जैसे पॉश इलाक़े में लड़की को रॉड से मारा गया। दिल्ली बेहद असुरक्षित है। किसी को फ़र्क़ नहीं पड़ता। सिर्फ़ अख़बार की खबरों में लड़कियों के नाम बदल जाते हैं, अपराध नहीं रुकते।
— Swati Maliwal (@SwatiJaiHind)July 28, 2023

ಅಂಜು ಗಂಡನ ಬಳಿ ಸೀಮಾ ಬಗ್ಗೆ ಕೇಳಿದ ವರದಿಗಾರ್ತಿ: ಅರವಿಂದ್​ ಕೊಟ್ಟ ಪ್ರತಿಕ್ರಿಯೆ ವೈರಲ್​

ಬಿಜೆಪಿ ಕಾರ್ಯಕರ್ತೆ ಬೆಳಗ್ಗೆ ಬಂಧನ ಸಂಜೆ ಬಿಡುಗಡೆ

ಕೋರ್ಟ್​ ಹಾಲ್​ಗೆ ಪ್ರವೇಶಿಸುತ್ತಿದ್ದಂತೆ ಕುಸಿದು ಬಿದ್ದ ಅಜ್ಜಿ, ಜಿಲ್ಲಾಧಿಕಾರಿಯಿಂದ ಪ್ರಥಮ ಚಿಕಿತ್ಸೆ..

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − 2 =
Remember me
