ದೆಹಲಿ:ಬಾಯ್​​ಫ್ರೆಂಡ್​ ವಿರುದ್ಧ ಸೇಡು ತೀರಿಸಿಕೊಳ್ಳಲು 19 ವರ್ಷದ ಯುವತಿಯೊಬ್ಬಳು ನಕಲಿ ಇನ್ಸ್​ಟಾಗ್ರಾಂ ಖಾತೆ ತೆರೆದು ಆತನ ಸಹೋದರಿ ಹಾಗೂ ಇತರ ಸಂಬಂಧಿಕರಿಗೆ ಆಶ್ಲೀಲ ಚಿತ್ರಗಳನ್ನು ಕಳುಹಿಸಿದ್ದಾಳೆ. ಇದೀಗ ಈಕೆಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ ಎಂದು ವರದಿಯಾಗಿದೆ.
ಯುವತಿ ದೂರವಾದ ಸ್ನೇಹಿತನ ವಿರುದ್ಧ ದ್ವೇಷ ಸಾಧಿಸಲು ಮುಂದಾಗಿದ್ದಾಳೆ. ಇದಕ್ಕಾಗಿ ನಕಲಿ ಇನ್ಸ್​​​ಟಾಗ್ರಾಂ ಖಾತೆಯ ತೆರೆದು ಆತನ ಸಹೋದರಿ ಸೇರಿದಂತೆ ಕೆಲ ಸಂಬಂಧಿಕರಿಗೆ ಆಶ್ಲೀಲ ಚಿತ್ರಗಳು ಹಾಗೂ ಫೋಟೋಗಳನ್ನು ಕಳುಹಿಸುತ್ತಿದ್ದಳು. ಈ ಬಗ್ಗೆ ಯುವಕನ ಸಹೋದರಿ ಪೊಲೀಸ್ ದೂರು ನೀಡಿದ್ದಳು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆಗೆ ಇಳಿದಾಗ, 19 ವರ್ಷದ ಯುವತಿ ಈ ಕೃತ್ಯ ಎಸಗಿರುವುದು ಗೊತ್ತಾಗಿದೆ. ಕೂಡಲೇ ಆಕೆಯನ್ನು ಪೊಲೀಸರು ಬಂಧಿಸಿದ್ದಾರೆ.
A 19-year-old student was apprehended for making fake Instagram profiles & sending obscene pictures & messages to her friend's sister & relatives to take revenge. Incriminating evidence incl mobile phone & sim cards used to send obscene messages were recovered: DCP Northpic.twitter.com/SiLIOJxlyt— ANI (@ANI)February 21, 2023
A 19-year-old student was apprehended for making fake Instagram profiles & sending obscene pictures & messages to her friend's sister & relatives to take revenge. Incriminating evidence incl mobile phone & sim cards used to send obscene messages were recovered: DCP Northpic.twitter.com/SiLIOJxlyt
ಸದ್ಯ ಯುವತಿಯನ್ನು ಹೆಚ್ಚಿನ ತನಿಖೆಗೆ ಒಳಪಡಿಸಿರುವ ಪೊಲೀಸರು, ಈ ಕೃತ್ಯ ಎಸಗಲು ಬಳಸಿದ್ದ ಮೊಬೈಲ್ ಫೋನ್ ಹಾಗೂ ಸಿಮ್ ಕಾರ್ಡ್​ಗಳನ್ನು ವಶ ಪಡಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಘಟನೆಯ ಬಗ್ಗೆ ಉತ್ತರ ದೆಹಲಿ ಉಪ ಪೊಲೀಸ್ ಆಯುಕ್ತ ಸಾಗರ್ ಸಿಂಗ್ ಕಲ್ಸಿ ಪ್ರತಿಕ್ರಿಯಿಸಿ, ಯುವತಿ ಮತ್ತು ಯುವಕ ನಗ್ನವಾಗಿ ಇರುವಂತೆ ಫೋಟೋಗಳನ್ನು ರಚಿಸಿಕೊಂಡು ಆತನ ಸಹೋದರಿಗೆ ಇನ್ಸ್​​ಟಾಗ್ರಾಂ ಮೂಲಕ ಕಳುಹಿಸುತ್ತಿದ್ದಳು. ಇದಲ್ಲದೆ ಆಕೆ ಯುವಕನೊಂದಿಗಿರುವ ಅಶ್ಲೀಲ ಚಿತ್ರಗಳನ್ನು ನಕಲಿ ಖಾತೆಯಲ್ಲಿ ಪೋಸ್ಟ್ ಮಾಡುತ್ತಿದ್ದಳು. ಈ ಬಗ್ಗೆ ನಮಗೆ ದೂರು ಬಂದಿದ್ದು, ತನಿಖೆ ನಡೆಸಿ ಯುವತಿಯನ್ನು ಪತ್ತೆ ಮಾಡಿದ್ದೇವೆ ಎಂದು ಹೇಳಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
