ಪಣಜಿ(ಗೋವಾ):ಕಳ್ಳರು ಸಾಮಾನ್ಯವಾಗಿ ಮೋಜು- ಮಸ್ತಿಗಾಗಿ ಕಳ್ಳತನ ಮಾಡುತ್ತಾರೆ. ಇನ್ನು ಕೆಲವರು ಹಸಿವು ನೀಗಿಸಿಕೊಳ್ಳಲು ಕಳ್ಳತನ ಶುರು ಮಾಡಿ ಬಳಿಕ ಅದನ್ನೇ ರೂಢಿ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಕಳ್ಳ ಬಾಯಿ ಚಪಲ ತೀರಿಸಿಕೊಳ್ಳಲು ಆಪಲ್ ಐಫೋನ್ ಕದ್ದಿದ್ದಾನೆ. ಪಾವ್ ಭಾಜಿಗಾಗಿ ಐಫೋನ್ ಮಾರಾಟ ಮಾಡಿದ್ದಾನೆ.
ಇದನ್ನೂ ನೋಡಿ:ಖ್ಯಾತ ಗಾಯಕಿ ಅನುರಾಧಾ ಪೌಡ್ವಾಲ್ ಬಿಜೆಪಿ ಸೇರ್ಪಡೆ!
ದೆಹಲಿಯ ಕಾರ್ತಿಕೇಯ್ ಗೋವಾಕ್ಕೆ ಹೋಗಿದ್ದ. ಅಲ್ಲಿ ಅಂಗಡಿಯೊಂದರಲ್ಲಿ ಮಾದಕ ವಸ್ತು ಸೇವಿಸಿದ ಬಳಿಕ ಮತ್ತೇರಿಸಿಕೊಂಡು ನೆಲದ ಮೇಲೆ ಪರಿವೇ ಇಲ್ಲದಂತೆ ಬಿದ್ದಿದ್ದಾನೆ.
ಅವನ ಜೇಬಿನಲ್ಲಿ ಫೋನ್ ಹೊಳೆಯುತ್ತಿತ್ತು. ಅದನ್ನು ಗಮನಿಸಿದ ಕಳ್ಳನೊಬ್ಬ ಹೊಂಚು ಹಾಕಿ ನಿಧಾನವಾಗಿ ಆತನ ಜೇಬಿನಿಂದ ಐಫೋನ್ ಕದ್ದಿದ್ದಾನೆ.
ಕಾರ್ತಿಕೇಯ್ ಎಚ್ಚೆತ್ತು ನೋಡಿದಾಗ ತನ್ನ ಫೋನ್ ಕದ್ದಿರುವುದು ಕಂಡುಬಂದಿದೆ. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಕೊನೆಗೆ ಪೊಲೀಸರಿಗೆ ದೂರು ನೀಡಿದ್ದಾನೆ.
ಇತ್ತ ಐಫೋನ್ ಕಳ್ಳನಿಗೆ ಪಾವ್ ಭಾಜಿ ತಿನ್ನುವ ಬಯಕೆ ಮೂಡಿದೆ. ಬಳಿಕ ಆತ ಪಾವ್ ಭಾಜಿ ಅಂಗಡಿ ಬಳಿ ಹೋಗಿ ತನ್ನ ಬಳಿಯಿದ್ದ ಕದ್ದ ಐಫೋನ್ ಕೊಟ್ಟು ಪಾವ್ ಭಾಜಿ ತಿಂದು ಹೋಗಿದ್ದಾನೆ.
ಅಂಗಡಿ ಮಾಲಿಕ ಸುಲಭವಾಗಿ ಐ ಫೋನ್​ ಸಿಕ್ಕ ಖುಷಿಯಲ್ಲಿ ಸ್ವಲ್ಪ ದಿನ ಫೋನ್ ಸ್ವಿಚ್ ಆಫ್​ ಮಾಡಿ ಬಳಿಕ ಉಪಯೋಗಿಸುವುದೆಂದು ತೀರ್ಮಾನಿಸಿದ್ದಾನೆ.
ಒಂದೆರಡು ಗಂಟೆ ಕಳೆದ ಬಳಿಕ ಮತ್ತೆ ಆನ್ ಮಾಡಿದ್ದಾನೆ. ತಕ್ಷಣ ಮೊಬೈಲ್ ಗೆ ಕರೆಯೊಂದು ಬಂದಿದೆ. ಫೋನ್ ಕೈಗೆತ್ತಿಕೊಂಡಾಗ ಪೊಲೀಸರ ಕಾಲ್​ ಅದಾಗಿತ್ತು.
ಅಂಗಡಿ ಮಾಲೀಕ ನಡೆದಿದ್ದನ್ನೆಲ್ಲ ಹೇಳಿದ್ದಾನೆ. ಕೊನೆಗೆ ಪೊಲೀಸ್​ ಠಾಣೆಗೆ ಫೋನ್ ಅನ್ನು ಒಪ್ಪಿಸಿದ್ದಾನೆ. ಪೊಲೀಸರು ಅದರ ಮಾಲೀಕನಿಗೆ ತಲುಪಿಸಿದ್ದಾರೆ.
ಕೊನೆಗೆ ಪೊಲೀಸರಿಗೆ ಗೊತ್ತಾಗಿದ್ದೇನೆಂದರೆ ಫೋನ್ ಮಾರಾಟ ಮಾಡಿದ ವ್ಯಕ್ತಿಯು ಹುಚ್ಚನೆಂದು. ಆದರೆ ಪಾವ್ ಭಾಜಿ ಕೊಟ್ಟು ಫೋನ್ ಗೆ ಆಸೆಪಟ್ಟ ಅಂಗಡಿ ಮಾಲಿಕ ಇಂಗುತಿಂದ ಮಂಗನಂತಾಗಿದ್ದಾನೆ. ಇದೀಗ ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
‘ಯಾವ ಭ್ರಷ್ಟ ವ್ಯಕ್ತಿಯೂ ತಪ್ಪಿಸಿಕೊಳ್ಳುವುದಿಲ್ಲ’ ಬಿಆರ್‌ಎಸ್ ನಾಯಕಿ ಕವಿತಾ ಬಂಧನಕ್ಕೆ ಪ್ರಧಾನಿ ಮೋದಿ ಪ್ರತಿಕ್ರಿಯೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 13 =
Remember me
