ನವದೆಹಲಿ:ದೆಹಲಿಯಲ್ಲಿ ವಾಯುಮಾಲಿನ್ಯ ಅಪಾಯದ ಮಟ್ಟ ಮೀರಿದ್ದು, ಅಗತ್ಯ ಇದೆ ಎಂದಾದರೆ ಎರಡು ದಿನಗಳ ಮಟ್ಟಿಗೆ ಲಾಕ್​ಡೌನ್ ಮಾಡಿ ಪರಿಸ್ಥಿತಿ ನಿಯಂತ್ರಿಸಲು ಪ್ರಯತ್ನಿಸಿ ಎಂದು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಶನಿವಾರ ಸಲಹೆ ನೀಡಿದೆ. ದೆಹಲಿಯ ವಾಯು ಗುಣಮಟ್ಟ ಶನಿವಾರ ಬೆಳಗ್ಗೆ ‘ಸಿವಿಯರ್’ ಕೆಟಗರಿಗೆ ಇಳಿದಿದ್ದು, ಎಕ್ಯೂಐ (ಏರ್ ಕ್ವಾಲಿಟಿ ಇಂಡೆಕ್ಸ್) 473 ದಾಖಲಾಗಿದೆ. ನೋಯ್ಡಾ, ಗುರುಗ್ರಾಮಗಳಲ್ಲಿ ಎಕ್ಯೂಐ ಅನುಕ್ರಮವಾಗಿ 587, 557 ದಾಖಲಾಗಿದೆ.
ದೆಹಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗುತ್ತಿರುವ ಬಗ್ಗೆ ಕಳವಳ ವ್ಯಕ್ತಪಡಿಸಿ 17 ವರ್ಷದ ವಿದ್ಯಾರ್ಥಿ ದಾವೆ ಹೂಡಿದ್ದರು. ಇದರ ವಿಚಾರಣೆ ನಡೆಸುತ್ತಿದ್ದ ವೇಳೆ ಸುಪ್ರೀಂ ಕೋರ್ಟ್​ನ ಮುಖ್ಯ ನ್ಯಾಯಮೂರ್ತಿ ಎನ್.ವಿ. ರಮಣ, ನ್ಯಾಯಮೂರ್ತಿಗಳಾದ ಡಿ.ವೈ.ಚಂದ್ರಚೂಡ, ಸೂರ್ಯ ಕಾಂತ ಅವರನ್ನು ಒಳಗೊಂಡ ನ್ಯಾಯಪೀಠ ಈ ಸಲಹೆ ನೀಡಿದೆ. ದೆಹಲಿಯಲ್ಲಿ ವಾಯು ಗುಣಮಟ್ಟ ‘ಸಿವಿಯರ್’ ಕೆಟಗರಿಯಲ್ಲಿದೆ. ಇದು ಒಂದೆರಡು ದಿನ ಕಳೆದರೆ ಇನ್ನೂ ಕೆಳಕ್ಕೆ ಕುಸಿಯಬಹುದು. ಎಕ್ಯೂಐ ಅನ್ನು 500ರಿಂದ 200ಕ್ಕೆ ನಾವು ಹೇಗೆ ಇಳಿಸಬಹುದು ಎಂಬುದನ್ನು ನಮಗೂ ತಿಳಿಸಿ. ತುರ್ತಾಗಿ ಕೆಲವು ಕ್ರಮಗಳನ್ನು ತೆಗೆದುಕೊಳ್ಳಿ. ಎರಡು ದಿನಗಳ ಲಾಕ್​ಡೌನ್ ಅಥವಾ ಬೇರೇನಾದರೂ ಕ್ರಮ ತೆಗೆದುಕೊಳ್ಳಬಹುದಾ? ಜನ ಬದುಕುವುದು ಹೇಗೆ ಹೇಳಿ ಎಂದು ಸರ್ಕಾರವನ್ನು ನ್ಯಾಯಪೀಠ ಪ್ರಶ್ನಿಸಿದೆ. ದೀರ್ಘಾವಧಿಯ ಪರಿಹಾರ ಕ್ರಮವನ್ನು ಈಗಲೇ ನಾವು ಬಯಸುತ್ತಿಲ್ಲ ಎಂದೂ ನ್ಯಾಯಪೀಠ ಸ್ಪಷ್ಟಪಡಿಸಿತು.
ಇದಕ್ಕೂ ಮುನ್ನ, ವಾಯುಮಾಲಿನ್ಯ ತಡೆಯುವುದಕ್ಕೆ ಯಾವೆಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂಬುದರ ವಿವರವನ್ನು ಅಫಿಡವಿಟ್ ಮೂಲಕ ಸಲ್ಲಿಸುವಂತೆ ಕೇಂದ್ರ ಹಾಗೂ ದೆಹಲಿ ಸರ್ಕಾರಗಳಿಗೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಸೋಮವಾರಕ್ಕೆ ಮುಂದೂಡಿಕೆ ವಾಯುಮಾಲಿನ್ಯ ತಡೆಗೆ ತುರ್ತಾಗಿ ತೆಗೆದುಕೊಂಡ ಕ್ರಮಗಳ ಬಗ್ಗೆ ಸೋಮವಾರ ವಿವರಗಳನ್ನು ಕೋರ್ಟ್​ಗೆ ಸಲ್ಲಿಸಬೇಕು ಎಂದು ನ್ಯಾಯಪೀಠ ಹೇಳಿದೆ. ಅಲ್ಲದೆ, ಈ ಪ್ರಕರಣದ ವಿಚಾರಣೆಯನ್ನು ಕೂಡ ಸೋಮವಾರಕ್ಕೆ ಮುಂದೂಡಿದೆ.
ದೆಹಲಿ ಸರ್ಕಾರಕ್ಕೆ ಸೂಚನೆ:ಎರಡು ವಾರದ ಹಿಂದಷ್ಟೆ ನೀವು ಶಾಲೆ ತೆರೆದಿದ್ದೀರಿ. ಎಲ್ಲ ಮಕ್ಕಳೂ ಈ ಅಪಾಯಕಾರಿ ಮಾಲಿನ್ಯದ ವಾಯುವಿಗೆ ತೆರೆದುಕೊಂಡಿದ್ದಾರೆ. ಪಟಾಕಿ ಮೇಲೆ ನಿಷೇಧ ಹೇರಿದಿರಿ. ಆದರೆ ಕಳೆದ 5-6 ದಿನಗಳಲ್ಲಿ ವಾಯು ಗುಣಮಟ್ಟಕ್ಕೆ ಏನಾಯಿತು? ದೆಹಲಿಯಲ್ಲಿ ವಿವಿಧೆಡೆ ಸ್ಮಾಗ್ ಟವರ್​ಗಳನ್ನು ಸ್ಥಾಪಿಸುವುದು ಮತ್ತು ಮಾಲಿನ್ಯ ನಿಯಂತ್ರಣ ಯೋಜನೆಗಳನ್ನು ಜಾರಿಗೊಳಿಸುವುದಕ್ಕೆ ಅಗತ್ಯ ನಿರ್ಣಯಗಳನ್ನು ಕೂಡಲೇ ತೆಗೆದುಕೊಳ್ಳಬೇಕು ಎಂದು ದೆಹಲಿ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಶನಿವಾರ ಸೂಚಿಸಿದೆ.
ಸರ್ಕಾರ ತಿಳಿಸಿದ್ದೇನು?:ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಕೋರ್ಟ್​ನಲ್ಲಿ ಇದ್ದರು. ವಾಯು ಮಾಲಿನ್ಯ ಕುರಿತು ಸರ್ಕಾರ ಶನಿವಾರ ಸಂಜೆಯೊಳಗೆ ತುರ್ತು ಸಭೆ ನಡೆಸಲಿದೆ. ಅದರಲ್ಲಿ ಅಗತ್ಯ ನಿರ್ಣಯಗಳನ್ನು ಸರ್ಕಾರ ತೆಗೆದುಕೊಳ್ಳಲಿದೆ. ಕಳೆ ಸುಡದಂತೆ ತಡೆಯಲು ನಾವು ಕ್ರಮ ತೆಗೆದುಕೊಳ್ಳುತ್ತಿದ್ದೇವೆ. ಆದರೆ, ಕಳೆದ ಐದಾರು ದಿನಗಳಲ್ಲಿ ಕಂಡು ಬಂದ ಮಾಲಿನ್ಯಕ್ಕೆ ಪಂಜಾಬ್​ನಲ್ಲಿ ಕಳೆ ಸುಡುತ್ತಿರುವುದೇ ಕಾರಣ ಎಂದು ಮೆಹ್ತಾ ಕೋರ್ಟ್​ಗೆ ತಿಳಿಸಿದರು.
ದೆಹಲಿಯಲ್ಲಿ ಶಾಲೆಗಳು ಬಂದ್:ಸುಪ್ರೀಂ ಕೋರ್ಟ್ ಅಭಿಪ್ರಾಯ ಹೊರಬೀಳುತ್ತಿದ್ದಂತೆ ದೆಹಲಿ ಸರ್ಕಾರ ಹಲವು ಕ್ರಮಗಳನ್ನು ಪ್ರಕಟಿಸಿದೆ. ಶಾಲೆಗಳನ್ನು ಒಂದು ವಾರ ಸ್ಥಗಿತಗೊಳಿಸುವ ನಿರ್ಧಾರ ಕೈಗೊಳ್ಳಲಾಗಿದ್ದು, ಆನ್​ಲೈನ್ ಮೂಲಕ ಪಾಠ ನಡೆಯಲಿದೆ. ಬಹುತೇಕ ಸರ್ಕಾರಿ ನೌಕರರಿಗೆ ವರ್ಕ್ ಫ್ರಂ ಹೋಮ್ ನೀಡಲಾಗಿದೆ. ಹೆಚ್ಚಿನ ಮಾಲಿನ್ಯ ಮಾಡುವ ಕಟ್ಟಡ ನಿರ್ಮಾಣ ಕಾಮಗಾರಿಗಳನ್ನು ತಾತ್ಕಾಲಿಕವಾಗಿ ಸ್ಥಗಿತ ಮಾಡುವಂತೆ ಸಿಎಂ ಕೇಜ್ರಿವಾಲ್ ಆದೇಶ ಹೊರಡಿಸಿದ್ದಾರೆ.
ನ್ಯಾಯಪೀಠ ಹೇಳಿದ್ದು:

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − ten =
Remember me
