ನವದೆಹಲಿ:ಕರೊನಾ ಸೋಂಕು ಎಷ್ಟೋ ವೈದ್ಯರ ಬಾಳನ್ನು ಅಕ್ಷರಶಃ ನರಕ ಮಾಡಿಬಿಟ್ಟಿದೆ. ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡು ಸೋಂಕು ಪೀಡಿತರಾಗಿ ತಮ್ಮ ಜೀವವನ್ನೇ ಕೆಲ ವೈದ್ಯರು ತೊರೆದಿದ್ದರೆ, ಇನ್ನು ಕೆಲವರು ಸೋಂಕು ಹಿಡಿಸಿಕೊಂಡು ನರಳಾಡುತ್ತಿದ್ದಾರೆ.
ಇಂಥ ಪರಿಸ್ಥಿತಿಯಲ್ಲಿ ಕರೊನಾ ಗೆದ್ದು ಬಂದ ವೈದ್ಯೆಯೊಬ್ಬಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಛೀಮಾರಿ ಹಾಕಿರುವ ಘಟನೆ ದೆಹಲಿಯಲ್ಲಿ ನಡೆದಿದೆ! ಹಗಲು ರಾತ್ರಿ ದುಡಿದು, ತನ್ನವರು, ತಮ್ಮ ಕುಟುಂಬದವರಿಂದ ದೂರವಾಗಿ, ಜೀವದ ಹಂಗನ್ನು ತೊರೆದು ವೈರಸ್​ ತಗುಲಿಸಿಕೊಂಡು, ಈಗ ಗುಣಮುಖರಾಗಿ ಮನೆಗೆ ಒಂದ ಒಂಟಿ ವೈದ್ಯೆ ಈಗ ಅಕ್ಕಪಕ್ಕದವರ ಮನೆಯವರ ಚುಚ್ಚು ಮಾತಿನಿಂದ ಜರ್ಜರಿತರಾಗಿ ಹೋಗಿದ್ದಾರೆ.
ಇದನ್ನೂ ಓದಿ:ಒಬ್ಬ ಭಯೋತ್ಪಾದಕ ಕಥಮ್​- 10 ಉಗ್ರರ ಲಿಸ್ಟ್​ ರೆಡಿ: ಬೇಟೆಗೆ ಭಾರತೀಯ ಯೋಧರು ಸಜ್ಜು
ದೆಹಲಿಯ ಪೊಲೀಸ್ ಲೈನ್ ಆಸ್ಪತ್ರೆಯಲ್ಲಿ ಸೀನಿಯರ್ ರೆಸಿಡೆಂಟ್ ಡಾಕ್ಟರ್ ಆಗಿರುವ ಈ ವೈದ್ಯೆಗೆ, ಕರೊನಾ ಸೋಂಕಿತರ ವಾರ್ಡ್​ಗೆ ಶಿಫ್ಟ್​ ಮಾಡಲಾಗಿತ್ತು. ಅಲ್ಲಿ ಸೋಂಕಿತರ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಇವರಿಗೆ ಸೋಂಕು ತಗುಲಿತ್ತು. ವಾರಗಳ ಕಾಲ ಐಸೋಲೇಷನ್ ವಾರ್ಡ್​ನಲ್ಲಿದ್ದು ಚಿಕಿತ್ಸೆ ಪಡೆದ ಇವರು ನಿನ್ನೆ (ಮೇ 13)ಡಿಸ್ಚಾರ್ಜ್ ಆಗಿ ಮನೆಗೆ ತೆರಳಿದರು. ‘ಸತತ ಎರಡು ಪರೀಕ್ಷೆಗಳಲ್ಲಿ ನೆಗೆಟಿವ್ ಎಂದು ಕಂಡುಬಂದ ಮೇಲೆಯೇ ಇವರಿಗೆ ಡಿಸ್ಚಾರ್ಜ್ ಮಾಡಲಾಗಿದೆ.
ಸೋಂಕಿನಿಂದ ಗುಣಮುಖರಾಗಿರುವ ಖುಷಿಯಲ್ಲಿ ದೆಹಲಿಯ ವಸಂತ್ ಕುಂಜ್ ನಲ್ಲಿರುವ ತಮ್ಮ ಮನೆಗೆ ಇವರು ವಾಪಸಾಗಿದ್ದಾರೆ. ಆದರೆ ಅವರು ಮನೆಯ ಸಮೀಪ ಬರುತ್ತಿದ್ದಂತೆಯೇ ಅಕ್ಕ-ಪಕ್ಕದ ಮನೆಯವರು ನಿಂದಿಸಿದ್ದಾರೆ. ಕರೊನಾ ಕರೊನಾ ಎಂದು ಛೀಮಾರಿ ಹಾಕಿದ್ದಾರೆ!
ಇದನ್ನೂ ಓದಿ:VIDEO: ಅಬ್ಬಬ್ಬಾ ಏನು ಗತ್ತು! ಕರೊನಾ ಪಾಠಕ್ಕೆ ಪೊಲೀಸರ​ ಜತೆ ಹೊರಟಿತಲ್ಲ ಈ ಮರಿ ಆಡು… ವೀಡಿಯೋ ವೈರಲ್​
”ನಾನು ಸಂಪೂರ್ಣವಾಗಿ ಗುಣಮುಖನಾಗಿದ್ದೇನೆ” ಎಂದು ವೈದ್ಯೆ ಎಷ್ಟೇ ಹೇಳಿದರೂ ಕೇಳದ ಅಕ್ಕಪಕ್ಕದವರು, ”ಮನೆಯಿಂದ ಆಚೆ ಹೇಗೆ ಕಾಲಿಡ್ತಿಯಾ ಅಂತ ನಾನೂ ನೋಡ್ತೀನಿ. ನೀನು ಈ ಜಾಗದಲ್ಲಿ ಇರಲೇಬಾರದು. ಯಾರಿಗೆ ಬೇಕಾದರೂ ದೂರು ಕೊಡು” ಎಂದು ಬೆದರಿಕೆ ಕೂಡ ಹಾಕಿದ್ದಾರೆ.
ಮನೆಯಲ್ಲಿ ಒಂಟಿಯಾಗಿ ವಾಸ ಮಾಡುವ ವೈದ್ಯೆ ಬೇರೆ ದಾರಿ ಇಲ್ಲದೆ, ಪೊಲೀಸ್ ಠಾಣೆಗೆ ಹೋಗಿ ದೂರು ನೀಡಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten + 18 =
Remember me
