ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಮೂರು ದಿನ ನಡೆದ ಹಿಂಸಾಚಾರದಲ್ಲಿ ಅಂದಾಜು 79 ಮನೆಗಳು, 52 ಅಂಗಡಿ, 5 ಗೋದಾಮು, 3 ಕಾರ್ಖಾನೆ, 4 ಮಸೀದಿಗಳು ಹಾಗೂ 500 ವಾಹನಗಳು ಬೆಂಕಿಗೆ ಆಹುತಿಯಾಗಿವೆ ಎಂದು ದೆಹಲಿ ಅಗ್ನಿಶಾಮಕ ಸೇವೆಗಳ ಮುಖ್ಯಸ್ಥ ಅತುಲ್ ಗರ್ಗ್ ಹೇಳಿದ್ದಾರೆ.
ಗಲಭೆಯಲ್ಲಿ 38 ಮಂದಿ ಮೃತಪಟ್ಟು 350ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಗಲಭೆ ವೇಳೆ ದೆಹಲಿ ಅಗ್ನಿಶಾಮಕ ಠಾಣೆಗೆ 218 ಕರೆಗಳು ಬಂದಿದ್ದು, ಬಹುತೇಕ ಎಲ್ಲ ಕರೆಗಳಿಗೆ ಸ್ಪಂದಿಸಲಾಗಿದೆ ಎಂದು ಅವರು ತಿಳಿಸಿದರು.
ಈಶಾನ್ಯ ದೆಹಲಿಯ ಖಜೂರಿ ಬಳಿಯ ಕಟ್ಟಡದಲ್ಲಿ ವೃದ್ಧೆಯ ದೇಹ ಪತ್ತೆಯಾಗಿದೆ. ಗಲಭೆಕೋರರು ಮನೆಗೆ ಬೆಂಕಿ ಹಚ್ಚಿದಾಗ ವೃದ್ಧೆ ಮನೆಯಿಂದ ಹೊರ ಬರಲಾದರೆ ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎಂದು ಅವರು ಹೇಳಿದರು.
ಕಟ್ಟಡ ಹಾಗೂ ವಾಹನಗಳಿಗೆ ಸೀಮೆಎಣ್ಣೆ ಹಾಗೂ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಲಾಗಿದೆ. ಬೆಂಕಿಗೆ ತುತ್ತಾದ ಅಂಗಡಿ ಹಾಗೂ ಕಟ್ಟಡಗಳನ್ನು ಮುಚ್ಚಲಾಗಿದೆ. ಮಂಗಳವಾರ ಅಧಿಕ ಅಗ್ನಿ ಅನಾಹುತಗಳು ಕಂಡು ಬಂದಿವೆ ಎಂದು ಅವರು ಹೇಳಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
