ನವದೆಹಲಿ: ಈಶಾನ್ಯ ದೆಹಲಿಯಲ್ಲಿ ಸಿಎಎ ವಿರೋಧಿಸಿ ನಡೆದ ಹಿಂಸಾತ್ಮಕ ಪ್ರತಿಭಟನೆ ವೇಳೆ ಪೊಲೀಸ್ ಪೇದೆ ದೀಪ್ ದಹಿಯಾ ಮೇಲೆ ಪಿಸ್ತೂಲ್​ನಿಂದ ಗುಂಡು ಹಾರಿಸಿದ ಶಾರುಕ್​ ಉತ್ತರ ಪ್ರದೇಶದಲ್ಲಿ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ದೆಹಲಿಯ ಮೌಜ್​ಪುರದಲ್ಲಿ ಫೆ.24ರಂದು ನಡೆದ ಹಿಂಸಾಚಾರದ ವೇಳೆ ಶಾರುಕ್ ಈ ಕೃತ್ಯವೆಸಗಿದ್ದ. ಇದು ದೇಶದ ಗಮನಸೆಳೆದಿತ್ತು. ಮೌಜ್​ಪುರ ಚೌಕ್ ಸಮೀಪ ಇದ್ದ 3ನೇ ಬೆಟಾಲಿಯನ್​ನ ಹವಿಲ್ದಾರ್​ ದೀಪಕ್​ ದಹಿಯಾ ಎದುರಿಗೆ ಆಗಮಿಸಿದ ಶಾರುಕ್ ನೇರವಾಗಿ ಅವರ ಎದೆಗೇ ಪಿಸ್ತೂಲ್ ಇರಿಸಿದ್ದ. ಈ ಹಿಂಸಾಚಾರದೇ ವೇಳೆ ಶಾರುಕ್ ತನ್ನ ಪಿಸ್ತೂಲ್​ನಿಂದ ಏಳು ಬುಲೆಟ್ ಹಾರಿಸಿದ್ದ ಎಂಬುದಕ್ಕೆ ಸಾಕ್ಷ್ಯಗಳು ಸಿಕ್ಕಿವೆ.
ಪ್ರಾಥಮಿಕ ಮಾಹಿತಿ ಪ್ರಕಾರ, ದೆಹಲಿ ಅಪರಾಧ ದಳದ ಪೊಲೀಸರು ಶಾರುಕ್​ನನ್ನು ಉತ್ತರ ಪ್ರದೇಶದ ಬರೇಲಿಯಲ್ಲಿ ಪತ್ತೆ ಹಚ್ಚಿ ಬಂಧಿಸಿದ್ದಾರೆ. ಶಾರುಕ್​ನ ಪತ್ತೆಗಾಗಿ ವಿಶೇಷ ಘಟಕವನ್ನು ರಚಿಸಲಾಗಿತ್ತು. ದೆಹಲಿ, ಪಂಜಾಬ್​, ಉತ್ತರ ಪ್ರದೇಶದ ಪೊಲೀಸರ ತಂಡ ಇದಾಗಿತ್ತು. ಈ ವಿಶೇಷ ಘಟಕ ಬರೇಲಿಯಲ್ಲಿ ಕಳೆದ ಆರು ದಿನಗಳಿಂದ ಬೀಡು ಬಿಟ್ಟು ಈತನ ಚಲನವಲನಗಳನ್ನು ಗಮನಿಸಿತ್ತು. ಪಂಜಾಬ್​ನ ಮುಜಫರ್​ನಗರ, ಕೈರಾನಾಗಳಲ್ಲೂ ಈ ತಂಡ ಶಾರುಕ್​ಗಾಗಿ ತಲಾಶ್ ನಡೆಸಿತ್ತು. ಶಾರುಕ್​ನ ಮನೆ ಮಂದಿಯೂ ತಲೆಮರೆಸಿಕೊಂಡಿದ್ದಾರೆ.
ಶಾರುಕ್​ ಮನೆ ಉಸ್ಮಾನ್ ಪುರದ ಅರವಿಂದ ನಗರದ ಸ್ಟ್ರೀಟ್​ ನಂಬರ್​ 5U-108ನಲ್ಲಿದ್ದು, ಸದ್ಯ ಬೀಗ ಜಡಿದಿದೆ. ಶಾರುಕ್ ತಂದೆ ಶವರ್ ಪಠಾನ್​ 1985ರಲ್ಲಿ ಇಲ್ಲಿ ಬಂದು ನೆಲೆಸಿದ್ದು, ಆತ ಡ್ರಗ್ ಮಾಫಿಯಾಕ್ಕೋಸ್ಕರ ಕೆಲಸ ಮಾಡುತ್ತಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. (ಏಜೆನ್ಸೀಸ್)
Shahrukh, the man in red t-shirt who had opened fire at police during violence in North East Delhi on 24th February, has been arrested by Delhi Police Crime Branch from Uttar Pradesh.pic.twitter.com/aSCcTKolkc
— ANI (@ANI)March 3, 2020

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 − ten =
Remember me
