ನವದೆಹಲಿ:ಈಶಾನ್ಯ ದೆಹಲಿಯಲ್ಲಿ ನಡೆದ ಹಿಂಸಾಚಾರ ಪ್ರಕರಣ ವಿಚಾರಣೆ ನಡೆಸುತ್ತಿರುವ ದೆಹಲಿ ಹೈಕೋರ್ಟ್​, ಬಿಜೆಪಿ ನಾಯಕ ಕಪಿಲ್​ ಮಿಶ್ರಾ ಅವರು ಮಾತನಾಡಿರುವ ದ್ವೇಷ ಭಾಷಣದ ವಿಡಿಯೋ ಸಲ್ಲಿಸುವಂತೆ ಸೂಚಿಸಿದೆ.
ಈಶಾನ್ಯ ದೆಹಲಿಯಲ್ಲಿ ಸಂಭವಿಸಿದ ಹಿಂಸಾಚಾರ ಪ್ರಕರಣ ಕುರಿತು ನಿವೃತ್ತ ಅಧಿಕಾರಿ ಹರ್ಷ ಮಾಂಡರ್​ ಎಂಬುವವರ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್​ ಭಾಷಣದ ವಿಡಿಯೋ ಸಲ್ಲಿಸುವಂತೆ ದೆಹಲಿ ಪೊಲೀಸರಿಗೆ ಸೂಚಿಸಿತು.
ದೆಹಲಿ ಪೊಲೀಸರ ಪರ ವಾದ ಮಂಡಿಸಿದ ಸಾಲಿಟರ್​ ಜನರಲ್​ ವಿಚಾರಣೆಯನ್ನು ನಾಳೆಗೆ ಮುಂದೂಡಬೇಕು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಮುರಳೀಧರ್ ನಿಮಗೆ ಗಲಭೆ ನಡೆದಿರುವುದು ತುರ್ತು ಎನಿಸುವುದಿಲ್ಲವೆ. ಅಪರಾಧಿಗಳ ವಿರುದ್ಧ ಎಫ್​ಐಆರ್​ ದಾಖಲಿಸುವುದು ತುರ್ತು ಅಲ್ಲವೆ ಎಂದು ಅವರನ್ನು ಪ್ರಶ್ನಿಸಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಅರ್ಜಿದಾರರ ಪರ ವಕೀಲ ರಾಹುಲ್ ಮೆಹ್ರಾ, ಗಲಭೆ ನಡೆಯುವುದಕ್ಕೆ ಮುಂಚೆ ಬಿಜೆಪಿ ನಾಯಕ ಕಪಿಲ್​ ಮಿಶ್ರಾ ಅವರು ಹೇಳಿರುವ ಉದ್ರೇಕಕಾರಿ ಹೇಳಿಕೆಯನ್ನು ಕೋರ್ಟ್​ ಗಮನಕ್ಕೆ ತಂದರು.
ವಿಚಾರಣೆಯಲ್ಲಿ ಇದ್ದ ಪೊಲೀಸರು ಆ ಹೇಳಿಕೆ ನೀಡಿರುವುದು ಕಪಿಲ್ ಮಿಶ್ರಾ ಅಲ್ಲ ಎಂದು ತಿಳಿಸಿದರು. ಈ ಹೇಳಿಕೆಗೆ ಸಿಡಿಮಿಡಿಗೊಂಡ ನ್ಯಾಯಮೂರ್ತಿಗಳು ದೆಹಲಿ ಪೊಲೀಸರ ನಡತೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:10 − five =
Remember me
