ನವದೆಹಲಿ:ಆಮ್​ ಆದ್ಮಿ ಪಕ್ಷದ ಅರವಿಂದ್​ ಕೇಜ್ರಿವಾಲ್​ ಅವರು ಮುಂದಿನ ಅವಧಿಗೆ ಮುಖ್ಯಮಂತ್ರಿಯಾಗಲಿದ್ದಾರೆ. ಇನ್ನೂ ಕೆಲವು ಕಡೆ ಮತ ಎಣಿಕೆ ಬಾಕಿ ಇದ್ದರೂ ದೆಹಲಿ ಜನರ ಒಲವು ಆಪ್​ ಕಡೆಗೆ ಇದೆ ಎಂಬುದು ಇಲ್ಲಿಯವರೆಗಿನ ಟ್ರೆಂಡ್​ನಲ್ಲಿ ಸ್ಪಷ್ಟವಾಗಿದೆ.
ಈ ಮಧ್ಯೆ ಆಮ್​ ಆದ್ಮಿ ಪಕ್ಷವನ್ನು ಸತತ ಮೂರನೇ ಬಾರಿಗೆ ಗೆಲ್ಲಿಸುತ್ತಿರುವ ದೆಹಲಿ ಜನರಿಗೆ ಅರವಿಂದ್​ ಕೇಜ್ರಿವಾಲ್​ ಧನ್ಯವಾದ ಹೇಳಿದ್ದಾರೆ.
ತಮ್ಮ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಅವರು, ರಾಜಕೀಯದಲ್ಲಿ ಹೊಸ ಯುಗ ಪ್ರಾರಂಭವಾಗುತ್ತಿದೆ ಎಂದು ದೆಹಲಿಯ ಜನರು ತೋರಿಸಿದ್ದಾರೆ ಎಂದು ಹೇಳಿದರು. ಭಾರತ್​ ಮಾತಾ ಕೀ ಜೈ, ವಂದೇ ಮಾತರಂ, ಇಂಕ್ವಿಲಾಬ್ ಜಿಂದಾಬಾದ್​ ಎಂಬ ಘೋಷಣೆಗಳನ್ನು ಕೂಗಿದರು.
ದೆಹಲಿಯ ಜನರೇ ಐ ಲವ್​ ಯೂ (ನಾನು ನಿಮ್ಮನ್ನು ಪ್ರೀತಿಸುತ್ತೇನೆ) ಎಂದು ಹೇಳುತ್ತ ಅವರೆಡೆಗೆ ಮುತ್ತೊಂದನ್ನು ಗಾಳಿಯಲ್ಲಿ (Flying Kiss) ತೇಲಿಬಿಟ್ಟರು.
ಆಮ್​ ಆದ್ಮಿ ಪಕ್ಷದ ಮೇಲೆ ನಂಬಿಕೆಯಿಟ್ಟು ಮತ್ತೊಮ್ಮೆ ಗೆಲ್ಲಿಸಿದ ದೆಹಲಿಯ ಜನರಿಗೆ ಕೃತಜ್ಞತೆಗಳು. ನನ್ನನ್ನು ದೆಹಲಿಯ ಪುತ್ರನೆಂದು ಭಾವಿಸಿ, ಮತ ಹಾಕಿದ ಪ್ರತಿಯೊಬ್ಬರಿಗೂ ಈ ಗೆಲುವು ಸಲ್ಲುತ್ತದೆ. ಅಷ್ಟೇ ಅಲ್ಲದೆ ಇದು ಬರಿಯ ದೆಹಲಿಯ ಗೆಲುವಲ್ಲ, ಇಡೀ ದೇಶದ್ದು ಎಂದು ಹೇಳಿದರು.
ಇದೇ ವೇಳೆ ಅರವಿಂದ್ ಕೇಜ್ರಿವಾಲ್ ಅವರು ಆಂಜನೇಯ (ಹನುಮಂತ ದೇವರು)ನಿಗೂ ಕೃತಜ್ಞತೆ ಹೇಳಿದರು. ಇನ್ನು ಐದು ವರ್ಷಗಳ ಕಾಲ ದೆಹಲಿಯ ಜನರ ಸೇವೆ ಮಾಡಲು ನಮಗೆ ಸರಿಯಾದ ಮಾರ್ಗ ತೋರಿಸು ಎಂದು ನಾನು ಹನುಮಂತನಲ್ಲಿ ಬೇಡಿಕೊಳ್ಳುತ್ತೇನೆ ಎಂದು ಹೇಳಿದರು. ಅಲ್ಲದೆ, ಆ ದೇವರೇ ನನಗೆ ಆಶೀರ್ವಾದ ಮಾಡಿದ್ದಾನೆ ಎಂದರು.
ದೆಹಲಿ ಚುನಾವಣೆಗೂ ಪೂರ್ವ ಬಿಜೆಪಿ ನಾಯಕ ಮನೋಜ್​ ತಿವಾರಿ ಹಾಗೂ ಅರವಿಂದ್​ ಕೇಜ್ರಿವಾಲ್​ ನಡುವೆ ಹನುಮಂತನ ಆರಾಧನೆಗೆ ಸಂಬಂಧಪಟ್ಟಂತೆ ಘರ್ಷಣೆ ನಡೆದಿತ್ತು.
ಹನುಮಂತನ ಪೂಜೆಗೆ ಹೋದವರು ಚಪ್ಪಲಿ ಹಿಡಿದ ಕೈಯಲ್ಲೇ ಮಾಲೆ ತೆಗೆದುಕೊಂಡಿದ್ದಾರೆ. ಅದು ಅಶುದ್ಧಿ ಎಂದು ಮನೋಜ್​ ತಿವಾರಿ ಆರೋಪಿಸಿದ್ದರು.
ಅದಕ್ಕೆ ಟ್ವೀಟ್ ಮಾಡಿದ್ದ ಅರವಿಂದ್​ ಕೇಜ್ರಿವಾಲ್​, ನಾನು ಸಂದರ್ಶನದ ವೇಳೆ ಹನುಮಾನ್ ಚಾಲೀಸಾ ಬಗ್ಗೆ ಮಾತನಾಡಿದ್ದೆ. ಅಂದಿನಿಂದಲೂ ಬಿಜೆಪಿ ನಾಯಕರು ನನ್ನ ವಿರುದ್ಧ ಹರಿಹಾಯುತ್ತಿದ್ದಾರೆ. ಈಗ ದೇವಸ್ಥಾನವೇ ಅಶುದ್ಧವಾಯಿತು ಎನ್ನುತ್ತಿದ್ದಾರೆ ಎಂದು ಹೇಳಿದ್ದರು. (ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
