ನವದೆಹಲಿ:ಲಾಕ್‌ಡೌನ್‌ ಸಮಯ ಗರ್ಭಿಣಿಯರ ಪಾಲಿಗೆ ಅಕ್ಷರಶಃ ಆತಂಕ ಸೃಷ್ಟಿಸಿಬಿಟ್ಟಿದೆ. ವೈದ್ಯರ ಬಳಿ ಚಿಕಿತ್ಸೆಗೆ ಹೋಗುವುದಕ್ಕೂ ಭಯ, ಮನೆಯಲ್ಲಿ ಇರುವುದಕ್ಕೂ ತಳಮಳ. ಇನ್ನು ಪ್ರಸವದ ಸಮಯ ಹತ್ತಿರ ಬಂದರಂತೂ ಆಕೆಗೆ ಮಾತ್ರವಲ್ಲದೇ, ಕುಟುಂಬಸ್ಥರಲ್ಲಿಯೂ ಆತಂಕ. ಯಾವ ಸಮಯದಲ್ಲಿ ಏನಾಗುತ್ತದೋ ಹೇಳುವಂತಿಲ್ಲ. ಹಾಗೆಂದು ಪ್ರಸವವನ್ನು ಮುಂದೂಡುವಂತೆಯೂ ಇಲ್ಲ.ಇಂಥದ್ದೇ ಸಂಕಷ್ಟದಲ್ಲಿ ಸಿಲುಕಿದ್ದ ದೆಹಲಿಯ ತುಂಬು ಗರ್ಭಿಣಿಯೊಬ್ಬರು, ಪೊಲೀಸ್‌ ವ್ಯಾನ್‌ ಒಳಗೇ ಮಗುವಿಗೆ ಜನ್ಮ ನೀಡಿದ ಘಟನೆ ನಿನ್ನೆ ರಾತ್ರಿ ನಡೆದಿದೆ. ಲಾಕ್‌ಡೌನ್‌ ಇರುವ ಕಾರಣ, ಸ್ವಂತ ವಾಹನ ಮಾಡಿಸಿಕೊಂಡು ಹೋಗಲು ಸಾಧ್ಯವಾಗದೇ ಪೊಲೀಸರ ಮೂಲಕ ವಾಹನ ವ್ಯವಸ್ಥೆ ಮಾಡಿಕೊಂಡು, ಆಸ್ಪತ್ರೆಗೆ ದಾಖಲಾಗುವ ನಡುವೆಯೇ ಗಂಡು ಮಗುವಿಗೆ ಮಹಿಳೆ ಜನ್ಮ ನೀಡಿದ್ದಾರೆ.ಈ ಮಹಿಳೆಯ ಹೆಸರು ಮಿನಿ ಕುಮಾರ್‌. ಪಶ್ಚಿಮ ದೆಹಲಿಯ ನಿವಾಸಿ. ಮಿನಿ ಅವರಿಗೆ ಪ್ರಸವ ವೇದನೆ ಶುರುವಾಗುತ್ತಿದ್ದಂತೆಯೇ ಮನೆಯವರಿಗೆ ಏನು ಮಾಡಬೇಕೆಂದು ತಿಳಿಯದಾಗಿದೆ. ಸ್ವಂತ ವಾಹನ ಮಾಡಿಸಿಕೊಂಡು ಹೋಗಬೇಕೆಂದರೆ ಪೊಲೀಸ್‌ ಅನುಮತಿ ಇತ್ಯಾದಿ ನಿಯಮಗಳು. ಆದರೆ ಇವರಿಗೆ ಅಷ್ಟು ಸಮಯ ಇರಲಿಲ್ಲ. ಯಾವ ಕ್ಷಣದಲ್ಲಿ, ಏನು ಬೇಕಾದರೂ ಆಗುತ್ತಿತ್ತು. ಮಿನಿ ಅವರು ಹೊಟ್ಟೆ ನೋವು ತಾಳಲಾರದೇ ಒದ್ದಾಡುತ್ತಿದ್ದಾಗ ಕುಟುಂಬಸ್ಥರು ಸ್ಥಳೀಯ ಪೊಲೀಸ್ ಠಾಣೆಗೆ ಆಗಮಿಸಿ ಅಲ್ಲಿಯ ಮಹಿಳಾ ಕಾನ್ಸ‌ಟೆಬಲ್‌ ಅವರಿಗೆ ವಿಷಯ ತಿಳಿಸಿದ್ದಾರೆ.ನಂತರ ಅವರು ತಮ್ಮ ಹಿರಿಯ ಅಧಿಕಾರಿಗಳ ಜತೆ ಮಾತನಾಡಿ,ಆ್ಯಂಬುಲೆನ್ಸ್‌ ವ್ಯವಸ್ಥೆ ಮಾಡಿಕೊಡಲು ತಯಾರಿ ನಡೆಸಿದರು. ಆ್ಯಂಬುಲೆನ್ಸ್‌ ಬರುವುದು ತಡವಾಗುವ ಕಾರಣ, ‍ಪೊಲೀಸ್‌ ವ್ಯಾನ್‌ನಲ್ಲಿಯೇ ಮಹಿಳೆಗೆ ಆಸ್ಪತ್ರೆಗೆ ಬಿಟ್ಟುಬರುವ ವ್ಯವಸ್ಥೆ ಮಾಡಿದರು. ಆದರೆ ಅದಾಗಲೇ ಸಮಯ ಮೀರಿತ್ತು. ಪ್ರಸವ ವೇದನೆ ಹೆಚ್ಚಾಗಿತ್ತು. ಪೊಲೀಸ್‌ ಒಂದು ಕಿ.ಮೀನಷ್ಟು ದೂರ ಹೋಗಿತ್ತಷ್ಟೇ. ಮಿನಿ ಅವರು ಇನ್ನೂ ಜೋರಾಗಿ ನೋವಿನಿಂದ ಕಿರುಚಾಡತೊಡಗಿದರು. ಅವರ ಪತಿ, ಸಹೋದರಿ ಹಾಗೂ ಮಹಿಳಾ ಕಾನ್ಸ್ ಟೇಬಲ್ ಸಹಾಯದೊಂದಿಗೆ ಮಗುವನ್ನು ಹೊರಕ್ಕೆ ತೆಗೆದರು. ಆದರೆ ಹೊಕ್ಕಳ ಬಳ್ಳಿ ಕತ್ತರಿಸಿರಲಿಲ್ಲ. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಹೊಕ್ಕಳ ಬಳ್ಳಿಯನ್ನು ಕತ್ತರಿಸಲಾಗಿದೆ.(ಏಜೆನ್ಸೀಸ್‌)
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:fourteen + 14 =
Remember me
