ನವದೆಹಲಿ:ಡಿಜೆ ಮ್ಯೂಸಿಕ್​ ಸೌಂಡ್​ ಕಡಿಮೆ ಮಾಡುವಂತೆ ಹೇಳಿದ ಮಹಿಳೆ ಮೇಲೆ ನೆರೆಯ ಮನೆಯವರು ಗುಂಡು ಹಾರಿಸಿರುವ ಘಟನೆ ವಾಯುವ್ಯ ದೆಹಲಿಯ ಸಿರಸ್​​​ಪುರದಲ್ಲಿ ನಡೆದಿದೆ.
ಘಟನೆ ತಡರಾತ್ರಿ 12:15ಕ್ಕೆ ನಡೆದಿದ್ದು ಗಾಯಗೊಂಡಿರುವ ಮಹಿಳೆಯನ್ನು ರಂಜು ಎಂದು ಗುರುತಿಸಲಾಗಿದೆ. ಪ್ರಕರಣ ಸಂಬಂಧ ಆರೋಪಿಗಳಾದ ಅಮಿತ್​ ಹಾಗೂ ಹರೀಶ್​ನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ:VIDEO| ಇಬ್ಬರು ಯುವತಿಯರೊಂದಿಗೆ ಬೈಕ್​ನಲ್ಲಿ ವೀಲ್ಹಿಂಗ್; ತಪ್ಪಿತಸ್ಥನ ಬಂಧನ ​
ಘಟನೆ ಕುರಿತು ಪ್ರತಿಕ್ರಿಯಿಸಿರುವ ಡಿಸಿಪಿ(ಉತ್ತರ) ರವಿಕುಮಾರ್​ ಸಿಂಗ್​ ಕುವಾನ್​ ಪೂಜಾನ್​​ ಸಮಯದಲ್ಲಿ ಜೋರಾಗಿ ಡಿಜೆ ಮ್ಯೂಸಿಕ್​ ಹಾಕಲಾಗಿತ್ತು. ಈ ವೇಳೆ ಗಾಯಗೊಂಡಿರುವ ಮಹಿಳೆ ಸೌಂಡ್​ ಕಡಿಮೆ ಮಾಡುವಂತೆ ಹೇಳಿದ್ದಾರೆ. ಆದರೆ, ಇದಕ್ಕೆ ಒಪ್ಪದ ಆರೋಫಿಗಳು ಮಹಿಳೆ ಮೇಲೆ ಗುಂಡು ಹಾರಿಸಿದ್ದಾರೆ.
ಘಟನೆ ಸಂಬಂಧ ಮಹಿಳೆಯಿಂದ ಹೇಳಿಕೆ ಪಡೆಯಲು ಯತ್ನಿಸಿದ್ದೆವು. ಆದರೆ, ಕತ್ತಿಗೆ ಗುಂಡೇಟು ಬಿದ್ದಿದ ಕಾರಣ ಮಹಿಳೆ ಮಾತನಾಡಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಆದ ಕಾರಣ ಆರೋಪಿಗಳಾದ ಹರೀಶ್​ ಹಾಗೂ ಅಮಿತ್​ ವಿರುದ್ಧ ಭಾರತ ದಂಡ ಸಂಹಿತೆ(IPC Section) 307(ಕೊಲೆ ಯತ್ನ), 34(ಸಾಮಾನ್ಯ ಉದ್ದೇಶ), 27(ಶಸ್ತ್ರಾಸ್ತ್ರ ಕಾಯ್ದೆ) ಅಡಿ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಮನಡೆಸಲಾಗುತ್ತಿದೆ ಎಂದು ಡಿಸಿಪಿ ರವಿಕುಮಾರ್​ ಸಿಂಗ್​ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen + nineteen =
Remember me
