ದೆಹಲಿ:ಎರಡನೇ ಅಂತಸ್ತಿನಲ್ಲಿ ಮಕ್ಕಳೊಂದಿಗೆ ಮಲಗಿದ್ದ ಮಹಿಳೆಯನ್ನು ಹಾಡುಹಗಲೇ ಕೊಲೆಗೈದಿರುವ ಘಟನೆ ದೆಹಲಿ ಬಳಿಯ ಸದರ್​ ಬಜಾರ್​ ಪ್ರದೇಶದಲ್ಲಿ ನಡೆದಿದೆ.ಮೃತಳನ್ನು ನಾಜಿಯಾ(25) ಎಂದು ಗುರುತಿಸಲಾಗಿದ್ದು, ಘಟನೆಯ ವೇಳೆ ಮಹಿಳೆಯ ಏಳು ಮತ್ತು ಎರಡು ವರ್ಷದ ಮಕ್ಕಳು ಆಕೆಯ ಬಳಿ ಮಲಗಿದ್ದರು. ಭಾನುವಾರ ಮಧ್ಯಾಹ್ನ 12 ಗಂಟೆಗೆ ಮಗ ಎಚ್ಚರಗೊಂಡು ನೋಡಿದಾಗ ತಾಯಿಯ ಕತ್ತು ಸೀಳಿರುವುದು ಕಂಡು ಬಂದಿದೆ. ಕೂಡಲೇ ಆತ ಸಂಬಂಧಿಕರಿಗೆ ಕರೆ ಮಾಡಿ ತಾಯಿ ಕೊಲೆಯಾದ ಬಗ್ಗೆ ಮಾಹಿತಿ ನೀಡಿದ್ದಾನೆ.
ಇದನ್ನೂ ಓದಿ:ವಿವಾಹಿತ ಮಹಿಳೆಗೆ ಮದುವೆಯಾಗುವಂತೆ ಒತ್ತಾಯ: ನಿರಾಕರಿಸಿದ್ದಕ್ಕೆ ಮಗನ ಪ್ರಾಣ ತೆಗೆದ ಅನ್ಯಸಮುದಾಯದ ವ್ಯಕ್ತಿಆ ಬಳಿಕ ಪೊಲೀಸರಿಗೆ ಈ ಕುರಿತು ಮಾಹಿತಿ ನೀಡಲಾಗಿದ್ದು, ಕೂಡಲೇ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಮಹಿಳೆಯ ಮೃತದೇಹ ಮತ್ತು ಮೊಬೈಲ್​ನ್ನು ವಶಪಡಿಸಿಕೊಂಡಿದ್ದಾರೆ. ನಾಜಿಯಾ ಮತ್ತು ಪತಿ ಖಾಸಿಂಗೆ ಆರ್ಯನ್ ಮತ್ತು ಮರಿಯಮ್ ಎಂಬ ಮಕ್ಕಳಿದ್ದು, ಇವರು ಪೂರ್ವಜರ ಮನೆಯಲ್ಲಿಯೇ ಎರಡನೇ ಮಹಡಿಯ ಕೋಣೆಯಲ್ಲಿ ವಾಸಿಸುತ್ತಿದ್ದರು.
ಅಲ್ಲದೇ ಇತರ ಸಂಬಂಧಿಕರು ಇದೇ ಕಟ್ಟಡದ ವಿವಿಧ ಮಹಡಿಗಳಲ್ಲಿ ವಾಸಿಸುತ್ತಿದ್ದು, ಕೊಲೆಗಡುಕ ಯಾರೋ ಹತ್ತಿರದವರಿರಬಹುದು. ಎರಡನೇ ಮಹಡಿಗೆ ಹೋಗಿ ಮಹಿಳೆಯನ್ನು ಕೊಲ್ಲುವುದು ಸುಲಭವಲ್ಲ ಎಂದು ಪೊಲೀಸರು ಶಂಕಿಸಿದ್ದಾರೆ. ಇನ್ನು ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಕತ್ತು ಹಿಸುಕಿ ನಂತರ ತರಕಾರಿ ಚಾಕುವಿನಿಂದ ಕೊಲ್ಲಲಾಗಿದೆ ಎಂದು ಪೊಲೀಸರು ಕಂಡುಕೊಂಡಿದ್ದಾರೆ. ಸದ್ಯ, ಆಕೆಯ ಸಂಬಂಧಿಕರನ್ನು ಹೊರತುಪಡಿಸಿ, ಕುಟುಂಬ ಸದಸ್ಯರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twenty + 8 =
Remember me
