ದೆಹಲಿ:ನಾವು ಗೊತ್ತಿಲ್ಲದ ಸ್ಥಳಕ್ಕೆ ಹೋದಾಗ ಆ ಪ್ರದೇಶದ ಜನರಿಗೆ ನಮಗೆ ಬೇಕಾದ ವಿಳಾಸವನ್ನು ಕೇಳುತ್ತೇವೆ. ಆದರೆ ವಿಳಾಸ ಕೇಳಿದ ಡೆಲಿವರಿ ಬಾಯ್ ಮೇಲೆ ಮಹಿಳೆ ಚಾಕುವಿನಿಂದ ಹಲ್ಲೆ ನಡೆಸಿರುವ ಘಟನೆ ದೆಹಲಿಯಲ್ಲಿ ನಡೆದಿದೆ.
​ದ್ವಾರಕಾದ ಸೆಕ್ಟರ್ 23 ರಲ್ಲಿ ಶುಕ್ರವಾರ ನಡೆದ ಈ ಘಟನೆಯು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಮಹಿಳೆಗೆ ಡೆಲಿವರಿ ಏಜೆಂಟ್ ಅಡ್ರೆಸ್​ ಕೇಳಿದ್ದು,  ಆಕೆ ವೇಗವಾಗಿ ತಿರುಗಿ ವ್ಯಕ್ತಿಯ ಮೇಲೆ ಚಾಕುವಿನಿಂದ ಹಲ್ಲೆ ನಡೆಸುವುದರೆ ಜತೆಗೆ ಆತನ ಸ್ಕೂಟರ್‌ನಿಂದ ಕೀಗಳನ್ನು ಹೊರತೆಗೆದು ಹತ್ತಿರದ ಪೊದೆಗಳಿಗೆ ಎಸೆದಿದ್ದಾಳೆ.
ಇದನ್ನೂ ಓದಿ:ಹುಟ್ಟುಹಬ್ಬದಂದು ನಾಗಿನ್​ ಡ್ಯಾನ್ಸ್​​ ಮಾಡುತ್ತಿದ್ದ ವೇಳೆ ನಾಗರಹಾವು ಪ್ರತ್ಯಕ್ಷ: ಅದನ್ನು ಕಂಡು ಆತ ಮಾಡಿದ್ದಿಷ್ಟು
ಡೆಲಿವರಿ ಏಜೆಂಟ್ ಸ್ಕೂಟರ್‌ನಿಂದ ಕೆಳಗಿಳಿಯುತ್ತಿದ್ದಂತೆಯೇ ಆಕೆ ವಾಹನವನ್ನು ನೆಲಕ್ಕೆ ತಳ್ಳಿದ್ದು, ಇದನ್ನು ಗಮನಿಸಿದ ಹಲವಾರು ನಿವಾಸಿಗಳು ಶಬ್ದ ಕೇಳಿ ಜಮಾಯಿಸಿದ್ದಾರೆ. ಮಹಿಳೆಯನ್ನು ತಡೆಯಲು ಯತ್ನಿಸಿದರೂ ಆಕೆ ಯಾರ ಮಾತನ್ನೂ ಕೇಳಲಿಲ್ಲ. ಹೀಗಾಗಿ ಬಳಿಕ ಜನರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯನ್ನು ಸಮಾಧಾನ ಪಡಿಸಲು ಯತ್ನಿಸಿದ್ದು, ಮಹಿಳೆ ಪೊಲೀಸರನ್ನು ನಿಂದಿಸಿದ್ದಾಳೆ. ಮಹಿಳಾ ಪೇದೆ ಆಕೆಯನ್ನು ಹಿಡಿಯಲು ಯತ್ನಿಸಿದಾಗ ಆರೋಪಿ ಮಹಿಳೆ ಆಕೆಯ ಕೂದಲು ಎಳೆದು ಹಲ್ಲೆ ನಡೆಸಿದ್ದಾಳೆ. ಕೊನೆಗೆ ಇತರೆ ಸಿಬ್ಬಂದಿ ಮಹಿಳಾ ಪೇದೆಯ ಸಹಾಯದಿಂದ ಆರೋಪಿ ಮಹಿಳೆಯನ್ನು ಬಂಧಿಸಿದ್ದಾರೆ.
ಈ ಹೈವೋಲ್ವೇಜ್ ಡ್ರಾಮಾ ಗಂಟೆಗಟ್ಟಲೆ ನಡೆದಿದ್ದು, 42 ವರ್ಷದ ಮಹಿಳೆ ಸೊಸೈಟಿಯಲ್ಲಿ ಬಾಡಿಗೆ ಮನೆಯಲ್ಲಿ ಒಂಟಿಯಾಗಿ ವಾಸಿಸುತ್ತಿದ್ದಾಳೆ. ಈ ಹಿಂದೆಯೂ ಆರೋಪಿ ಮಹಿಳೆ ಇಂತಹ ಹಲವು ಘಟನೆಗಳನ್ನು ನಡೆಸಿದ್ದರೂ, ಯಾರೂ ದೂರು ನೀಡದ ಕಾರಣ ಪೊಲೀಸರು ಆಕೆಯ ವಿರುದ್ಧ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇನ್ನು, ಯುವಕನನ್ನು ಪೊಲೀಸರು ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದು, ಈ ಕುರಿತಾಗಿ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − four =
Remember me
