ನವದೆಹಲಿ:ಕಿಡ್ನಿ ವೈಫಲ್ಯದಿಂದ ದೆಹಲಿ ಮೃಗಾಲಯದಲ್ಲಿ ಮೃತಪಟ್ಟಿದ್ದ ಕಲ್ಪನಾ ಹೆಸರಿನ ಬಿಳಿಹುಲಿಯಲ್ಲಿ ಕರೊನಾ ನಗೆಟಿವ್​ ಪತ್ತೆಯಾಗಿದೆ ಎಂದು ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.
ಕಲ್ಪನ ಕಿಡ್ನಿ ವೈಫಲ್ಯವಲ್ಲದೇ, ಇತರೆ ವಯೋಸಹಜ ಕಾಯಿಲೆಗಳಿಂದ ಸಾವಿಗೀಡಾಗಿದೆ. ಕರೊನಾದಿಂದಲೇ ಸಾವಿಗೀಡಾಗಿದೆ ಎನ್ನವುದಕ್ಕೆ ಯಾವುದೇ ರೋಗ ಲಕ್ಷಣಗಳು ಕಂಡುಬಂದಿಲ್ಲ. ಆದಾಗ್ಯೂ ಮೃಗಾಲಯ ಆಡಳಿತ ಮಂಡಳಿಯ ಸಲಹೆಯಂತೆ ಜೈವಿಕ ಭದ್ರತೆಗಾಗಿ ಹುಲಿಯ ಸ್ಯಾಂಪಲ್​ ಸಂಗ್ರಹಿಸಿ ಬರೇಲಿಯಲ್ಲಿರುವ ಭಾರತೀಯ ಪಶುವೈದ್ಯಕೀಯ ಸಂಶೋಧನಾ ಸಂಸ್ಥೆ (ಐವಿಆರ್​ಐ)ಗೆ ಕಳುಹಿಸಲಾಯಿತು. ಇದೀಗ ಹುಲಿಯಲ್ಲಿ ಕೋವಿಡ್​-19 ನಗೆಟಿವ್​ ಪತ್ತೆಯಾಗಿದೆ ಎಂದು ಐವಿಆರ್​ಐ ಖಚಿತ ಪಡಿಸಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಕಲ್ಪನಾ ಬುಧವಾರ ಸಂಜೆ 6.30ಕ್ಕೆ ಸಾವಿಗೀಡಾಯಿತು. ಗುರುವಾರ ಅದರ ಅಂತ್ಯಕ್ರಿಯೆಯನ್ನು ನೆರವೇರಿಸಲಾಗಿದೆ. ಸರ್ಕಾರದ ಸೂಚನೆಗಳನ್ನು ಗಮನದಲ್ಲಿಟ್ಟುಕೊಂಡ ಕೆಲವೇ ಮಂದಿ ಸೇರಿ ಅಂತ್ಯಕ್ತಿಯೆಯನ್ನು ನೆರವೇರಿಸಲಾಗಿದೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್​)
VIDEO: ಕಸಾಯಿಖಾನೆಗೆ ಕೊಂಡೊಯ್ಯುವಾಗ ಎಸ್ಕೇಪ್​ ಆಗಿ ತಾಯಿ-ಮಗುವಿಗೆ ಗುದ್ದಿದ ನೀರೆಮ್ಮೆ ಸಾವಿಗೀಡಾಗಿದ್ದು ಹೇಗೆ? ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + 10 =
Remember me
