ನವದೆಹಲಿ:ಸಾಮಾನ್ಯವಾಗಿ ಪಂಚತಾರಾ, ಐಷಾರಾಮಿ ಹೋಟೆಲ್​ಗಳಲ್ಲಿ ರೂಮ್​ ಬಾಡಿಗೆ ಕೇಳುವುದಂತೂ ಬೇಡವೇ ಬೇಡ. ಹತ್ತಾರು ಸಾವಿರ ರೂ.ಗಳಿಂದ ಲಕ್ಷಗಟ್ಟಲೇ ವಿಧಿಸಲಾಗುತ್ತದೆ. ಇನ್ನು ಸೀಸನ್​ಗಳಲ್ಲಂತೂ ಬೆಲೆಯನ್ನು ಇನ್ನೂ ಹೆಚ್ಚಿಸಲಾಗಿರುತ್ತದೆ.
ದೇಶದ ಐಷಾರಾಮಿ ಹೋಟೆಲ್​ ಸರಣಿ ಹೊಂದಿರುವ ತಾಜ್​ ಹೋಟೆಲ್​ಗಳಲ್ಲೂ ಕೊಠಡಿ ಬಾಡಿಗೆ ಕಡಿಮೇಯನಲ್ಲ. ಆದರೆ, ರಾಷ್ಟ್ರ ರಾಜಧಾನಿಯ ಐಷಾರಾಮಿ ಹೋಟೆಲ್​ಗಳಲ್ಲಿ ಒಂದಾದ ತಾಜ್​ ಮಾನ್​ಸಿಂಗ್​ ಹೋಟೆಲ್​ನಲ್ಲಿ ತಂಗಲು ರೂಮ್​ ಬಾಡಿಗೆಯನ್ನು ಐದು ಸಾವಿರ ರೂ. ಎಂದು ನಿಗದಿ ಪಡಿಸಲಾಗಿದೆ. ಅಚ್ಚರಿಯಾದರೂ ಇದು ಸತ್ಯ.
ಇದನ್ನೂ ಓದಿ;ಮಗಳ ಮದುವೆಯಲ್ಲಿ ಕೇರಳ ಸಿಎಂಗೆ ಮುಜುಗರ; ಗೃಹ ಇಲಾಖೆ ವೈಫಲ್ಯ ಪಕ್ಷಕ್ಕೂ ಕಿರಿಕಿರಿ
ಹಾಗೆಂದು ಎಲ್ಲರಿಗೂ ಇಲ್ಲಿ ತಂಗಲು ಅವಕಾಶವಿಲ್ಲ. ಈ ಪ್ರತಿಷ್ಠಿತ ಹೋಟೆಲ್​ಅನ್ನು ಸದ್ಯ ಸರ್​ ಗಂಗಾರಾಮ್​ ಆಸ್ಪತ್ರೆಯೊಂದಿಗೆ ಜೋಡಿಸಲಾಗಿದೆ. ಹೆಚ್ಚುತ್ತಿರುವ ಕರೊನಾ ರೋಗಿಗಳಿಗೆ ಚಿಕಿತ್ಸೆ ನೀಡಲು ಹೆಚ್ಚುವರಿ ಕೊಠಡಿಗಳ ಅವಶ್ಯಕತೆ ಇರುವುದರಿಂದ ಈ ಹೋಟೆಲ್​ ಕೊಠಡಿಗಳನ್ನು ಕೋವಿಡ್​ ರೋಗಿಗಳ ವಾಸ್ತವ್ಯಕ್ಕೆ ಬಳಸಿಕೊಳ್ಳಲಾಗುತ್ತಿದೆ. ಇಡೀ ಹೋಟೆಲ್​ಅನ್ನು ಕೋವಿಡ್​ ಫ್ಯಾಸಿಲಿಟಿ ಆಗಿ ಬದಲಾಯಿಸಲಾಗಿದೆ.
ಸರ್ಕಾರ ಇಲ್ಲಿನ ಕೊಠಡಿಗಳ ಬಾಡಿಗೆಯನ್ನು ದಿನಕ್ಕೆ 5 ಸಾವಿರ ರೂ. ನಿಗದಿಪಡಿಸಿದೆ. ಜತೆಗೆ ಆಮ್ಲಜನಕ ಪೂರೈಕೆ ಹೊರತು ಪಡಿಸಿ ಇತರ ಚಿಕಿತ್ಸೆ ವೆಚ್ಚವಾಗಿ 5 ಸಾವಿರ ರೂ.ಗಳನ್ನು ಮಾತ್ರ ಪಡೆಯಬಹುದು.ಆಮ್ಲಜನಕ ಪೂರೈಸಿದರೆ ಹೆಚ್ಚುವರಿಯಾಗಿ 2 ಸಾವಿರ ರೂ. ಶುಲ್ಕ ವಿಧಿಸಬಹುದು ಎಂದು ಸೂಚಿಸಿದೆ.
ಇದನ್ನೂ ಓದಿ;‘ಸೇಲ್ಸ್​ಮನ್​’ ಆಗಲಿಲ್ಲ ಶಿಕ್ಷಕ; ವಜಾಗೊಳಿಸಿದ ಸಂಸ್ಥೆ; ಬಾಳೆಹಣ್ಣು ಮಾರಾಟಕ್ಕಿಳಿದವನ ಕೈಹಿಡಿದ ವಿದ್ಯಾರ್ಥಿಗಳು
ರೋಗಿಗಳಿಗೆ ಕೊಠಡಿ ಹಾಗೂ ಆಹಾರದ ವ್ಯವಸ್ಥೆ ಕಲ್ಪಿಸುವುದು ಹೋಟೆಲ್​ ಜವಾಬ್ದಾರಿಯಾದರೆ, ಆಸ್ಪತ್ರೆ ಚಿಕಿತ್ಸೆ ನೀಡಲಿದೆ. ಮೊತ್ತವನ್ನು ಆಸ್ಪತ್ರೆಗೆ ಪಾವತಿಸಬೇಕಿದ್ದು, ನಂತರ ಅದನ್ನು ಹೋಟೆಲ್​ ಪಡೆದುಕೊಳ್ಳಲಿದೆ. ರೋಗಿಗಳಿಗೆ ಸೇವೆ ನೀಡಲು ಅಗತ್ಯ ತರಬೇತಿಯನ್ನು ಹೋಟೆಲ್​ ಸಿಬ್ಬಂದಿಗೆ ನೀಡಲಾಗಿದೆ.
ವೃದ್ಧನ ಕರೊನಾ ಚಿಕಿತ್ಸೆಗೆ ಖರ್ಚಾದ ಮೊತ್ತದಿಂದ ಆಸ್ಪತ್ರೆಯನ್ನೇ ಕಟ್ಟಿಸಬಹುದಿತ್ತು…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five × 3 =
Remember me
