ನವದೆಹಲಿ:ದೇಶಾದ್ಯಂತ ಲಾಕ್​ಡೌನ್​ನಿಂದಾಗಿ ರಾಷ್ಟ್ರ ರಾಜಧಾನಿ ಪ್ರದೇಶ (ಎನ್​ಸಿಆರ್​) ಸೇರಿ ಉತ್ತರ ಭಾರತದ ಬಹುತೇಕ ನಗರಗಳಲ್ಲಿ ಭಾರಿ ಬದಲಾವಣೆ ಕಂಡುಬಂದಿತ್ತು. ಆದರೆ, ದಿನಕಳೆದಂತೆ ಅದು ಮೊದಲಿನ ಸ್ಥಿತಿಗೆ ಮರಳುತ್ತಿದೆ. ಇದು ಪರಿಸರ ಪ್ರಿಯರಲ್ಲಿ ನಿರಾಸೆಗೂ ಕಾರಣವಾಗಿದೆ.
ದೆಹಲಿ ಸೇರಿ ಉತ್ತರ ಭಾರತದ ಹಲವು ಪ್ರದೇಶಗಳಲ್ಲಿ ವಾತಾವರಣ ಅತ್ಯಂತ ತಿಳಿಯಾಗಿತ್ತು. ಅದರಲ್ಲೂ ಮುಖ್ಯವಾಗಿ ಗಂಗಾನದಿ ಮುಖಜ ಭೂಮಿ ವಾತಾವರಣ 20 ವರ್ಷದ ಹಿಂದಿನಂತಾಗಿತ್ತು.
ಇದನ್ನೂ ಓದಿ;ಲಾಕ್​ಡೌನ್​ನಿಂದಾಗಿ ದಕ್ಷಿಣ ಭಾರತದಲ್ಲೇಕೆ ಶುಭ್ರವಾಗಿಲ್ಲ ವಾಯಮಂಡಲ? ನಾಸಾ ಅಧ್ಯಯನ ಹೇಳೋದೇನು?
ವಾಯ ಗುಣಮಟ್ಟ ಭಾರಿ ಪ್ರಮಾಣದಲ್ಲಿ ಸುಧಾರಿಸಿದ್ದು, ಗಾಳಿಯಲ್ಲಿರುವ ಮಾಲಿನ್ಯಕಾರಕಗಳ ಪ್ರಮಾಣವೂ ಎರಡು ದಶಕಗಳ ಹಿಂದಿನಷ್ಟು ಕಡಿಮೆಯಾಗಿದೆ ಎಂದು ನಾಸಾ ಹೇಳಿತ್ತು. ಜತೆಗೆ ಅವುಗಳ ನಕ್ಷೆಯನ್ನು ಬಿಡುಗಡೆ ಮಾಡಿತ್ತು.
ಆದರೆ, ಪ್ರಸ್ತುತ ಎನ್​ಸಿಆರ್​ ಪ್ರದೇಶದಲ್ಲಿ ವಾಯು ಗುಣಮಟ್ಟ ಹಿಂದಿನಂತೆ ಸಾಮಾನ್ಯ ಮಟ್ಟಕ್ಕೆ ಬಂದಿದೆ. ಪಶ್ಚಿಮದ ಒಣ ಪ್ರದೇಶದಿಂದ ಬೀಸುವ ಗಾಳಿಯಲ್ಲಿನ ಧೂಳಿನ ಕಣಗಳು ದೆಹಲಿ ವಾತಾವರಣವನ್ನು ಪ್ರವೇಶಿಸುತ್ತಿವೆ ಎಂದು ಹವಾಮಾನ ತಜ್ಞರು ಹೇಳಿದ್ದಾರೆ.
ಚಾಂದಿನಿ ಚೌಕ್​ ಪ್ರದೇಶದಲ್ಲಿ ಶನಿವಾರ ಬೆಳಗಿನ ಜಾವ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯುಐ)161 ಇತ್ತು. ಅಲ್ಲದೇ ಗಾಳಿಯಲ್ಲಿರುವ ಧೂಳಿನ ಕಣಗಳ ಪ್ರಮಾಣ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಾಗಲಿದೆ ಎಂದು ಅಂದಾಜಿಸಲಾಗಿದೆ.
ಇದನ್ನೂ ಓದಿ;ಹೀಗೆ ಮಾಡಿದ್ದಕ್ಕೇನಾ ಕರೊನಾವನ್ನು ಕಟ್ಟಿ ಹಾಕಿದ್ದು ಚೀನಾ?
ಎಕ್ಯುಐ 100ರ ಒಳಗಿದ್ದರೆ ಉತ್ತಮ ಅಥವಾ ತೃಪ್ತಿದಾಯಕ, 200ರವರೆಗಿದ್ದರೆ ಸಾಮಾನ್ಯ, 300ಕ್ಕಿಂತ ಕೆಳಗಿಳಿದರೆ ಕಳಪೆ ಎಂದು ವಿಂಗಡಿಸಲಾಗುತ್ತದೆ. ಲಾಕ್​ಡೌನ್​ ಮುನ್ನ ಎಕ್ಯುಐ 500ಕ್ಕೂ ಹೆಚ್ಚಾಗಿ ಅತ್ಯಂತ ಕಳಪೆ ಮಟ್ಟಕ್ಕೆ ತಲುಪಿತ್ತು. ಲಾಕ್​ಡೌನ್​ನಿಂದಾಗಿ ಸುಧಾರಿಸಿದ್ದ ವಾಯು ಗುಣಮಟ್ಟ ನಿರ್ಬಂಧ ಸಡಿಲಿಕೆಯಾಗುತ್ತಿದ್ದಂತೆ ಹಿಂದಿನ ಸ್ಥಿತಿಗೆ ಮರಳುತ್ತಿದೆ.
ತಿಳಿದಿರಿ.. ಆಧಾರನಷ್ಟೇ ಮುಖ್ಯವಾಗುತ್ತಿದೆ ಆರೋಗ್ಯ ಸೇತು ಆ್ಯಪ್​, ಪ್ರಯಾಣಕ್ಕಂತೂ ಬೇಕೆಬೇಕು..!

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:16 + 13 =
Remember me
