ರಾಘವ ಶರ್ಮ ನಿಡ್ಲೆ, ನವದೆಹಲಿ
ರಾಜಧಾನಿ ದೆಹಲಿಯ ಲೋಕ ಕಲ್ಯಾಣ ಮಾರ್ಗದ ಪ್ರಧಾನಮಂತ್ರಿ ನಿವಾಸದ ಪಕ್ಕದಲ್ಲಿರುವ, ಐಷಾರಾಮಿ ಸಂಸ್ಕೃತಿ ಪೋಷಿಸುವ ದಿಲ್ಲಿ ಜಿಮ್ಖಾನಾ ಕ್ಲಬ್ ‘ವ್ಯವಹಾರ’ಗಳಿಗೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಯತ್ನಕ್ಕೆ ಮೊದಲ ಹಂತದ ಯಶಸ್ಸು ಲಭಿಸಿದೆ.
ಕ್ಲಬ್​ನ ಸಾಮಾನ್ಯ ಸಮಿತಿಗೆ ಇಬ್ಬರು ನಾಮನಿರ್ದೇಶಿತ ಸದಸ್ಯರನ್ನು ನೇಮಿಸಲು ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಾಧಿಕರಣ (ಎನ್​ಸಿಎಲ್​ಟಿ) ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿದ್ದು, ಅಲ್ಲಿನ ಶಂಕಿತ ‘ಅವ್ಯವಹಾರ’ಗಳ ಬಗ್ಗೆ ಪರಿಶೀಲಿಸಲು ಐವರು ಸದಸ್ಯರ ಸಮಿತಿ ರಚಿಸುವಂತೆಯೂ ಸೂಚನೆ ನೀಡಿದೆ.
‘ದೇಶದ ಅತ್ಯುನ್ನತ, ಅತಿ ಮಹತ್ವದ 27 ಎಕರೆ ಸರ್ಕಾರಿ ಜಮೀನಿನಲ್ಲಿ ನೆಲೆಗೊಂಡಿರುವ ಜಿಮ್ಖಾನಾ ಕ್ಲಬ್, ಸಾಮ್ರಾಜ್ಯಶಾಹಿ ಮನಸ್ಥಿತಿ ಪೋಷಿಸುತ್ತಿದೆ. ಇಲ್ಲಿನ ಸದಸ್ಯರು, ಆಡಳಿತ ಮಂಡಳಿಯ ನಿಲುವುಗಳು ಸಾರ್ವಜನಿಕ ಹಿತಾಸಕ್ತಿಗೆ ವ್ಯತಿರಿಕ್ತವಾಗಿದೆ. ಬ್ರಿಟಿಷರಿಂದ ದೇಶ ಸ್ವತಂತ್ರಗೊಂಡ ನಂತರ ಈ ಕ್ಲಬ್ಬಿನ ಹೆಸರಿನಿಂದ ‘ಇಂಪೀರಿಯಲ್’(ಸಾಮ್ರಾಜ್ಯಶಾಹಿ) ಪದ ಅಳಿಸಲಾಗಿದ್ದರೂ, ಕ್ಲಬ್ ಮತ್ತು ಸದಸ್ಯರು ಮಾತ್ರ ಆ ಮನಸ್ಥಿತಿಯಿಂದ ಹೊರಬಂದಿಲ್ಲ. ದೇಶದ ಸಾಮಾನ್ಯ ವ್ಯಕ್ತಿಗಳು ಆಯಕಟ್ಟಿನ ಹುದ್ದೆಗೇರದಿದ್ದರೆ ಅಥವಾ ಸಮಾಜದಲ್ಲಿ ಗಣ್ಯರೆನಿಸಿಕೊಳ್ಳದಿದ್ದರೆ ಈ ಸ್ಥಳಗಳಿಗೆ ಪ್ರವೇಶ ನಿರಾಕರಿಸುವ ಧಾಷ್ಟರ್್ಯ ಪ್ರದರ್ಶಿಸಲಾಗುತ್ತಿದೆ. ಉಳ್ಳವರು, ಧನವಂತರು, ಪ್ರಭಾವಿಗಳು, ಮಾಜಿ ಉನ್ನತಾಧಿಕಾರಿಗಳು, ನಿವೃತ್ತ ನ್ಯಾಯಾಧೀಶರು ಮತ್ತು ಗಣ್ಯಾತಿಗಣ್ಯರಿಗಷ್ಟೇ ಪ್ರವೇಶ ಕೊಡುವ ಕ್ಲಬ್ಬಿಗೆ ಕಡಿವಾಣ ಹಾಕುವ ಕಾಲ ಬಂದಿದೆ’ ಎಂದು ನ್ಯಾ. ಪ್ರಕಾಶ್ ಕುಮಾರ್ ಹರಿತವಾದ ತೀರ್ಪು ಪ್ರಕಟಿಸಿದ್ದಾರೆ.
ಆಂಗ್ಲರು ಭಾರತ ಬಿಟ್ಟರೂ, ‘ದೇಶವಾಳುವ ಗಣ್ಯ ಸಂಸ್ಕೃತಿ’ ಜಿಮ್ಖಾನ ಕ್ಲಬ್​ಗಳ ಮುಖೇನ ಸ್ವೇಚ್ಛಾಚಾರ ಸಂಸ್ಕೃತಿಯನ್ನು ಪ್ರೇರೇಪಿಸುತ್ತಿವೆ. ಸರ್ಕಾರಿ ಭೂಮಿಯಲ್ಲಿ ಇದಕ್ಕೆಲ್ಲಾ ಅವಕಾಶ ಸರಿಯೇ? ಇಲ್ಲಿ ಸ್ವಜನಪಕ್ಷಪಾತ, ವಂಶವಾಹಿ ಆಡಳಿತದ ವಾಸನೆ ಜೋರಾಗಿ ಬಡಿಯುತ್ತಿದೆ. ಕ್ಲಬ್ ಸದಸ್ಯರಿಗೆ, ಆಡಳಿತ ಮಂಡಳಿಗೆ ಈ ಸುಖಾಸೀನ ಸಂಸ್ಕೃತಿಯ ನಶೆಯಿಂದ ಹೊರಬರಲು ಕಷ್ಟವಾಗುತ್ತಿರಬಹುದು. ಆದರೆ ತಮ್ಮ ಕಾಲಕ್ಷೇಪಗಳಿಗಾಗಿ ಸರ್ಕಾರದ ಭೂಮಿ ಲೀಸ್ ಪಡೆದು, ಅಲ್ಲಿ ವೈನ್-ವಿಸ್ಕಿ ಹೀರುತ್ತಿದ್ದಾರೆ ಎಂದರೆ ಅದು ವ್ಯವಸ್ಥೆಯ ಅಪಹಾಸ್ಯವಲ್ಲದೆ ಮತ್ತೇನು ಎಂದು ನ್ಯಾ. ಪ್ರಕಾಶ್ ಕುಮಾರ್ ಖಡಕ್ಕಾಗಿ ಪ್ರಶ್ನಿಸಿದ್ದಾರೆ. ಅವ್ಯವಹಾರಗಳ ತನಿಖೆ ನಡೆಸಲಿರುವ ಕೇಂದ್ರದ ಸಮಿತಿ 2 ತಿಂಗಳ ಒಳಗಾಗಿ ಕಂಪನಿ ವ್ಯವಹಾರಗಳ ನ್ಯಾಯಾಧಿಕರಣಕ್ಕೆ ತನ್ನ ವರದಿ ಸಲ್ಲಿಸಬೇಕಿದೆ.
ಕೇಂದ್ರದಿಂದಲೇ ಅರ್ಜಿ:ಮೊದಲು ಜಿಮ್ಖಾನಾ ಕ್ಲಬ್​ಗೆ ಕಡಿವಾಣ ಹಾಕಿ ನಂತರ ದೇಶದ ಇತರೆ ಸರ್ಕಾರಿ ಭೂಮಿಗಳಲ್ಲಿರುವ ಐಷಾರಾಮಿ ಮೋಜು-ಮಸ್ತಿ ಕ್ಲಬ್​ಗಳಿಗೆ ಕಡಿವಾಣ ಹಾಕುವುದು ಕೇಂದ್ರದ ಉದ್ದೇಶ. ಇದೇ ಕಾರಣಕ್ಕೆ ಕೇಂದ್ರ ಕಾರ್ಪೆರೇಟ್ ವ್ಯವಹಾರಗಳ ಇಲಾಖೆ ಜಿಮ್ಖಾನಾ ಕ್ಲಬ್ ಆಡಳಿತ ವೈಖರಿ, ವ್ಯವಹಾರಗಳನ್ನು ಪ್ರಶ್ನಿಸಿ ಕೇಂದ್ರ ರಾಷ್ಟ್ರೀಯ ಕಂಪನಿ ವ್ಯವಹಾರಗಳ ನ್ಯಾಯಾಧಿಕರಣಕ್ಕೆ ಅರ್ಜಿ ಸಲ್ಲಿಸಿತ್ತು. ಹೆಚ್ಚುವರಿ ಸಾಲಿಸಿಟರ್ ಜನರಲ್ (ಎ.ಎಸ್.ಜಿ), ಕನ್ನಡಿಗ ಕೆ.ಎಂ. ನಟರಾಜ್ ಕೇಂದ್ರ ಸರ್ಕಾರದ ಪರ ವಾದ ಮಂಡಿಸಿ, ದಾಖಲೆಗಳನ್ನು ಸಲ್ಲಿಸಿದ್ದರು. ಕ್ಲಬ್​ನ ಅಕ್ರಮ, ಸರ್ಕಾರಿ ಭೂಮಿಯ ದುರುಪಯೋಗ, ಹಾಗೂ ಸದಸ್ಯತ್ವಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದಲೇ ಅದನ್ನು ಸ್ವಾಧೀನಪಡಿಸಿಕೊಳ್ಳಬೇಕೆಂಬುದು ನಮ್ಮ ಉದ್ದೇಶ ಎಂದು ಕೇಂದ್ರ ತನ್ನ ಅರ್ಜಿಯಲ್ಲಿ ದಾಖಲಿಸಿತ್ತು. ಬೇರೆ ರಾಜ್ಯಗಳಲ್ಲಿ ಸರ್ಕಾರಿ ಭೂಮಿ ಲೀಸ್ ಪಡೆದು ಗಣ್ಯರಿಗಷ್ಟೇ ಸೀಮಿತ ಮಾಡಿಕೊಂಡಿರುವ ಐಷಾರಾಮಿ ಕ್ಲಬ್​ಗಳಿಗೂ ಇದು ಎಚ್ಚರಿಕೆ ಸಂದೇಶ ಎಂದು ವಿಶ್ಲೇಷಿಸಲಾಗುತ್ತಿದೆ.
ಕರ್ನಾಟಕದವರೂ ಬರ್ತಾರೆ:ತಮ್ಮ ಬೇರೆ ಬೇರೆ ವ್ಯವಹಾರಕ್ಕಾಗಿ, ರಾಜಕಾರಣಿಗಳ ಸಂಪರ್ಕ ಗಳಿಸಲು ಹಾಗೂ ದಲ್ಲಾಳಿ ಕೆಲಸಕ್ಕೆಂದು ಕರ್ನಾಟಕದಿಂದ ದೆಹಲಿಗೆ ಬರುವ ಅನೇಕ ಮಂದಿಯೂ ಇದೇ ಜಿಮ್ಖಾನಾ ಕ್ಲಬ್​ನಲ್ಲಿ ಸೇರುತ್ತಾರೆ. ರಾಜಕಾರಣಿಗಳು, ಪ್ರಭಾವಿ ವ್ಯಕ್ತಿಗಳು, ಉದ್ಯಮಿಗಳು, ಮಾಜಿ ಐಎಎಸ್ ಅಧಿಕಾರಿಗಳ ಪಾರ್ಟಿಗಳು ಇಲ್ಲಿ ನಿತ್ಯ ಎಂಬಂತೆ ನಡೆಯುತ್ತಿರುತ್ತದೆ.
ಶತಮಾನದ ಇತಿಹಾಸ:ದಿಲ್ಲಿ ಜಿಮ್ಖಾನಾ ಕ್ಲಬ್​ಗೆ ಭಾರತದ ಅತ್ಯಂತ ಹಳೆಯ ಕ್ಲಬ್​ಗಳಲ್ಲಿ ಒಂದು. 1913ರಲ್ಲಿ ಲೋಕಕಲ್ಯಾಣ ಮಾರ್ಗ (ಹಿಂದಿನ ರೇಸ್ ಕೋರ್ಸ್ ರೋಡ್) ಎದುರು ಭಾಗಕ್ಕೆ ಸ್ಥಳಾಂತರಗೊಳಿಸಲಾಗಿತ್ತು. ಲೀಸ್ ಪಡೆದುಕೊಂಡ ಈ ಭೂಮಿಗೆ ತಿಂಗಳಿಗೆ 1000 ರೂ. ಬಾಡಿಗೆ ನೀಡಲಾಗುತ್ತಿದೆ! ಸರ್ಕಾರದ ಕ್ಲಾಸ್-1 ಅಧಿಕಾರಿಗಳು ಸದಸ್ಯತ್ವಕ್ಕೆ 1.5 ಲಕ್ಷ ರೂ., ಖಾಸಗಿ ವ್ಯಕ್ತಿಗಳು ಸದಸ್ಯತ್ವಕ್ಕೆ 7.5 ಲಕ್ಷ ರೂ. ನೀಡಬೇಕು. 16 ಮಂದಿಯ ಆಡಳಿತ ಮಂಡಳಿಯಲ್ಲಿ ಖಾಸಗಿ ಗಣ್ಯ ವ್ಯಕ್ತಿಗಳು, ನಿವೃತ್ತ ಐಎಎಸ್, ಸೇನಾಧಿಕಾರಿಗಳೂ ಇದ್ದಾರೆ.
ಕ್ಲಬ್ ಸದಸ್ಯರು ತಮಗೆ ಅನುಕೂಲವಾಗುವ ನಿಯಮ ರೂಪಿಸಿದ್ದಾರೆ. ಪ್ರವೇಶ ಶುಲ್ಕ ಅಥವಾ ನೋಂದಣಿ ಶುಲ್ಕದ ಹೆಸರಿನಲ್ಲಿ ಸಾರ್ವಜನಿಕರ ಹಣ ಪೋಲಾಗುತ್ತಿದೆ. ಆಜೀವ ಸದಸ್ಯರು, ತಮ್ಮ ಕುಟುಂಬದ ಸದಸ್ಯರಿಗೆ, ಒಂದು ತಲೆಮಾರಿನ ನಂತರದ ಮತ್ತೊಂದು ತಲೆಮಾರಿಗೆ ಸದಸ್ಯತ್ವ ನೀಡುತ್ತಿದ್ದಾರೆ. 27 ಎಕರೆ ಸರ್ಕಾರಿ ಭೂಮಿಯನ್ನು ಇಂಥದ್ದೊಂದು ಸ್ವೇಚ್ಛಾಚಾರಕ್ಕೆ ಬಳಸಿಕೊಂಡಿರುವುದು ಅಕ್ಷಮ್ಯ
| ಬಿ.ಎಸ್.ವಿ. ಪ್ರಕಾಶ್ ಕುಮಾರ್ನ್ಯಾಯಾಧೀಶ
https://www.vijayavani.net/chinas-inner-mongolia-on-high-alert-after-multiple-cases-of-bubonic-plague-detected/
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:16 + 18 =
Remember me
