ಮುಂಬೈ:ಅಪರಾಧ ಮಾಡಿ ಜೈಲು ಸೇರಿದವರನ್ನು ಆರೋಗ್ಯವಾಗಿರುವಂತೆ ನೋಡಿಕೊಳ್ಳುವುದು ಜೈಲಿನ ಅಧಿಕಾರಿಗಳ ಜವಾಬ್ದಾರಿಯಾಗುತ್ತದೆ. ಅವರಿಗೆ ಆರೋಗ್ಯಯುತ ಮತ್ತು ರುಚಿಯಾದ ಆಹಾರ ನೀಡುವ ನಿಟ್ಟಿನಲ್ಲಿ ಹೊಸ ಯೋಜನೆಗಳನ್ನು ಹಾಕಿಕೊಂಡಿರುವುದಾಗಿ ಮಹಾರಾಷ್ಟ್ರ ಪೊಲೀಸ್ ಇಲಾಖೆ ತಿಳಿಸಿದೆ.
ಈ ಬಗ್ಗೆ ಪುಣೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಹಾರಾಷ್ಟ್ರ ಜೈಲಿನ ಹೆಚ್ಚುವರಿ ಮಹಾನಿರ್ದೇಶಕ ಸುನಿಲ್ ರಾಮಾನಂದ್ ಹಲವು ಯೋಜನೆಗಳ ಕುರಿತಾಗಿ ಮಾಹಿತಿ ಹಂಚಿಕೊಂಡಿದ್ದಾರೆ. ಜೈಲಿನಲ್ಲಿ ಉತ್ತಮ ದರ್ಜೆಯ ಹೋಟೆಲ್ ರೀತಿಯ ಊಟದ ವ್ಯವಸ್ಥೆ ಆರಂಭಿಸಲಾಗುವುದು. ಚಿಕನ್ ಖಾದ್ಯ ಸೇರಿ ಅನೇಕ ರೀತಿಯ ಭಕ್ಷ್ಯಗಳು ಅಲ್ಲಿ ಸುಗುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ.
ಹಾಗೆಯೇ ಮಹಾರಾಷ್ಟ್ರದ ಚೆಂಬೂರಿನಲ್ಲಿ ಬಹುಮಹಡಿಯ ಜೈಲನ್ನು ನಿರ್ಮಿಸಲು ಸಿದ್ಧತೆ ನಡೆದಿರುವುದಾಗಿ ಅವರು ಹೇಳಿದ್ದಾರೆ. ಜೈಲುಗಳಲ್ಲಿರುವ 53 ಖೈದಿಗಳಿಗೆ ಪೆರೋಲ್ ಸಿಕ್ಕಿದ್ದು ಅವರಿಗೆ ಹೊರಗೆ ಹೋಗುವ ಅವಕಾಶವಿದೆಯಾದರೂ ಅದಕ್ಕೆ ಅವರು ಒಪ್ಪುತ್ತಿಲ್ಲ. ಮನೆಗಿಂತ ಇಲ್ಲೇ ಹೆಚ್ಚು ಸುರಕ್ಷಿತವಾಗಿದ್ದೇವವೆ ಎಂದು ಅವರು ಹೇಳುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಇದುವರೆಗೆ ರಾಜ್ಯದಲ್ಲಿ 4243 ಖೈದಿಗಳಲ್ಲಿ ಕರೊನಾ ಸೋಂಕು ಕಾಣಿಸಿಕೊಂಡಿದೆ. ಅದರಲ್ಲಿ 4157 ಖೈದಿಗಳು ಗುಣಮುಖವಾಗಿದ್ದು, ಕೇವಲ 73 ಸಕ್ರಿಯ ಪ್ರಕರಣಗಳು ಬಾಕಿಯಿವೆ. 13 ಖೈದಿಗಳು ಮತ್ತು 10 ಸಿಬ್ಬಂದಿ ಕರೊನಾಕ್ಕೆ ಬಲಿಯಾಗಿದ್ದಾರೆ. ಕರೊನಾ ಸಮಯದಲ್ಲಿ 13,115 ಖೈದಿಗಳಿಗೆ ಪೆರೋಲ್ ಮೇಲೆ ಮನೆಗೆ ತೆರಳಲು ಅವಕಾಶ ಮಾಡಿಕೊಡಲಾಗಿತ್ತು ಎಂದು ತಿಳಿಸಲಾಗಿದೆ. (ಏಜೆನ್ಸೀಸ್)
ಕರೊನಾ ಲಸಿಕೆಯ ಎರಡೂ ಡೋಸ್ ಆಯ್ತು, ಇನ್ನೂ ಮಾಸ್ಕ್ ಹಾಕಿಕೊಳ್ಳಬೇಕಾ? ನಿಮ್ಮೆಲ್ಲ ಪ್ರಶ್ನೆಗೆ ಇಲ್ಲಿದೆ ಉತ್ತರ

ರೈಲ್ವೆ ನಿಲ್ದಾಣದ ಮೇಲೇ ಫೈವ್​ ಸ್ಟಾರ್ ಹೋಟೆಲ್! ವಿನೂತನ ನಿರ್ಮಾಣಕ್ಕೆ ದೇಶದ ಮೆಚ್ಚುಗೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen − nine =
Remember me
