ನವದೆಹಲಿ:ಬಾಬರಿ ಮಸೀದಿ ಧ್ವಂಸ ಪ್ರಕರಣದಲ್ಲಿ ಸೆ.30 ರೊಳಗೆ ತೀರ್ಪು ನೀಡುವಂತೆ ವಿಚಾರಣೆ ನಡೆಸುತ್ತಿರುವ ಲಖನೌದ ವಿಶೇಷ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್​ ಸೂಚನೆ ನೀಡಿದೆ.
ಮಾಜಿ ಉಪಪ್ರಧಾನಿ ಲಾಲ್​ಕೃಷ್ಣ ಅಡ್ವಾಣಿ, ಉತ್ತರಪ್ರದೇಶದ ಮಾಜಿ ಸಿಎಂ ಕಲ್ಯಾಣ್​ ಸಿಂಗ್​, ಬಿಜೆಪಿ ನಾಯಕರಾದ ಮುರಳಿ ಮನೋಹರ್ ಜೋಶಿ, ಉಮಾಭಾರತಿ, ವಿನಯ್​ ಕಟಿಯಾರ್​, ಸಾಧ್ವಿ ರಿತಂಭರಾ ಸೇರಿ 32 ಜನರು ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ.
ಇದನ್ನೂ ಓದಿ;ಅತ್ಯಾಚಾರಗೈದವನಿಗೆ 10 ವರ್ಷದ ಬಾಲೆಯನ್ನು ಮದುವೆ ಮಾಡಿಕೊಟ್ಟರು; ಆರು ತಿಂಗಳ ಬಳಿಕ ಆತ ಮಾಡಿದ್ದೇನು..?
ಸಿಬಿಐನ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಸುರೇಂದ್ರಕುಮಾರ್​ ಯಾದವ್​ ವರದಿಯನ್ನು ಓದಿದ ಬಳಿಕ ವಿಚಾರಣೆ ಕೊನೆಯ ಹಂತದಲ್ಲಿರುವುದು ತಿಳಿದುಬರುತ್ತದೆ. ಈ ಕಾರಣಕ್ಕಾಗಿ ಇನ್ನೊಂದು ತಿಂಗಳು ಕಾಲಾವಕಾಶ ನೀಡಲಾಗುತ್ತಿದೆ. ಅಂದರೆ, ಸೆ.30ರೊಳಗೆ ವಿಚಾರಣೆ ಪೂರ್ಣಗೊಳಿಸಿ ತೀರ್ಪನ್ನು ನೀಡುವಂತೆ ಸುಪ್ರೀಂ ಕೋರ್ಟ್​ ತಿಳಿಸಿದೆ. ಕೋರ್ಟ್​ ಈ ಮೊದಲು ಆಗಸ್ಟ್​ 31ರ ಗಡುವು ವಿಧಿಸಿತ್ತು.
ಅಯೋಧ್ಯೆಯಲ್ಲಿದ್ದ ಬಾಬ್ರಿ ಮಸೀದಿಯನ್ನು 1992ರ ಡಿಸೆಂಬರ್​ 6ರಂದು ಕರಸೇವಕರು ಧ್ವಂಸಗೊಳಿಸಿದ್ದರು. ಮಸೀದಿ ಇದ್ದ ಜಾಗದಲ್ಲಿ ಭವ್ಯ ರಾಮಮಂದಿರವಿತ್ತು. ಅಲ್ಲಿ ಮತ್ತೆ ರಾಮಮಂದಿನ ನಿರ್ಮಿಸಬೇಕು ಎಂಬುದು ಅವರ ಬೇಡಿಕೆಯಾಗಿತ್ತು. ಕರ ಸೇವಕರ ಹೋರಾಟಕ್ಕೆ ಎಲ್​.ಕೆ. ಅಡ್ವಾಣಿ, ಮುರಳಿ ಮನೋಹರ್​ ಜೋಶಿ ಈ ಹೋರಾಟದ ನೇತೃತ್ವ ವಹಿಸಿದ್ದರು.
ಇದನ್ನೂ ಓದಿ;ಆ.15ರಂದು ಸ್ಫೋಟಕ್ಕೆ ಸಂಚು ರೂಪಿಸಿದ್ದವನ ಬಂಧನ; ಸ್ಫೋಟಕ ವಶ; ಈತನಿಗಿತ್ತು ಐಸಿಸ್​ನೊಂದಿಗೆ ನೇರ ಸಂಪರ್ಕ
ಕಳೆದ ತಿಂಗಳು ವಿಡಿಯೋ ಕಾನ್ಫರೆನ್ಸ್​ ಮೂಲಕ ತಮ್ಮ ಹೇಳಿಕೆ ದಾಖಲಿಸಿದ್ದ ಅಡ್ವಾಣಿ, ರಾಜಕೀಯ ಕಾರಣಗಳಿಗಾಗಿ ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲಾಗಿದೆ ಎಂದು ಹೇಳಿದ್ದರು. ಎಲ್ಲ ಆರೋಪಿಗಳು ಹಾಗೂ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿರುವ ಕೋರ್ಟ್​ ತೀರ್ಪು ನೀಡುವುದೊಂದೇ ಬಾಕಿಯಿದೆ. ಹೀಗಾಗಿ ಇವರೆಲ್ಲರ ಭವಿಷ್ಯ ಏನಾಗುತ್ತೆ ಎಂಬ ಕುತೂಹಲ ಎದುರಾಗಿದೆ.
ಎಲ್ಲಿದೆ ನಿತ್ಯಾನಂದನ ಕೈಲಾಸ? ನಡೆಯುತ್ತಿರೋದ್ಹೇಗೆ? ಹಾಂಗ್​ಕಾಂಗ್​, ಅಮೆರಿಕ, ಬ್ರಿಟನ್​ನಲ್ಲಿವೆ ಹತ್ತಾರು ಕಂಪನಿ…!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × three =
Remember me
