ಮುಂಬೈ:ಭಾರತದ ಜನಪ್ರಿಯ ಫುಡ್​ ಡೆಲಿವರಿ ಆ್ಯಪ್​ ಜೊಮ್ಯಾಟೋ ಗ್ರಾಹಕರನ್ನು ತನ್ನತ್ತ ಸೆಳೆಯಲು ವಿವಿಧ ಆಫರ್​ಗಳನ್ನು ನಿರಂತರವಾಗಿ ಘೋಷಿಸುತ್ತಿರುತ್ತದೆ. ಅದಕ್ಕೆ ತಕ್ಕಂತೆ ಡೆಲಿವರಿ ಬಾಯ್ಸ್​ ಸಹ ಸಮಯಕ್ಕೆ ಸರಿಯಾಗಿ ಗ್ರಾಹಕರಿಗೆ ಆರ್ಡರ್​ ತಲುಪಿಸುತ್ತಿದ್ದು, ಕಂಪನಿಯ ಬೆಳವಣಿಗೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದಾರೆ.
ಇದೀಗ ಕೇಳಿ ಬಂದಿರುವ ಮಾಹಿತಿ ಪ್ರಕಾರ ಜೊಮ್ಯಾಟೋ ತನ್ನ ಫುಡ್​ ಡೆಲಿವರಿ ಬಾಯ್​ ಒಬ್ಬರ ಖಾತೆಯನ್ನು ಅಮಾನತು ಮಾಡಿದ್ದು, ಇದು ಹಲವರ ಕಣ್ಣು ಕೆಂಪಗಾಗಿಸಿದೆ. ತನ್ನ ಸಹೋದರಿ ಮದುವೆಗೆ ಕೆಲವೇ ದಿನಗಳು ಬಾಕಿ ಇರುವ ಸಮಯದಲ್ಲಿ ಈ ರೀತಿ ಆಗಿದ್ದು, ನೆಟ್ಟಿಗರು ಕಂಪನಿ ವಿರುದ್ಧ ಕಿಡಿಕಾರಿದ್ದಾರೆ.
We deeply value our delivery partners, and we understand the impact that actions like blocking an ID can have. Rest assured, we take such matters seriously. We assure you, we'll look into this. Our delivery partners are as important to us as our customers.
ಇದನ್ನೂ ಓದಿ:ಬಿಸಿಲಿನ ಝಳದಿಂದ ದೇಹವನ್ನು ಹೈಡ್ರೇಟೆಡ್ ಆಗಿಡುವ ಹಣ್ಣುಗಳಿವು; ನಿರಂತರ ಸೇವನೆಯಿಂದ ಹಲವಾರು ಪ್ರಯೋಜನಗಳು
ಈ ಕುರಿತು ಪೋಸ್ಟ್​ ಮಾಡಿರುವ ವಕೀಲ ಸಮೀರ್​ ಭಟ್ಟಾಚಾರ್ಯ ಮುಂಬೈನಲ್ಲಿ ಡೆಲಿವರಿ ಏಜೆಂಟ್​ಆಗಿ ಕೆಲಸ ಮಾಡುತ್ತಿರುವ ಆಯುಷ್​ ಸೈನಿ ಅಳುತ್ತಿರುವುದನ್ನು ಗಮನಿಸಿ ವಿಚಾರಿಸಿದಾಗ ಆತ ತನ್ನ ಸಹೋದರಿಯ ಮದುವೆ ಕೆಲವೇ ದಿನಗಳು ಬಾಕಿಯಿದ್ದು, ಈಗಿರುವಾಗಲೇ ಜೊಮ್ಯಾಟೋ ತನ್ನ ಐಡಿಯನ್ನು ಬ್ಲಾಕ್​ ಮಾಡಿರುವುದಾಗಿ ತಿಳಿಸಿದ್ದಾರೆ. ಆದರೆ, ಆತ ಎಷ್ಟರ ಮಟ್ಟಿಗೆ ನಿಜ ಹೇಳುತ್ತಿದ್ದಾನೆ ಎಂಬುದು ನನಗೆ ತಿಳಿಯಲಿಲ್ಲ. ಆತ ಆಳುತ್ತಿದದ್ದು ಮಾತ್ರ ನಿಜ ಎಂದು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ಇತ್ತ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ವೈರಲ್​ ಆಗುತ್ತಿದ್ದಂತೆ ಪ್ರತಿಕ್ರಿಯಿಸಿರುವ ಜೊಮ್ಯಾಟೋ, ನಾವು ಗ್ರಾಹಕರ ಜೊತೆಜೊತೆಗೆ ಡೆಲಿವರಿ ಏಜೆಂಟ್​ಗಳಿಗೂ ಹೆಚ್ಚು ಗೌರವವನ್ನು ನೀಡುತ್ತೇವೆ. ಆತನ ಐಡಿ ಬ್ಲಾಕ್​ ಆಗಿರುವ ವಿಚಾರ ನಮ್ಮ ಗಮನಕ್ಕೆ ಬಂದಿದ್ದು, ಕಂಪನಿಯೂ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತ್ವರಿತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
