ಹೈದರಾಬಾದ್​:ಗ್ರಾಹಕನ ಸಾಕು ನಾಯಿಯಿಂದ ರಕ್ಷಿಸಿಕೊಳ್ಳಲು ಹೋಗಿ ಮೂರನೇ ಮಹಡಿಯಿಂದ ಜಿಗಿದು ಡೆಲಿವರಿ ಬಾಯ್ ಗಾಯಗೊಂಡಿರುವ ಘಟನೆ ಹೈದರಾಬಾದ್‌ನ ಪಂಚವಟಿ ಕಾಲೋನಿಯಲ್ಲಿ ಈ ಘಟನೆ ನಡೆದಿದೆ.
ಮೊಹಮ್ಮದ್ ಇಲ್ಯಾಸ್(27) ಗಾಯಗೊಂಡ ವ್ಯಕ್ತಿಯಾಗಿದ್ದು, ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವ ಡೆಲಿವರಿ ಬಾಯ್​ ಆಗಿದ್ದಾನೆ. ಗ್ರಾಹಕರ ಆರ್ಡರ್​ನ್ನು ಕೊಡಲು ಹೋದಾಗ ಮೊಹಮ್ಮದನನ್ನು ಕಂಡು ಲ್ಯಾಬ್ರಡಾರ್ ನಾಯಿ ಬೊಗಳಲು ಪ್ರಾರಂಭಿಸಿದೆ.
ಇದನ್ನೂ ಓದಿ:ಮರು ಮತ ಎಣಿಕೆ ವೇಳೆ ಅಧಿಕಾರಿಗಳ ಮೇಲೆ ಹಲ್ಲೆ: 20 ವರ್ಷದ ಬಳಿಕ ಇಬ್ಬರು ಮಾಜಿ ಶಾಸಕರಿಗೆ ಜೈಲು ಶಿಕ್ಷೆ
ದಿಕ್ಕುತೋಚದ ಡೆಲಿವರಿ ಬಾಯ್​, ಭಯದಿಂದ ಕಟ್ಟಡದ ಮೂರನೇ ಮಹಡಿಯಿಂದ ಜಿಗಿದಿದ್ದಾನೆ. ಪರಿಣಾಮವಾಗಿ ಪಕ್ಕದ ಗೋಡೆಯ ಮೇಲೆ ಬಿದ್ದ ಇಲ್ಯಾಸ್‌ಗೆ ಹಲವು ಮೂಳೆ ಮುರಿದಿವೆ. ಗಾಯಗೊಂಡಿರುವ ಇಲ್ಯಾಸ್​ನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾನೆ.
ಇನ್ನು, ರಾಯದುರ್ಗ ಪೊಲೀಸರು ಇಲ್ಯಾಸ್ ಹೇಳಿಕೆ ದಾಖಲಿಸಿಕೊಂಡು, ಫ್ಲಾಟ್ ಮಾಲೀಕರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 289(ಪ್ರಾಣಿಗಳಿಗೆ ಸಂಬಂಧಿಸಿದಂತೆ ನಿರ್ಲಕ್ಷ್ಯ ವರ್ತನೆ) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.(ಏಜೆನ್ಸೀಸ್​)
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × 4 =
Remember me
