ಲಖನೌ:ಘಟನೆಯೊಂದರಲ್ಲಿ ಡೆಲಿವರಿ ಬಾಯ್​ ಓರ್ವ ಗ್ರಾಹಕರ ಮಾಹಿತಿಯನ್ನು ದುರುಪಯೋಗಪಡಿಸಿಕೊಂಡು ಅವರ ವಾಟ್ಸ್​ಆ್ಯಪ್​ ನಂಬರಿಗೆ ಸಂದೇಶ ಕಳುಹಿಸಿ ಪ್ರೇಮ ನಿವೇದನೆ ಮಾಡಿಕೊಂಡಿರುವ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.
ಈ ಸಂಬಂಧ ಕನಿಷ್ಕಾ ಎಂಬುವವರು ಟ್ವೀಟ್​ ಮಾಡಿದ್ದು, ಗ್ರಾಹಕರ ವೈಯಕ್ತಿಕ ಮಾಹಿತಿಗಳನ್ನು ಹೇಗೆ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಟ್ವೀಟ್​ ಮಾಡಿ ಸಂಸ್ಥೆಯ ವಿರುದ್ಧ ಕಿಡಿಕಾರಿದ್ಧಾರೆ.
ನಿನ್ನೆಯ ದಿನ ನಾನು ಆನ್​ಲೈನ್​ ಮೂಲಕ ಪಿಜ್ಜಾವನ್ನು ಆರ್ಡರ್​ ಮಾಡಿ ತರಿಸಿಕೊಂಡಿದೆ. ಕಬೀರ್​ ಎಂಬ ಡೆಲಿವರಿ ಕರೆ ಮಾಡಿ ನನ್ನ ಮನೆ ಬಾಗಿಲಿಗೆ ಆರ್ಡರ್​ ಮಾಡಿದ್ದ, ವಸ್ತುಗಳನ್ನು ತಂದುಕೊಟ್ಟು ತೆರಳಿದ್ದ. ಇದಾದ ಕೆಲ ಹೊತ್ತಿನ ಬಳಿಕ ರಾತ್ರಿ 11:37ರ ಸುಮಾರಿಗೆ ಆತ ನನ ವೈಯಕ್ತಿಕ ನಂಬರಿಗೆ ಮೆಸ್ಸೇಜ್​ ಮಾಡಿದ್ದಾನೆ.
ಇದನ್ನೂ ಓದಿ:VIDEO| ಸಿಂಹದ ಜತೆ ಹೋರಾಡಿ ಹಸುವನ್ನು ರಕ್ಷಿಸಿದ ರೈತ
ಆತ ನನ್ನನ್ನು ಇಷ್ಟುಪಟ್ಟಿದ್ದರೂ ಇದು ಹೇಳುವ ರೀತಿಯಲ್ಲ. ಆದರೆ, ಆರ್ಡರ್​ ಡೆಲಿವರಿ ಮಾಡುವ ಉದ್ದೇಶಕ್ಕಾಗಿ ನೀಡಿದ್ದ ನಂಬರ್​ಅನ್ನು ಆತ ದುರುಪಯೋಗಪಡಿಸಿಕೊಂಡಿದ್ದಾನೆ. ಗ್ರಾಹಕರ ವೈಯಕ್ತಿಕ ಮಾಹಿತಿಯನ್ನು ಒಬ್ಬ ಡೆಲಿವರಿ ಬಾಯ್​ ಹೇಗೆ ಪಡೆಯಲು ಸಾಧ್ಯ. ಕಬೀರ್​ ಎಂಬಾತನ ಬಳಿ ನನ್ನ ವೈಯಕ್ತಿ ಸಂಖ್ಯೆ ಹಾಗೂ ಮನೆಯ ವಿಳಾಸ ತಿಳಿದಿದ್ದು, ನಾಳೆಯ ದಿನ ನನಗೇನಾದರೂ ಹೆಚ್ಚು ಕಮ್ಮಿಯಾದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ.
ತಮಗಾದ ಕುರಿತು ಮಹಿಳೆ ಟ್ವಿಟರ್​ನಲ್ಲಿ ಅಸಮಾಧಾನ ಹೊರಹಾಕಿದ ಬೆನ್ನಲ್ಲೇ ನೆಟ್ಟಿಗರು ಕಂಪನಿ ಹಾಗೂ ಉದ್ಯೋಗಿಯ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಉತ್ತರಪ್ರದೇಶ ಪೊಲೀಸರು ಪರಿಶೀಲಿಸಿ ಕಠಿಣ ಕಾನೂನು ಕ್ರಮ ಜರುಗಿಸುವುದಾಗಿ ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 + fifteen =
Remember me
