ನವದೆಹಲಿ:ಫ್ರಾನ್ಸ್​ನಿಂದ 36 ರಫೇಲ್ ಯುದ್ಧ ವಿಮಾನಗಳ ಪೈಕಿ ಕೊನೆಯ ವಿಮಾನ ಭಾರತಕ್ಕೆ ಗುರುವಾರ ಬಂದಿಳಿಯಿತು. ಈಗಾಗಲೇ ಭಾರತದ ವಾಯುಪಡೆಯ (ಐಎಎಫ್)ಬತ್ತಳಿಕೆಯಲ್ಲಿ 35 ರಫೇಲ್ ಯುದ್ಧ ವಿಮಾನಗಳಿವೆ. ಭಾರತದ ಒಟ್ಟಾರೆ ಸೈನ್ಯ ಸಾಮರ್ಥ್ಯ ಹೆಚ್ಚಳ ಹಾಗೂ ಚೀನಾ ಗಡಿ ತಗಾದೆ ಹಿನ್ನೆಲೆಯಲ್ಲಿ ರಫೇಲ್ ಸೇರ್ಪಡೆ ಮಹತ್ವ ಪಡೆದಿದೆ.
ಭಾರತಕ್ಕೆ ತಲು ಪಲು ಟೇಕಾಫ್ ಆದ ನಂತರ ರಫೇಲ್ ಯುಎಇ ವಾಯುಪಡೆಯ ಟ್ಯಾಂಕರ್ ವಿಮಾನ ದಿಂದ ತ್ವರಿತವಾಗಿ ವಾಯುಮಾರ್ಗದಲ್ಲಿ ಇಂಧನ ತುಂಬಿಸಿಕೊಂಡು 36ನೇ ವಿಮಾನ ಭಾರತಕ್ಕೆ ಆಗಮಿಸಿತು ಎಂದು ಭಾರತೀಯ ವಾಯುಪಡೆ ಮಾಹಿತಿ ನೀಡಿದೆ. 2016 ಸೆಪ್ಟೆಂಬರ್ 23ರಂದು ಭಾರತ ಮತ್ತು ಫ್ರಾನ್ಸ್ ನಡುವೆ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸುವ ಒಪ್ಪಂದವಾಗಿತ್ತು.
ಫ್ರಾನ್ಸ್​ನ ಡಸಾಲ್ಟ್ ಏವಿಯೇಷನ್ ಕಂಪನಿಯು 59 ಸಾವಿರ ಕೋಟಿ ರೂ.ಗಳಿಗೆ ವಿಮಾನಗಳನ್ನು ಭಾರತಕ್ಕೆ ಪೂರೈಕೆ ಮಾಡಿದೆ. ಜಂಟಿ ಸಮರಾಭ್ಯಾಸ ಅರುಣಾಚಲ ಪ್ರದೇಶದಲ್ಲಿ ಚೀನಾ ಜತೆಗಿನ ಸಂಘರ್ಷದ ನಡುವೆಯೇ ಕೊನೆಯ ರಫೇಲ್ ಯುದ್ಧ ವಿಮಾನವನ್ನು ತನ್ನ ತೆಕ್ಕೆಗೆ ತೆಗೆದು ಕೊಂಡಿರುವ ಭಾರತೀಯ ವಾಯುಪಡೆ ಎರಡು ದಿನಗಳ ಜಂಟಿ ಸಮರಾಭ್ಯಾಸವನ್ನು ಗುರುವಾರ ಆರಂಭಿಸಿತು. ಈಶಾನ್ಯ ರಾಜ್ಯಗಳಲ್ಲಿ ಐಎಎಫ್​ನ ಮುಂಚೂಣಿ ಫೈಟರ್ ಜೆಟ್​ಗಳು ಸೇರಿ ಇತರೆ ಯುದ್ಧ ವಿಮಾನಗಳ ಸಮರಾಭ್ಯಾಸ ನಡೆಯಲಿದೆ.
ರಫೇಲ್ ಯುದ್ಧ ವಿಮಾನ ಸಾಮರ್ಥ್ಯ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:seven − five =
Remember me
