ನವದೆಹಲಿ:ಕರೊನಾ ಸಾಂಕ್ರಾಮಿಕದ ಮಧ್ಯೆಯೂ ದೇಶದಲ್ಲಿ ಚಿನ್ನದ ಖರೀದಿ ಅಧಿಕವಾಗಿದ್ದು, ಶೇ. 37ರಷ್ಟು ಬೇಡಿಕೆ ಹೆಚ್ಚಿದೆ. 2020ಕ್ಕೆ ಹೋಲಿಸಿದರೆ 2021ರ ಜನವರಿಯಿಂದ ಮಾರ್ಚ್​ವರೆಗೆ ಬಂಗಾರದ ಬೇಡಿಕೆ 140 ಟನ್ ಏರಿಕೆ ಕಂಡಿದೆ ಎಂದು ಗುರುವಾರ ಬಿಡುಗಡೆ ಯಾದ ವಿಶ್ವ ಚಿನ್ನ ಮಂಡಳಿಯ (ಡಬ್ಲ್ಯೂಜಿಸಿ) ವರದಿ ತಿಳಿಸಿದೆ.
ಚಿನ್ನದ ಬೇಡಿಕೆಯನ್ನು ವರ್ಷದಿಂದ ವರ್ಷಕ್ಕೆ ಮೌಲ್ಯದ ಲೆಕ್ಕಾಚಾರ ದಲ್ಲಿ ಹೇಳುವುದಾದರೆ ಶೇ. 57ಕ್ಕೆ ಏರಿದ್ದು, -ಠಿ;58,800 ಕೋಟಿ ವ್ಯವಹಾರದಷ್ಟಾಗುತ್ತದೆ ಎಂದು ಡಬ್ಲ್ಯೂಜಿಸಿ ಹೇಳಿದೆ. ಈ ಅವಧಿಯಲ್ಲಿ ಜಾಗತಿಕ ಬೇಡಿಕೆಯು ಭಾರತದ ಬೇಡಿಕೆಗೆ ತದ್ವಿರುದ್ಧ ವಾಗಿದ್ದು, ಶೇ. 23ರಷ್ಟು ತಗ್ಗಿದೆ. ಇದಕ್ಕೆ ಚಿನ್ನಾಧಾರಿತ ವಿನಿಮಯ ವಹಿವಾಟು ನಿಧಿಯ (ಇಟಿಎಫ್​ಎಸ್) ಹೊರಹರಿವು ಹೆಚ್ಚಳ ಹಾಗೂ ಕೇಂದ್ರೀಯ ಬ್ಯಾಂಕ್​ಗಳ ಖರೀದಿಯಲ್ಲಿ ಇಳಿಕೆ ಕಾರಣವಾಗಿದೆ ಎಂದು ವರದಿ ಅಭಿಪ್ರಾಯಪಟ್ಟಿದೆ.
ಬೇಡಿಕೆ ಏರಿಕೆಗೆ ಕಾರಣ?
ಜನವರಿಯಲ್ಲಿ ಕರೊನಾ ಅಲೆ ಇಳಿಮುಖ ವಾಗಿತ್ತು. ಜಾಗತಿಕ ಆರ್ಥಿಕತೆ ವೇಗ ಪಡೆದು ಕೊಳ್ಳುತ್ತಿತ್ತು. ಇದು ಖರೀದಿದಾರರಲ್ಲಿ ವಿಶ್ವಾಸ ಹಿಗ್ಗಿಸಿತು. ಇದರ ಪರಿಣಾಮ ಚಿನ್ನದ ಭೌತಿಕ ಖರೀದಿಯಲ್ಲಿ ಚೇತರಿಕೆ ಉಂಟುಮಾಡಿತು. ಭಾರತದಲ್ಲಿ ಆರಂಭವಾದ ಲಸಿಕೆ ಅಭಿ ಯಾನ ಮೂಡಿಸಿದ ಭರವಸೆಯಿಂದ ಚಿನಿವಾರ ಪೇಟೆಯ ಸಂವೇದನೆ ವಿಸ್ತಾರ ಗೊಂಡು ಬಂಗಾರದ ಬೇಡಿಕೆಯು ಶೇ. 39 (102.5 ಟನ್) ಏರಿಕೆ ಕಂಡಿತು ಎಂದು ಡಬ್ಲ್ಯೂಜಿಸಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಇಟಿಎಫ್ ಇಳಿಕೆ:ಜನವರಿ- ಮಾರ್ಚ್ ತ್ರೖೆಮಾಸಿಕದಲ್ಲಿ ಚಿನ್ನಾಧಾರಿತ ವಿನಿಮಯ ವಹಿವಾಟು ನಿಧಿಯ (ಇಟಿಎಫ್​ಎಸ್) ಶೇ. 71ರಷ್ಟು (161.8 ಟನ್) ಕುಸಿತ ದಾಖಲಿಸಿದೆ. 2020ರ ಇದೇ ವೇಳೆಗೆ ಇಟಿಎಫ್​ಎಸ್​ನ ವ್ಯವಹಾರ 549.6 ಟನ್ ಇತ್ತು. ಈ ವ್ಯತ್ಯಾಸಕ್ಕೆ ಇಟಿಎಫ್​ಎಸ್​ನಲ್ಲಿ ಅಧಿಕ ಹೊರಹರಿವು ಉಂಟಾಗಿದ್ದು ಕಾರಣ. ಬಡ್ಡಿ ದರದಲ್ಲಿ ಆದ ಪರಿಷ್ಕರಣೆಯಿಂದ ಚಿನಿವಾರ ಪೇಟೆಯ ಸಂವೇದನೆಯನ್ನು ಕುಗ್ಗುವಂತೆ ಮಾಡಿದೆ.
ಚಿನ್ನ ದರ ಕುಸಿತ:ದೆಹಲಿ ಚಿನಿವಾರ ಪೇಟೆಯಲ್ಲಿ ಶುಕ್ರವಾರ ಬಂಗಾರದ ದರ 191 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಂ ದರ 46,283 ರೂಪಾಯಿಗೆ ತಗ್ಗಿದೆ. ಬೆಳ್ಳಿ ದರ 1,062 ರೂಪಾಯಿ ತಗ್ಗಿದ್ದು, ಕೆ.ಜಿ. ಬೆಲೆ 67,785 ರೂಪಾಯಿ ಇಳಿಕೆಯಾಗಿದೆ.
ಕೋಟ್
ಕಳೆದ ಆರ್ಥಿಕ ಸಾಲಿನ ಕೊನೆಯ ತ್ರೖೆಮಾಸಿಕದಲ್ಲಿ ಕೋವಿಡ್ ಸಂಕಷ್ಟದ ನಡುವೆಯೂ ಬಂಗಾರದ ಬೇಡಿಕೆ ಧನಾತ್ಮಕವಾಗಿತ್ತು. 10 ಗ್ರಾಂ ಚಿನ್ನದ ಬೆಲೆ 50 ಸಾವಿರಕ್ಕಿಂತ ಕೆಳಕ್ಕೆ ಇಳಿದಿದ್ದು, ಜನರ ಮೇಲೆ ಮಾನಸಿಕವಾಗಿ ಪರಿಣಾಮ ಬೀರಿ ಖರೀದಿ ಶಕ್ತಿ ಹೆಚ್ಚಿತು. ಜತೆಗೆ ವಿವಾಹ ಇನ್ನಿತರ ಶುಭಕಾರ್ಯಗಳು ಋತು ಆರಂಭವಾಗಿದ್ದರಿಂದ ಚಿನ್ನಾಭರಣ ಮಳಿಗೆಗಳಲ್ಲಿ ವ್ಯವಹಾರ ಚುರುಕುಗೊಂಡಿತು.
|ಸೋಮಸುಂದರಂ ಭಾರತದ ಡಬ್ಲ್ಯೂಜಿಸಿ ಪಿಆರ್ ವ್ಯವಸ್ಥಾಪಕ ನಿರ್ದೇಶಕ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × three =
Remember me
