ನವದೆಹಲಿ:ಬಿಹಾರ ವಿಧಾನ ಸಭೆಯ ಚುನಾವಣೆಯ ಫಲಿತಾಂಶ ಅಂತಿಮಗೊಳ್ಳುತ್ತ ಸಾಗಿರುವಂತೆಯೇ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಬಿಹಾರದಲ್ಲಿ ಪ್ರಜಾಪ್ರಭುತ್ವ ಮತ್ತೆ ಗೆಲುವು ದಾಖಲಿಸಿದೆ. ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತನ ಗೆಲುವು ಇದು. ಎನ್​ಡಿಎ ಗೆಲುವಿಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ಹೇಳಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಮೋದಿ, ಬಿಹಾರ ಯುವಜನತೆ ಆತ್ಮನಿರ್ಭರ ಬಿಹಾರದ ಪರವಾಗಿ ನಿಂತಿದ್ದಾರೆ. ಎನ್​ಡಿಎ ಆಡಳಿತದ ಮೇಲೆ ಬಿಹಾರದ ಜನತೆ ವಿಶ್ವಾಸವಿಟ್ಟಿದ್ದಾರೆ. ಅವರ ಈ ಉತ್ಸಾಹ, ಹುಮ್ಮಸ್ಸು ಎನ್​ಡಿಎಯಲ್ಲಿ ಶಕ್ತಿಯನ್ನು ತುಂಬಿದೆ. ಬಿಹಾರದ ಸಂತುಲಿತ ಅಭಿವೃದ್ಧಿಗಾಗಿ ಎನ್​ಡಿಎ ಸರ್ಕಾರ ಪೂರ್ಣಬದ್ಧತೆಯೊಂದಿಗೆ ಕೆಲಸ ಮಾಡಲಿದೆ ಎಂದು ಮೋದಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ:ಇಮಾಮ್​ಗಂಜ್​ನಲ್ಲಿ ಜಿತನ್ ರಾಮ್​, ಹಸನ್​ಪುರನಲ್ಲಿ ತೇಜ್​ ಪ್ರತಾಪ್​ ಗೆಲುವಿನ ನಗೆ
ಬಿಹಾರದಲ್ಲಿ 15 ವರ್ಷಗಳ ಆಳ್ವಿಕೆಯ ನಂತರವೂ ಎನ್​ಡಿಎ ಸರ್ಕಾರದ ಆಡಳಿತದ ಬಗ್ಗೆ ಜನರಿಗೆ ವಿಶ್ವಾಸವಿದೆ. ಬಡವರು, ಮಧ್ಯಮವರ್ಗ, ಮಹಿಳೆಯರು ಎಲ್ಲರೂ ಸರ್ಕಾರದ ಪರವಾಗಿದ್ದಾರೆ. ಸಬ್ ಕಾ ಸಾಥ್​, ಸಬ್​ ಕಾ ವಿಕಾಸ್ ಸಬ್​ ಕಾ ವಿಶ್ವಾಸ್ ಎಂಬ ನಮ್ಮ ಮೂಲ ಮಂತ್ರದ ಮೇಲೆ ಎಲ್ಲರಿಗೂ ವಿಶ್ವಾಸವಿದೆ ಎಂಬುದಕ್ಕೆ ಜನಾದೇಶ ಸಿಕ್ಕಿದೆ ಎಂದು ಅವರು ಹೇಳಿದ್ದಾರೆ. (ಏಜೆನ್ಸೀಸ್)
ಬಿಹಾರ ಚುನಾವಣೆ 2020: ಅಧಿಕಾರ ಗದ್ದುಗೆ ಸಮೀಪ ಎನ್​ಡಿಎ-ಮಹಾಗಟಬಂಧನ್ ಪೈಪೋಟಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + eight =
Remember me
