ಮುಂಬೈ:ಟಾಟಾ ಸಮೂಹದ ವಿಸ್ತಾರ ಏರ್​​ಲೈನ್ಸ್​ ಸಿಬ್ಬಂದಿ ಲ್ಯಾಂಡಿಂಗ್ ಬಳಿಕ ಗಾಲಿಕುರ್ಚಿ ನೀಡಿಲ್ಲ ಎಂದು ಇಬ್ಬರು ಮಹಿಳಾ ಪ್ರಯಾಣಿಕರು ಸಂಸ್ಥೆಯ ವಿರುದ್ಧ ತಿರುಗಿಬಿದ್ದಿದ್ದು, 20 ಕೋಟಿ ರೂ. ಪರಿಹಾರ ಕೋರಿ ಎರಡು ಪ್ರಕರಣಗಳನ್ನು ದಾಖಲಿಸಿದ್ದಾರೆ.
ಮುಂಬೈ ಮೋನಿಕಾ ಗುಪ್ತಾ (49) ಮತ್ತು ಆಕೆಯ ತಾಯಿ ಉಷಾ ಎಂ. ಗುಪ್ತಾ (81) ಪ್ರಕರಣ ದಾಖಲಿಸಿದ ಪ್ರಯಾಣಿಕರು. ಇವರು ಸೆ. 14ರಂದು ಕೊಲಂಬೊದಿಂದ ಮುಂಬೈಗೆ ವಿಸ್ತಾರ ಏರ್​ಲೈನ್ಸ್​ನ ಬಿಸಿನೆಸ್ ಕ್ಲಾಸ್​ನಲ್ಲಿ ಬಂದಿಳಿದಿದ್ದರು.
ನಡೆಯಲು ಸಮಸ್ಯೆ ಎದುರಿಸುತ್ತಿದ್ದ ಇವರು ಲ್ಯಾಂಡಿಂಗ್ ಬಳಿಕ ಗಾಲಿಕುರ್ಚಿಗಳನ್ನು ಕೇಳಿದ್ದರು. ಆದರೆ ಅಲ್ಲಿನ ಸಿಬ್ಬಂದಿ ಗಾಲಿಕುರ್ಚಿ ನೀಡದ್ದರಿಂದ ತೀವ್ರ ನೊಂದಿರುವ ಇವರಿಬ್ಬರು ತಲಾ 10 ಕೋಟಿ ರೂಪಾಯಿಯಂತೆ ಸಂಸ್ಥೆ ವಿರುದ್ಧ ಕೇಸು ದಾಖಲಿಸಿದ್ದಾರೆ.
ಇದನ್ನೂ ಓದಿ:ತಮಿಳುನಾಡಿನ ಓಂ ಶಕ್ತಿ ದೇವಸ್ಥಾನದ ಸಂಸ್ಥಾಪಕ ಬಂಗಾರು ಅಡಿಗಳಾರ್ ವಿಧಿವಶ
ಮೊನಿಕಾ ಅವರು ತಮ್ಮ ಸಹೋದರ ಮುದಿತ್ ಗುಪ್ತಾ ಮೂಲಕ ಕೇಸು ದಾಖಲಿಸಿದ್ದಾರೆ. ಇವರು ತಮ್ಮ ಕುಟುಂಬದ ವಕೀಲ, ನಸ್​ಲೀಗಲ್ ಲಾ ಫರ್ಮ್​ನ ನಿಷ್ತಾ ಮಲಿಕ್ ಅವರ ಮುಖಾಂತರ ಮುಂಬೈನ ಗ್ರಾಹಕ ವಿವಾದ ಪರಿಹಾರ ಆಯೋಗಕ್ಕೆ ದೂರು ಸಲ್ಲಿಸಿದ್ದಲ್ಲದೆ, ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯಕ್ಕೂ ದೂರು ನೀಡಿದ್ದಾರೆ.
ನಾನು ಮತ್ತು ನಮ್ಮ ಕುಟುಂಬದ ಏಳು ಮಂದಿ ಅಮ್ಮನ 81ನೇ ಜನ್ಮದಿನ ಆಚರಣೆ ಸಲುವಾಗಿ ಶ್ರೀಲಂಕಾಗೆ ಹೋಗಿದ್ದು, ವಿಮಾನಯಾನದ ಟಿಕೆಟ್ ಬುಕ್ಕಿಂಗ್ ಮಾಡುವಾಗಲೇ ಇಬ್ಬರು ಮಹಿಳೆಯರಿಗೆ ಗಾಲಿಕುರ್ಚಿ ವ್ಯವಸ್ಥೆ ಬೇಕಾಗುತ್ತದೆ ಎಂದೂ ತಿಳಿಸಿದ್ದೆವು.
ಅಮ್ಮ ಹಾಗೂ ಸಹೋದರಿ ಇಬ್ಬರಿಗೂ ಅನಾರೋಗ್ಯ ಸಮಸ್ಯೆ ಇದೆ. ಅದಾಗ್ಯೂ ಕೊಲಂಬೊ ವಿಮಾನ ನಿಲ್ದಾಣದಲ್ಲಿ ಅವರಿಗೆ ಗಾಲಿಕುರ್ಚಿ ನೀಡಲು ನಿರಾಕರಿಸಿದರು. ನಂತರ ಈ ಬಗ್ಗೆ ವಿಸ್ತಾರ ಏರ್​ಲೈನ್ಸ್ ಗಮನಕ್ಕೆ ತಂದಾಗ ಅಲ್ಲಿನ ಕಂಟ್ರಿ ಹೆಡ್ ಬಂದು ಪರಿಸ್ಥಿತಿಯನ್ನು ಪರಿಶೀಲಿಸಿ ಕ್ಷಮೆ ಯಾಚಿಸಿದರು. ಅಲ್ಲದೆ ಅದು ಗ್ರೌಂಡ್​ ಹ್ಯಾಂಡ್ಲಿಂಗ್ ಮಾಡುವ ಶ್ರೀಲಂಕಾ ಏರ್​​ಲೈನ್ಸ್ ಜವಾಬ್ದಾರಿ ಎಂದು ಸಮಜಾಯಿಷಿ ನೀಡಿದರು.
ಇದನ್ನೂ ಓದಿ:ಏಯ್.. ಎಲ್ಲಿಗೆ ಬಂತು ಎಐ(AI)?; ಸೆX ರೋಬೋಗಳಲ್ಲೂ ಕೃತಕ ಬುದ್ಧಿಮತ್ತೆ; ಹಾಸಿಗೆಯಲ್ಲಿ ಸಂಗಾತಿಯೇ ಬೇಕಾಗಲ್ವಂತೆ!
ನಂತರ ಯುಕೆ-132 ಮುಂಬೈಗೆ ಸಂಜೆ 6.30ಕ್ಕೆ ಬರಬೇಕಾಗಿತ್ತು. ಆದರೆ ಛತ್ರಪತಿ ಶಿವಾಜಿ ಮಹಾರಾಜ ಅಂತಾರಾಷ್ಟ್ರೀಯ ವಿಮಾನನಿಲ್ದಾಣದಲ್ಲಿನ ಅನನುಕೂಲದ ಕಾರಣ ಎಲ್ಲ ವಿಮಾನಗಳನ್ನು ಹೈದರಾಬಾದ್​ಗೆ ಡೈವರ್ಟ್ ಮಾಡಲಾಗಿತ್ತು. ಇದರಿಂದ ಪ್ರಯಾಣ ಸುದೀರ್ಘವಾಗಿದ್ದಲ್ಲದೆ ಸರಿಯಾದ ಊಟ-ತಿಂಡಿ ಕೂಡ ಸಿಗಲಿಲ್ಲ. ವೈದ್ಯಕೀಯ ನೆರವು ಸಹ ಲಭ್ಯ ಇರಲಿಲ್ಲ. ನಂತರ ಲ್ಯಾಂಡಿಂಗ್ ಆದ ಬಳಿಕವೂ ಗಾಲಿಕುರ್ಚಿ ಸಿಗಲಿಲ್ಲ.
ಅವ್ಯವಸ್ಥೆ ಕಾರಣ ಅಸ್ವಸ್ಥಗೊಂಡಿದ್ದ ಮೊನಿಕಾ ಅವರಿಗೆ ಲ್ಯಾಂಡ್ ಆದ ಬಳಿಕವೂ ವೈದ್ಯರನ್ನು ಕರೆಸಿ ಉಪಚರಿಸಲಿಲ್ಲ. ಬದಲಿಗೆ ಯಾವುದೋ ನೋವುನಿವಾರಕ ಮಾತ್ರೆ-ಬಾಮ್ ಕೊಟ್ಟರಷ್ಟೇ ಎಂದು ಗುಪ್ತಾ ಆರೋಪಿಸಿದ್ದಾರೆ. ಬಳಿಕ ಎಷ್ಟೋ ಹೊತ್ತಿನ ಮೇಲೆ ಒಂದು ಗಾಲಿಕುರ್ಚಿ ಸಿಕ್ಕರೂ ಅದು ಸರಿ ಇರಲಿಲ್ಲ. ಇಷ್ಟೆಲ್ಲ ಆದಮೇಲೆ ವಿಸ್ತಾರದವರು ಪರಿಹಾರವಾಗಿ 1 ಸಾವಿರ ರೂ. ವೋಚರ್ ಕೊಟ್ಟರು ಎಂದು ಗುಪ್ತಾ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಎಲ್ಲ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಿದ್ದಾಗಿ ತಿಳಿಸಿದ್ದಾರೆ.
ಅರಿಶಿನ-ಕುಂಕುಮ ಬಳಸದೆ ಆಯುಧಪೂಜೆ ಮಾಡಿ: ಸರ್ಕಾರದಿಂದ ಹೊಸ ಆದೇಶ

ಪೆಟ್ರೋಲ್ ಬಂಕ್​ಗಳಲ್ಲಿನ ಮೋಸ ತಪ್ಪಿಸಲು ಸರ್ಕಾರಕ್ಕೆ ಹೊಸ ಬೇಡಿಕೆ: ವಿಡಿಯೋ ವೈರಲ್!

ಐಸ್​ ಕ್ರೀಮ್​ ಟ್ರಕ್​ಗಳಲ್ಲಿ ಶವ!: ಹೊರಗೆ ಮಕ್ಕಳು ಐಸ್ ​​ಕ್ರೀಮ್ ಮೆಲ್ಲುವ ಚಿತ್ರ, ಒಳಗೆ ಮೃತದೇಹಗಳು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × one =
Remember me
