ನವದೆಹಲಿ:ವಿಶ್ವಾದ್ಯಂತ ಹಬ್ಬಿರುವ ಕೋವಿಡ್​-19 ಪಿಡುಗಿನಿಂದಾಗಿ ಜಗತ್ತಿನಾದ್ಯಂತ ಲಕ್ಷಾಂತರ ಮದುವೆ ಕಾರ್ಯಕ್ರಮಗಳು ಮುಂದೂಡಲ್ಪಟ್ಟಿವೆ. ಕೆಲವು ಮುಂದಿನ ವರ್ಷಕ್ಕೆ ಮುಂದೂಡಲ್ಪಟ್ಟಿದ್ದರೆ, ಇನ್ನು ಹಲವು ಜೋಡಿಗಳು ಕೋವಿಡ್​-19 ಪರಿಸ್ಥಿತಿ ಸುಧಾರಿಸುವ ಸಮಯಕ್ಕಾಗಿ ಕಾಯುತ್ತಿವೆ.
ಆದರೆ, ಈ ದೇಶದ ಪ್ರಧಾನಿಯೊಬ್ಬರು ದೇಶದ ಹಿತದೃಷ್ಟಿಯಿಂದ ಮೂರನೇ ಬಾರಿಗೆ ತಮ್ಮ ಮದುವೆಯನ್ನು ಮುಂದೂಡಿದ್ದಾರೆ. ಹೌದು. ಕೋವಿಡ್​-19 ಪರಿಸ್ಥಿತಿ ನಿಯಂತ್ರಿಸುವುದು ಸೇರಿ ನಾನಾ ಕಾರಣಗಳಿಗಾಗಿ ಡೆನ್ಮಾರ್ಕ್​ನ ಪ್ರಧಾನಿ ಮೆಟ್ಟೆ ಫ್ರೆಡ್ರಿಕ್​ಸೆನ್​ ಈ ಹಿಂದೆ ನಿಗದಿಯಾಗಿದ್ದ ತಮ್ಮ ಮದುವೆಯನ್ನು ಎರಡು ಬಾರಿ ಮುಂದೂಡಿದ್ದರು. ಇದೀಗ ಅವರು ಜುಲೈ 17 ಮತ್ತು 18ರಂದು ಬ್ರುಸೆಲ್ಸ್​ನಲ್ಲಿ ಯುರೋಪಿಯನ್​ ಕೌನ್ಸಿಲ್​ ಸಭೆ ಆಯೋಜನೆಗೊಂಡಿದೆ. ಕೋವಿಡ್​-19 ನಿಯಂತ್ರಣದ ಜತೆಗೆ ಅದರಿಂದಾಗಿ ಆರ್ಥಿಕತೆ ಮೇಲೆ ಉಂಟಾಗಿರುವ ದುಷ್ಪರಿಣಾಮದಿಂದ ಪಾರಾಗುವ ಬಗೆ ಕುರಿತು ಈ ಸಭೆಯಲ್ಲಿ ಚರ್ಚೆಗಳಾಗಲಿವೆ. ಈ ಸಭೆಯಲ್ಲಿ ಪಾಲ್ಗೊಳ್ಳುವ ಅನಿವಾರ್ಯತೆಗೆ ಒಳಗಾಗಿರುವ ಮೆಟ್ಟೆ, ಬೋ ಟೆನ್​ಬರ್ಗ್​ ಜತೆಗಿನ ತಮ್ಮ ವಿವಾಹವನ್ನು ಮತ್ತೊಮ್ಮೆ ಮುಂದೂಡಿದ್ದಾರೆ.
ಈ ವಿಷಯವನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಹಂಚಿಕೊಂಡಿರುವ ಮೆಟ್ಟೆ, ನಾನು ಬೋಗೆ ಯೆಸ್​ ಎಂದು ಹೇಳುವ ದಿನಕ್ಕಾಗಿ ಕಾತರಿಸುತ್ತಿದ್ದೇನೆ. ಆದರೆ, ನಾನಾ ಕಾರಣಗಳಿಗಾಗಿ ಮದುವೆ ಮುಂದೂಡಿಕೆಯಾಗುತ್ತಲೇ ಇದೆ. ಈ ಬಾರಿ ನಾವು ಜುಲೈ 17ರಂದು ಒಂದಾಗಲು ನಿರ್ಧರಿಸಿದ್ದೆವು. ಆದರೆ ದುರದೃಷ್ಟವಶಾತ್​, ಅಂದೇ ಯುರೋಪಿಯನ್​ ಕೌನ್ಸಿಲ್​ ಸಭೆ ನಡೆಯಲಿದೆ. ಈ ಸಭೆಯಲ್ಲಿ ಪಾಲ್ಗೊಳ್ಳಲೇ ಬೇಕಾದ ಅನಿವಾರ್ಯತೆ ಇರುವುದರಿಂದ, ಮದುವೆಯನ್ನು ಕೂಡ ಅನಿವಾರ್ಯವಾಗಿ ಮುಂದೂಡಬೇಕಾಗಿದೆ. ಬೋ ತುಂಬಾ ತಾಳ್ಮೆಯ ವ್ಯಕ್ತಿಯಾಗಿರುವುದರಿಂದ, ನಮ್ಮಿಬ್ಬರ ಮದುವೆಗಾಗಿ ಇನ್ನಷ್ಟು ಕಾಲ ಕಾಯುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಚೀನಾ ರಾಯಭಾರ ಕಚೇರಿಗೆ 800 ಕುರಿ ನುಗ್ಗಿಸಿದ್ದ ಅಟಲ್​ ಬಿಹಾರಿ ವಾಜಪೇಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + one =
Remember me
