ತ್ರಿಸ್ಸೂರ್​:ಕೇರಳದ ದಂತ ವೈದ್ಯೆ ಕೊಲೆ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ಮಹೇಶ್​ ಕೊನೆಗೂ ಪೊಲೀಸರ ಬಲೆಗೆ ಬಿದ್ದಿದ್ದು, ವಿಚಾರಣೆ ವೇಳೆ ಕೊಲೆಗೆ ಕಾರಣವನ್ನು ಬಹಿರಂಗಪಡಿಸಿದ್ದಾನೆ. ಅಲ್ಲದೆ, ಬಚಾವ್​ ಆಗಲು ತಿಸ್ಸೂರ್​ನಲ್ಲಿ ಸಾಕಷ್ಟು ಅಡಗುತಾಣಗಳನ್ನು ಹುಡುಕಾಡಿದೆ ಎಂದಿದ್ದಾನೆ.
ಪವರಟ್ಟಿ ಮೂಲದ ಮಹೇಶ್​, ಸೆಪ್ಟೆಂಬರ್​ 29ರಂದು ದಂತ ವೈದ್ಯ ಡಾ. ಸೋನಾಗೆ ಕುಟ್ಟನೆಲ್ಲೂರಿನಲ್ಲಿರುವ ಕ್ಲಿನಿಕ್​ನಲ್ಲಿ ಕುಟುಂಬದ ಎದುರೇ ಚಾಕು ಇರಿದಿದ್ದ. ಹಲ್ಲೆ ಮಾಡಿದ ಬಳಿಕ ಪರಾರಿ ತ್ರಿಸ್ಸೂರ್​ನಲ್ಲಿ ಬಚ್ಚಿಕೊಳ್ಳಲು ಯತ್ನಿಸಿದ್ದ. ಇತ್ತ ಗಂಭೀರವಾಗಿ ಗಾಯಗೊಂಡಿದ್ದ ಸೋನಾ ಚಕಿತ್ಸೆ ಫಲಕಾರಿಯಾಗದೇ ಅಕ್ಟೋಬರ್​ 4ರಂದು ತ್ರಿಸ್ಸೂರ್​ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಮಂಗಳವಾರ ಸಂಜೆ ಪೂನಕುನ್ನಮ್​ನಲ್ಲಿ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ:ದಲಿತ ಶಾಸಕನ ಅಂತರ್ಜಾತಿ ವಿವಾಹ ಪ್ರಕರಣ: ಸ್ಫೋಟಕ ಹೇಳಿಕೆ ನೀಡಿದ ಯುವತಿ ಸೌಂದರ್ಯ..!
ಇದಕ್ಕೂ ಮುನ್ನ ಆತನೇ ಶರಣಾಗಲು ಚಿಂತಿಸಿದ್ದ ಎಂದು ವರದಿಯಾಗಿದೆ. ಕೊಲೆ ಮಾಡಿದ ಬಳಿಕ ತ್ರಿಸ್ಸೂರ್​ನ ಕುನ್ನಮ್​ಕುಲಂ ಮತ್ತು ಕೊಡಂಗುಲ್ಲರ್​ನಲ್ಲಿ ಬಚ್ಟಿಟ್ಟುಕೊಂಡಿದ್ದಾಗಿ ಸ್ವತಃ ಆರೋಪಿ ಮಹೇಶ್​ ಹೇಳಿಕೊಂಡಿದ್ದಾನೆ. ನಾನು ಸೋನಾಳ ಉದ್ಯಮ ಪಾಲುದಾರನಾಗಿದ್ದೆ. ಆಕೆ ತ್ರಿಸ್ಸೂರ್​ನಲ್ಲಿ ಬಿಡಿಎಸ್​ ಅಧ್ಯಯನ ಮಾಡುವಾಗ ನನಗೆ ಪರಿಚಯವಾದಳು. ಡಿವೋರ್ಸ್​ ನಂತರ ತ್ರಿಸ್ಸೂರ್​ಗೆ ಮರಳಿ ಕುರಿಯಾಚಿರಾ ಏರಿಯಾದಲ್ಲಿರುವ ಫ್ಲ್ಯಾಟ್​ನಲ್ಲಿ ನನ್ನೊಂದಿಗೆ ಲಿವ್​ ಇನ್​ ರಿಲೇಷನ್​ನಲ್ಲಿದ್ದಳು. ಎರಡು ವರ್ಷಗಳ ಹಿಂದೆ ಕುಟ್ಟನೆಲ್ಲೂರಿನಲ್ಲಿ ನಾನು ಮತ್ತು ಸೋನಾ ಡೆಂಟಲ್​ ಕ್ಲಿನಿಕ್​ ಸ್ಥಾಪಿಸಿದ್ದೆವು ಎಂದು ಮಹೇಶ್​ ಪೊಲೀಸರ ಮುಂದೆ ಬಹಿರಂಗಪಡಿಸಿದ್ದಾನೆ.
ಕ್ಲಿನಿಕ್​ಗೆ ನಾನು ಸಹ ಬಂಡವಾಳ ಹೂಡಿದ್ದೆ. ಕ್ಲಿನಿಕ್​ ಆರಂಭವಾದಾಗಿನಿಂದ ಸೋನಾ ನನಗೆ ಲಾಭವಾಗಲಿ ಅಥವಾ ಬಂಡವಾಳದ ಹಣವನ್ನಾಗಲಿ ಹಂಚಿಕೊಳ್ಳಲಿಲ್ಲ. ಕೇಳಿದರೂ ನನ್ನ ಮಾತನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಹೀಗಾಗಿ ಕ್ಲಿನಿಕ್​ನಿಂದ ಬರುವ ಇಡೀ ಆದಾಯವನ್ನು ತೆಗೆದುಕೊಳ್ಳಲು ಆರಂಭಿಸಿದೆ ಎಂದು ಮಹೇಶ್​ ಹೇಳಿದ್ದು, ಇದೇ ವಿಚಾರವಾಗಿ ಇಬ್ಬರ ನಡುವೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಇದನ್ನೂ ಓದಿ:ಹಾಥರಸ್​ ಘಟನೆ ಖಂಡಿಸಿ ತಂದೆಯ ಪ್ರತಿಭಟನೆ: ಇತ್ತ ದಲಿತ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಮಗನ ಬಂಧನ!
ಕೊಲೆಗೂ ಮುನ್ನ ಸೋನಾ, ಮಹೇಶ್​ ವಿರುದ್ಧ ದೂರು ಸಹ ನೀಡಿದ್ದಳು. ಇದೂ ಕೂಡ ಸೊನಾ ಕೊಲೆಗೆ ಕಾರಣವಾಗಿದೆ. ಇದೀಗ ಬಂಧನಕ್ಕೊಳಗಾಗಿರುವ ಆರೋಪಿ ಮಹೇಶ್​ ವಿರುದ್ಧ ವಿವಿಧ ಸೆಕ್ಷನ್​ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ನ್ಯಾಯಾಲಯದ ಎದುರು ಹಾಜರುಪಡಿಸಲಾಗುತ್ತದೆ.(ಏಜೆನ್ಸೀಸ್​)
ಯುವ ದಂತ ವೈದ್ಯೆಗೆ ಮುಳುವಾಯ್ತು ಲಿವ್ ಇನ್ ರಿಲೇಷನ್: ಕ್ಲಿನಿಕ್​ ಲ್ಯಾಬ್​ನಲ್ಲಿ ನಡೆಯಿತು ದುರಂತ! ​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × three =
Remember me
