ಪುಣೆ :ಇಡೀ ಜಗತ್ತಿನ ಜನಜೀವನವನ್ನು ಅಲ್ಲೋಕಲ್ಲೋಲ ಮಾಡಿರುವ ಕರೊನಾದಿಂದಾಗಿ ಆಗಿರುವ ಆರ್ಥಿಕ ಸಂಕಷ್ಟಗಳು ನೂರಾರು. ಈ ಸಮಸ್ಯೆಗಳಲ್ಲಿ ಕರೊನಾದಿಂದಾಗಿ ವಿಧಿಸಲಾದ ಲಾಕ್​ಡೌನ್​ ಸಮಯದಲ್ಲಿ ಜನರು ಉದ್ಯೋಗ ಕಳೆದುಕೊಂಡಿರುವುದೂ ಒಂದು. ಇಂಥ ಪರಿಸ್ಥಿತಿಯನ್ನು ಎದುರಿಸಲಾರದೆ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವರದಿಯಾಗಿದೆ.
ಮಹಾರಾಷ್ಟ್ರದ ಪುಣೆ ಜಿಲ್ಲೆಯಲ್ಲಿ ಇಂದು ತನ್ನ ಮನೆಯಲ್ಲೇ ಸಾವಿಗೆ ಶರಣಾಗಿರುವ ಯುವ ಇಂಜಿನಿಯರ್​ನ ಹೆಸರು ಋಷಿಕೇಶ್ ಮಾರುತಿ ಉಮಪ್. 29 ವರ್ಷ ವಯಸ್ಸಿನ ಉಮಪ್ ತನ್ನ ರೂಮಿನೊಳಗೆ ಮರಣ ಹೊಂದಿರುವುದನ್ನು ಆತನ ಕುಟುಂಬದವರು ಪೊಲೀಸರಿಗೆ ತಿಳಿಸಿದ್ದಾರೆ.
ಇದನ್ನೂ ಓದಿ:ಅವಳೂ ಯುವತಿ- ಇವಳೂ ಯುವತಿ… ಕೋರ್ಟ್​ಗೆ ಹೋಯ್ತು ಪ್ರೇಮಪ್ರಸಂಗ… ಗೊಂದಲದಲ್ಲಿ ನ್ಯಾಯಮೂರ್ತಿ…
ತನಿಖೆ ನಡೆಸಿದ ಪೊಲೀಸರು ಕಳೆದ ವರ್ಷದ ಕರೊನಾ ಲಾಕ್​ಡೌನ್ ಸಂದರ್ಭದಲ್ಲಿ ಉಮಪ್ ತನ್ನ ಕೆಲಸ ಕಳೆದುಕೊಂಡಿದ್ದ. ಈ ಬಗ್ಗೆ ತೀವ್ರ ಖಿನ್ನತೆಯನ್ನು ಎದುರಿಸುತ್ತಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ.(ಏಜೆನ್ಸೀಸ್)
VIDEO | ಹೊರಟೇಬಿಟ್ಟಿತು ಪರಿಸರಸ್ನೇಹಿ ವಿದ್ಯುತ್ ರೈಲು… ನೀವೂ ನೋಡಿ!

ಮತ್ತಿನಲ್ಲಿ ಮನೆಯೊಳಗೆ ನುಗ್ಗಿದರು, ವೃದ್ಧೆಯನ್ನು ಹೊಡೆದು ಸಾಯಿಸಿದರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
