ಚಂಡೀಗಢ:ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್​ಮೀತ್​ ರಾಮ್ ರಹೀಂ ಮತ್ತು ಇತರ ನಾಲ್ವರಿಗೆ ಕೊಲೆ ಅಪರಾಧಕ್ಕಾಗಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಡೇರಾದ ಮ್ಯಾನೇಜರ್​ ಆಗಿದ್ದ ರಣಜಿತ್ ಸಿಂಗ್ ಕೊಲೆ ಪ್ರಕರಣದಲ್ಲಿ ಈ ಶಿಕ್ಷೆ ನೀಡಲಾಗಿದೆ.
ಹರಿಯಾಣದ ಸೀರ್ಸಾದಲ್ಲಿ ಪ್ರಧಾನ ಆಶ್ರಮ ಹೊಂದಿರುವ ಡೇರಾ ಸಚ್ಚಾ ಸೌದಾ ಪಂಥದ ಅನುಯಾಯಿಯೂ ಆಗಿದ್ದ, ಮಾಜಿ ಡೇರಾ ಮ್ಯಾನೇಜರ್ ರಂಜಿತ್ ಸಿಂಗ್​​ರನ್ನು 2002ನೇ ಇಸವಿಯಲ್ಲಿ ಗುಂಡಿಕ್ಕಿ ಕೊಲ್ಲಲ್ಲಾಗಿತ್ತು. ಈ ಕೊಲೆ ಪ್ರಕರಣದಲ್ಲಿ ಸಿಬಿಐ ತನಿಖೆ ನಡೆಸಿ ಐಪಿಸಿ ಸೆಕ್ಷನ್​ 302 ಮತ್ತು 120 ಬಿ ಅಡಿ ಆರೋಪಪಟ್ಟಿ ಸಲ್ಲಿಸಿತ್ತು.
ಈ ಪ್ರಕರಣದ ವಿಚಾರಣೆ ನಡೆಸಿದ ಸಿಬಿಐ ವಿಶೇಷ ನ್ಯಾಯಾಲಯವು ಅಕ್ಟೋಬರ್ 8 ರಂದು ಡೇರಾ ಮುಖ್ಯಸ್ಥ ಗುರ್ಮೀತ್ ರಾಮ್ ರಹೀಮ್ ಮತ್ತು ಇತರ ಆರೋಪಿಗಳಾದ ಜಸ್ಬೀರ್, ಸಬ್ದಿಲ್, ಅವತಾರ್, ಕ್ರಿಶನ್ ಲಾಲ್ ಮತ್ತು ದಿ. ಇಂದರ್ ಸೇನ್ ಅವರನ್ನು ತಪ್ಪಿತಸ್ಥರೆಂದು ಘೋಷಿಸಿತ್ತು. ಇಂದು ಐವರೂ ಆರೋಪಿಗಳಿಗೆ ಜೀವಾವಧಿ ಕಾರಾಗೃಹ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ ಎಂದು ವರದಿಗಳು ತಿಳಿಸಿವೆ.(ಏಜೆನ್ಸೀಸ್)
ಹಾಡಿಯ ಜನರಿಗೆ ಕ್ರೈಸ್ತ​ ಧರ್ಮ ಬೋಧಿಸಿ ಮತಾಂತರದ ಯತ್ನ

ಪಾಪ ಪಾಂಡು ಖ್ಯಾತಿಯ ಹಿರಿಯ ಕಲಾವಿದ ಶಂಕರ್ ರಾವ್​ ಇನ್ನಿಲ್ಲ

ಕೋರ್ಟ್​ ಒಳಗೇ ವಕೀಲನ ಮೇಲೆ ಗುಂಡು! ಕೃತ್ಯಕ್ಕೆ ಕಂಟ್ರಿ ಪಿಸ್ತೋಲ್ ಬಳಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × two =
Remember me
