ಥಾಣೆ:ರಾಜಕೀಯ ಮುಖಂಡನ ವಿರುದ್ಧ ಹೇಳಿಕೆಯೊಂದನ್ನು ನೀಡಿ,ಮರಾಠಿ ನಟಿ ಪೇಚಿಗೆ ಸಿಲುಕಿದ್ದು, ಬಂಧನಕ್ಕೊಳಗಾಗಿದ್ದಾರೆ. ಬೇರೊಬ್ಬರು ಬರೆದ ಪೋಸ್ಟನ್ನು ಶೇರ್ ಮಾಡಿ ನಟಿ ಈಗ ಜೈಲುವಾಸ ಅನುಭವಿಸುವಂತಾಗಿದೆ.
ಎನ್​ಸಿಪಿ ನಾಯಕ ಶರದ್​ ಪವಾರ್​ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಮರಾಠಿ ನಟಿ ಕೇತ್ಕಿ ಚಿತಲೆ ಅವರನ್ನು ಭಾನುವಾರ ಪೊಲೀಸರು ಬಂಧಿಸಿದ್ದಾರೆ. ಮೇ 18 ರವರೆಗೆ ಪೊಲೀಸ್​ ಕಸ್ಟಡಿಗೆ ನೀಡಲಾಗಿದೆ.
ಬೇರೊಬ್ಬರು ಬರೆದ ಕಾಮೆಂಟ್ಸ್​ಅನ್ನು ಈ ನಟಿ ಹಂಚಿಕೊಂಡಿದ್ದಷ್ಟೇ, ಇದೇ ಕಾರಣಕ್ಕೆ ಆಕೆಯನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಇನ್ನೂ ಕೆಲವರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
23 ವರ್ಷದ ವೈದ್ಯಕೀಯ ವಿದ್ಯಾರ್ಥಿಯನ್ನು ಕೂಡ ಬಂಧಿಸಲಾಗಿದೆ. ಈ ಪ್ರಕರಣ ಇಷ್ಟೊಂದು ಗಂಭೀರತೆ ಪಡೆಯಲು ಅಂತಹ ಹೇಳಿಕೆ ಏನಿತ್ತು ಎಂಬುದಕ್ಕೆ ಇಲ್ಲಿದೆ ಉತ್ತರ.
ಮಹಾರಾಷ್ಟ್ರದಲ್ಲಿ ಶಿವಸೇನೆ ಮತ್ತು ಕಾಂಗ್ರೆಸ್​ನೊಂದಿಗೆ ಅಧಿಕಾರಿವನ್ನು ಹಂಚಿಕೊಂಡಿರುವ ಪವಾರ್​ ವಿರುದ್ಧ ಟ್ವಿಟ್ಟರ್​ನಲ್ಲಿ ಆಕ್ಷೇಪಾರ್ಹ ಕಾಮೆಂಟ್​ ಮಾಡಲಾಗಿತ್ತು. ಮುಂದೆ ನರಕ ಕಾಯುತ್ತಿದೆ, ಬ್ರಾಹ್ಮರಣದನ್ನು ನೀವು ದ್ವೇಷಿಸುತ್ತೀರಿ ಎಂಬ ಹೇಳಿಕೆಯನ್ನು ಶೇರ್​ ಮಾಡಿರುವುದೇ ನಟಿಗೆ ಸಂಕಷ್ಟಕ್ಕೆ ಕಾರಣವಾಗಿದೆ.(ಏಜೆನ್ಸೀಸ್​)
ರಥೋತ್ಸವದ ವೇಳೆ ಅವಘಡ: ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

ದಲಿತ‌ ಸಿಎಂ‌ ಆಗ್ತೇನೆ ಅಂತ ಕನಸು ಕಾಣೋನು ಹುಚ್ಚ…!: ಅದಕ್ಕೆ ಕಾರಣವೂ ಹೇಳಿದ್ರು ಸಚಿವ ಎ.ನಾರಾಯಣಸ್ವಾಮಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 + 19 =
Remember me
