ಫಿರೋಜಾಬಾದ್ :ಕೇಂದ್ರ ಸಚಿವೆ ಸ್ಮೃತಿ ಇರಾನಿ ಬಗ್ಗೆ ಅಶ್ಲೀಲ ಫೇಸ್‌ಬುಕ್ ಪೋಸ್ಟ್ ಪ್ರಕಟಿಸಿದ್ದ ಉತ್ತರಪ್ರದೇಶದ ಫಿರೋಜಾಬಾದ್​ನ ಪ್ರೊಫೆಸರ್​ ಶಹರ್ಯರ್ ಅಲಿ ಎಂಬುವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜಿಲ್ಲಾ ಹೆಚ್ಚುವರಿ ಸೆಷನ್ಸ್​ ನ್ಯಾಯಾಧೀಶರ ಮುಂದೆ ನಿನ್ನೆ ಶರಣಾದ ಅಲಿ, ಜಾಮೀನು ಕೋರಿದರು. ಜಾಮೀನು ನಿರಾಕರಿಸಿದ ಕೋರ್ಟ್​ ಅವರ ಬಂಧನಕ್ಕೆ ಆದೇಶಿಸಿತು ಎನ್ನಲಾಗಿದೆ.
ಫಿರೋಜಾಬಾದ್​ನ ಎಸ್‌ಆರ್‌ಕೆ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಶಹರ್ಯಾರ್ ಅಲಿ, ಮಾರ್ಚ್​ ತಿಂಗಳಲ್ಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ಬಗ್ಗೆ ಅವಹೇಳನಕಾರಿ ಸಾಮಗ್ರಿಯನ್ನು ಫೇಸ್​ಬುಕ್​ ಖಾತೆಯಲ್ಲಿ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದು, ಕಾಲೇಜಿನ ಆಡಳಿತ ಅವರಿಗೆ ಅಮಾನತು ನೋಟಿಸ್ ನೀಡಿತ್ತು ಎನ್ನಲಾಗಿದೆ.
ಇದನ್ನೂ ಓದಿ:ಸಿಎಂ ಬದಲಾವಣೆ ಊಹಾಪೋಹ: ಬಿ.ವೈ.ರಾಘವೇಂದ್ರ
ಈ ಪ್ರಕರಣದಲ್ಲಿ ಬಂಧನದಿಂದ ರಕ್ಷಣೆ ಕೋರಿ, ಪ್ರೊಫೆಸರ್​ ಅಲಿ, ಅಲಹಾಬಾದ್​ ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು. ಅದು ತಿರಸ್ಕರಿಸಲ್ಪಟ್ಟ ಮೇಲೆ ಸುಪ್ರೀಂ ಕೋರ್ಟ್​ ಮೊರೆ ಹೋಗಿದ್ದರು. ಆದರೆ ಅಲಿ ಅವರ ಅರ್ಜಿಯನ್ನು ಇತ್ತೀಚೆಗೆ ಸುಪ್ರೀಂ ಕೋರ್ಟ್​ ತಿರಸ್ಕರಿಸಿದ ಹಿನ್ನೆಲೆಯಲ್ಲಿ, ಅವರು ಸೆಷನ್ಸ್​ ನ್ಯಾಯಾಲಯದ ಮುಂದೆ ಆತ್ಮ ಸಮರ್ಪಣೆ ಮಾಡಿಕೊಂಡರು ಎನ್ನಲಾಗಿದೆ.(ಏಜೆನ್ಸೀಸ್)
ಲಾಕಪ್​ ಕಿರುಕುಳಕ್ಕೆ ದಲಿತ ಮಹಿಳೆ ಸಾವು: ಮೂವರು ಪೊಲೀಸರು ವಜಾ

ಚಿನ್ನವನ್ನು ಗುದದ್ವಾರದಲ್ಲಿ ಮುಚ್ಚಿಟ್ಟುಕೊಂಡು ತಂದ ಪ್ರಯಾಣಿಕ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × three =
Remember me
