ನವದೆಹಲಿ:ಮದುವೆಗೂ ಮುನ್ನ ಅಥವಾ ನಂತರ ಸಮಯ ಯಾವುದೇ ಇರಲಿ ಇಂದಿನ ದಿನದಲ್ಲಿ ವೆಡ್ಡಿಂಗ್​ ಫೋಟೋಶೂಟ್​ ನವ ಜೋಡಿಯ ಅವಿಭಾಜ್ಯ ಅಂಗವಾಗಿದೆ. ಬಹುತೇಕ ಜೋಡಿಗಳು ತಮ್ಮ ವೆಡ್ಡಿಂಗ್​ ಫೋಟೋ ಮತ್ತು ವಿಡಿಯೋಗಳು ತುಂಬಾ ವಿಭಿನ್ನವಾಗಿರಬೇಕೆಂಬ ಕನಸನ್ನೂ ಹೊಂದಿರುತ್ತಾರೆ. ಸಾಧ್ಯವಾದಷ್ಟು ಸುಂದರವಾದ ತಾಣಗಳಲ್ಲಿ ಸೆರೆಹಿಡಿಯಬೇಕೆಂದು ಬಯಸುತ್ತಾರೆ. ಇನ್ನು ಕೆಲವು ಜೋಡಿ ತುಂಬಾ ವಿಭಿನ್ನವಾಗಿರಬೇಕೆಂದು ಸಾಹಸಕ್ಕೂ ಕೈಹಾಕುತ್ತಾರೆ. ಅದಕ್ಕೆ ತಾಜಾ ಉದಾಹಣೆಯಂತಿದೆ ಈ ವಿಡಿಯೋ.
ನವಜೋಡಿಯೊಂದು ಬಾಲಿವುಡ್​ ಸ್ಟೈಲ್​ನಲ್ಲಿ ಬೈಕ್​ ಸಾಹಸ ಮಾಡುವ ಪರಿಕಲ್ಪನೆಯಲ್ಲಿ ಪ್ರೀ ವೆಡ್ಡಿಂಗ್​ ಫೋಟೋಶೂಟ್​ ಮಾಡಿಸಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.
ಬೆಸ್ಟ್​ ಆಫ್​ ದಿ ಬೆಸ್ಟ್​ ಹೆಸರಿನ ಟ್ವಿಟರ್​ ಖಾತೆಯಲ್ಲಿ ವಿಡಿಯೋ ಅಪ್​ಲೋಡ್​ ಆಗಿದೆ. ವಿಡಿಯೋದಲ್ಲಿ ಮದುವೆಯ ಸಾಂಪ್ರದಾಯಿಕ ಉಡುಗೆಯಲ್ಲಿ ಬೈಕ್​ ಮೇಲೆ ಕುಳಿತು ಸಾಹಸ ಮಾಡುವ ಮೂಲಕ ಕ್ಯಾಮೆರಾಗೆ ಪೋಸ್​ ನೀಡಿದ್ದಾರೆ. ಹಾಗಂತ ನವಜೋಡಿ ನಿಜವಾಗಿಯೂ ಸಾಹಸ ಮಾಡಿಲ್ಲ. ಕ್ರೇನ್​ ಮತ್ತು ರೋಪ್​ನ ನೆರವಿನಿಂದ ಈ ರೀತಿಯ ಫೋಟೋಶೂಟ್​ ಮಾಡಿಸಿದ್ದಾರೆ.
ಅಡ್ಡಲಾಗಿ ಕಾರೊಂದನ್ನು ನಿಲ್ಲಿಸಿ, ಬೈಕ್​ಗೆ ರೋಪ್​ ಕಟ್ಟಿ ಕ್ರೇನ್​ ಮೂಲಕ ಕಾರಿನ ಮೇಲಿಂದ ನವಜೋಡಿ ಬೈಕ್​ ಹಾರಿಸುತ್ತಿರುವಂತೆ ವಿಭಿನ್ನವಾಗಿ ಫೋಟೋಶೂಟ್​ ಮಾಡಿಸಲಾಗಿದೆ. ವಿಡಿಯೋವನ್ನು ಅ.27ರಂದು ಟ್ವಿಟರ್​ನಲ್ಲಿ ಪೋಸ್ಟ್​ ಮಾಡಲಾಗಿದ್ದು, ಈವರೆಗೂ 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. ವಿಡಿಯೋ ನೋಡಿ ಫಿದಾ ಆಗಿರುವ ನೆಟ್ಟಿಗರು ಕಾಮೆಂಟ್​ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.(ಏಜೆನ್ಸೀಸ್​)
pre-wedding shoots – i’m getting thispic.twitter.com/Ynwf7Kxr6a
— Best of the Best (@bestofallll)October 27, 2022

https://www.vijayavani.net/the-rise-and-orchestrated-fall-of-the-sports-live-gaming-industry/
ಇನ್ನೇನು ತಾಳಿಕಟ್ಟಬೇಕು, ನಾಳೆಯೇ ಹನಿಮೂನ್​… ಅಷ್ಟರಲ್ಲಿ ಪೊಲೀಸರ ಅತಿಥಿಯಾದ ವರ! ನಿಟ್ಟುಸಿರು ಬಿಟ್ಟ ವಧುವಿನ ಕುಟುಂಬಸ್ಥರು

ಮೈಸೂರು ದಸರಾಗಿಂತ ಅದ್ದೂರಿಯಾಗಿ ಸಾಹಿತ್ಯ ಸಮ್ಮೇಳನ ನಡೆಯಬೇಕು: ಹಾವೇರಿಯಲ್ಲಿ ಅಧಿಕಾರಿಗಳಿಗೆ ಸಚಿವ ಸೂಚನೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 3 =
Remember me
