ಬರೇಲಿ:ಉತ್ತರ ಪ್ರದೇಶದ ಬರೇಲಿಯ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದ್ದು, ಸಾಕ್ಷ್ಯಾಧಾರಗಳ ಆಧಾರದ ಮೇಲೆ ನಕಲಿ ದೇಸಿ ತುಪ್ಪವನ್ನು ತಯಾರಿಸುವವರ ವಿರುದ್ಧ ನ್ಯಾಯಾಲಯವು ಕಠಿಣ ಕ್ರಮ ಕೈಗೊಂಡಿದೆ. 14 ವರ್ಷಗಳ ನಂತರ ಈ ಪ್ರಕರಣದ ತೀರ್ಪು ಹೊರಬಂದಿದ್ದು ನ್ಯಾಯಾಲಯವು ಐವರಿಗೆ ಶಿಕ್ಷೆ ಜತೆಗೆ 50 ಸಾವಿರ ರೂ. ದಂಡ ವಿಧಿಸಿದೆ.ಬುಲಂದ್‌ಶಹರ್‌ನ ನಾಲ್ವರು ಮತ್ತು ಬರೇಲಿಯ ಒಬ್ಬರು ಈ ಕಲಬೆರಕೆ ದಂಧೆಯಲ್ಲಿ ತೊಡಗಿದ್ದರು. ಬರೇಲಿಯ ಒಂದು ಪ್ರದೇಶದಲ್ಲಿ ನೆಲಮಾಳಿಗೆಯೊಳಗೆ ನಕಲಿ ದೇಸಿ ತುಪ್ಪ ತಯಾರಿಸುವ ಕೆಲಸ ನಡೆಯುತ್ತಿತ್ತು. ಸಿಕ್ಕ ಮಾಹಿತಿ ಮೇರೆಗೆ 2009ರ ಅಕ್ಟೋಬರ್ 15ರಂದು ಸುಭಾಷ್ ನಗರ ಪೊಲೀಸ್ ಠಾಣೆಯ ಸರ್ವೋದಯ ನಗರದ ಬಳಿಯಿರುವ ಅನಂತ್ ಸಿಮೆಂಟ್ ಟ್ರೇಡರ್ಸ್​ನ ಬೇಸ್ ಮೆಂಟ್ ಮೇಲೆ ಪೊಲೀಸರು ದಾಳಿ ನಡೆಸಿ ಬುಲಂದ್‌ಶಹರ್‌ನ ದಿವಿಯ ಮಹೇಶ್, ಯೋಗೇಂದ್ರ, ಲೋಕಮಾನ್, ಸತ್ಯ ಪ್ರಕಾಶ್ ಮತ್ತು ಬರೇಲಿಯ ಬಿಹಾರಿಪುರದ ಸುಬೋಧ್ ಎಂಬಾತನನ್ನೂ 5 ಬಂಧಿಸಿದ್ದರು. ದಾಳಿ ವೇಳೆ ಸ್ಥಳದಿಂದ ಇಬ್ಬರು ಪರಾರಿಯಾಗಿದ್ದರು.ಇದನ್ನೂ ಓದಿ:ಪುಲ್ವಾಮಾ: ಅನುಮಾನಾಸ್ಪದವಾಗಿ ಪತ್ತೆಯಾಯ್ತು ಯೋಧನ ಮೃತದೇಹ..ಈ ವೇಳೆ ಕುಲುಮೆಗೆ ಅಳವಡಿಸಿದ್ದ ಅಲ್ಯೂಮಿನಿಯಂ ಡ್ರಮ್​​ನಲ್ಲಿ ಬಿಸಿ ದೇಸಿ ತುಪ್ಪ ತಯಾರಿಸುತ್ತಿರುವುದು ಪತ್ತೆಯಾಗಿದೆ. ಈ ನಕಲಿ ದೇಸಿ ತುಪ್ಪವನ್ನು ಡಬ್ಬಗಳಲ್ಲಿ ತುಂಬಿಸಲಾಗುತ್ತಿತ್ತು. ರಿಫೈನ್ಡ್ ಎಣ್ಣೆ, ವನಸ್ಪತಿ ತುಪ್ಪ, ದೇಸಿ ತುಪ್ಪದಲ್ಲಿ ಮಿಶ್ರಣ ಮಾಡಲು ಟಿಸಿಎ ಪದಾರ್ಥವನ್ನು ಪೊಲೀಸರು ಸ್ಥಳದಿಂದ ವಶಪಡಿಸಿಕೊಂಡಿದ್ದರು. ಇದೇ ವೇಳೆ ಸ್ಥಳದಿಂದ ಸುಮಾರು 26 ಕ್ವಿಂಟಾಲ್ ನಕಲಿ ದೇಸಿ ತುಪ್ಪವನ್ನು ಪೊಲೀಸರು ವಶಪಡಿಸಿಕೊಂಡಿದ್ದರು.
ಈ ಪ್ರಕರಣದಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ಮುಂದುವರೆದಿದ್ದು, ಪಬ್ಲಿಕ್ ಪ್ರಾಸಿಕ್ಯೂಟರ್ ಪ್ರಕರಣಕ್ಕೆ ಸಂಬಂಧಿಸಿದಂತ ಎಂಟು ಸಾಕ್ಷಿಗಳನ್ನು ಹಾಜರುಪಡಿಸಿದ್ದರು. ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಅರವಿಂದ್ ಕುಮಾರ್ ಯಾದವ್ ವಾದ-ಪ್ರತಿವಾದವನ್ನು ಆಲಿಸಿ ಅವರ ನ್ಯಾಯಾಲಯವು ಮಹೇಶ್, ಯೋಗೇಂದ್ರ, ಲೋಕಮಾನ್, ಬುಲಂದ್‌ಶಹರ್‌ನ ಸತ್ಯ ಪ್ರಕಾಶ್ ಮತ್ತು ಬರೇಲಿಯ ಸುಬೋಧ್ ಅವರನ್ನು ಅಪರಾಧಿಗಳೆಂದು ಘೋಷಿಸಿ ಜೀವಾವಧಿ ಶಿಕ್ಷೆ ವಿಧಿಸಿ, ಐವರು ಅಪರಾಧಿಗಳಿಗೆ ತಲಾ 50,000 ರೂಪಾಯಿ ದಂಡವನ್ನೂ ನ್ಯಾಯಾಲಯ ವಿಧಿಸಿದೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 10 =
Remember me
