ನವದೆಹಲಿ:ಲಡಾಖ್​ ಪೂರ್ವಭಾಗದಲ್ಲಿ ಸೇನೆಯನ್ನು ಹಿಂದೆಗೆದುಕೊಳ್ಳುವ ಬಗ್ಗೆ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್​ ದೋವಲ್​ ಮತ್ತು ಚೀನಾದ ವಿದೇಶಾಂಗ ಸಚಿವ ವ್ಯಾಂಗ್​ ಯೀ ನಡುವೆ ವಿಡಿಯೋ ಕಾಲ್​ ಮೂಲಕ ಮಾತುಕತೆ ನಡೆದಿದ್ದರೂ, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಜಟಿಲಗೊಂಡಿದೆ ಎಂದು ಚೀನಾ ಹೇಳಿದೆ.
ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಚೀನಾ, ಭಾರತ ಮತ್ತು ಚೀನಾ ನಡುವಿನ ದ್ವಿಪಕ್ಷೀಯ ಸಂಬಂಧ ತುಂಬಾ ಜಟಿಲವಾಗಿದೆ. ಉಭಯ ರಾಷ್ಟ್ರಗಳು ಒಪ್ಪಿತವಾಗಿರುವ ವ್ಯೋಹಾತ್ಮಕ ನಿರ್ಧಾರಗಳಿಗೆ ಬದ್ಧರಾಗುಳಿಯಬೇಕೆ ಹೊರತು, ಬೆದರಿಕೆ ತಂತ್ರವನ್ನು ಅನುಸರಿಸಬಾರದು ಎಂದು ಹೇಳಿದೆ. ದೋವಲ್​-ವ್ಯಾಂಗ್​ ನಡುವಿನ ಮಾತುಕತೆಯ ಬಳಿಕ ಚೀನಾ ಈ ಹೇಳಿಕೆ ಬಿಡುಗಡೆ ಮಾಡಿದೆ.
ಜೂನ್​ 30ರ ಸಭೆ ಹಾಗೂ ಅದಕ್ಕೂ ಮೊದಲು ಭಾರತದ 14 ಕೋರ್​ ಕಮಾಂಡರ್​ ಲೆಫ್ಟಿನೆಂಟ್​ ಜನರಲ್​ ಹರೀಂದರ್ ಸಿಂಗ್​ ಮತ್ತು ಸೌತ್​ ಕ್ಸಿನ್​ಕಿಯಾಂಗ್​ ಮಿಲಿಟರಿ ವಲಯದ ಕಮಾಂಡರ್​ ಮೇಜರ್​ ಜನರಲ್​ ಲಿಯು ಲಿನ್​ ನಡುವಿನ ಮಾತುಕತೆಗಳನ್ನು ಪ್ರಸ್ತಾಪಿಸಿ ಚೀನಾ ಈ ಹೇಳಿಕೆ ನೀಡಿದೆ.
ಇದನ್ನೂ ಓದಿ:ಕೆ.ಪಿ. ಓಲಿಗೆ ಸಂಕಷ್ಟ, ಹೊಸ ಗಡಿಠಾಣೆ ಬಿಟ್ಟು ಓಡಿದರಾ ನೇಪಾಳ ಯೋಧರು
ಲಡಾಖ್​ ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಉಭಯ ರಾಷ್ಟ್ರಗಳ ನಡುವಿನ ಮಿಲಿಟರಿ ಮತ್ತು ರಾಜತಾಂತ್ರಿಕ ಸಭೆಗಳಲ್ಲಿ ಸಾಕಷ್ಟು ಪ್ರಗತಿ ಸಾಧಿಸಲಾಗಿದೆ. ಈ ವಿಷಯವಾಗಿ ಒಮ್ಮತಾಭಿಪ್ರಾಯಕ್ಕೆ ಬರುವ ನಿಟ್ಟಿನಲ್ಲಿ ಮಾತುಕತೆಗಳನ್ನು ಮುಂದುವರಿಸಲು ಸಮ್ಮತಿಸಲಾಗಿದೆ. ಈ ಸಭೆಯಲ್ಲಿ ಒಪ್ಪಿಕೊಳ್ಳಲಾದ ಅಂಶಗಳನ್ನು ಶೀಘ್ರವೇ ಅನುಷ್ಠಾನಕ್ಕೆ ತರಬೇಕು. ಹಾಗೂ ಆದಷ್ಟು ಬೇಗ ಸೇನೆಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕು ಎಂದು ವ್ಯಾಂಗ್​ ಅವರು ದೋವಲ್​ ಅವರಿಗೆ ಹೇಳಿದ್ದರು ಎನ್ನಲಾಗಿದೆ.
ದೋವಲ್​ ಮತ್ತು ವ್ಯಾಂಗ್​ ನಡುವಿನ ಮಾತುಕತೆಯ ಬಳಿಕ ಹೇಳಿಕೆ ಬಿಡುಗಡೆ ಮಾಡಿದ್ದ ಭಾರತ, ಲಡಾಖ್​ನಲ್ಲಿ ಆದಷ್ಟು ಬೇಗ ಸೇನೆಯನ್ನು ಹಿಂಪಡೆಯುವ ಪ್ರಕ್ರಿಯೆ ಮುಗಿಸಬೇಕು ಮತ್ತು ಹಂತ ಹಂತವಾಗಿ ಬಿಕ್ಕಟ್ಟನ್ನು ಪರಿಹರಿಸಬೇಕು ಎಂದು ಹೇಳಿತ್ತು.
ಕರೊನಾ ಸೋಂಕಿಗೆ ಟೊಯೋಟಾ ಕಂಪನಿ ಉದ್ಯೋಗಿ ಬಲಿ, ತಂದೆ ಸತ್ತ ನಾಲ್ಕೇ ದಿನಕ್ಕೆ ಮಗನ ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + twenty =
Remember me
