ಅಹಮದಾಬಾದ್​:ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡು ಆ ಮಹಿಳೆಗೆ ಶೇ.71 ಸುಟ್ಟುಗಾಯಗಳಾಗಿದ್ದವು. ಇದರಿಂದ ಸುಧಾರಿಸಿಕೊಳ್ಳುವ ವೇಳೆಗೆ ಆಕೆಗೆ ಕರೊನಾ ವೈರಾಣು ಸೋಂಕು ತಗುಲಿರುವುದು ಖಚಿತಪಟ್ಟಿತು. ಒಂದೆಡೆ ಚರ್ಮ ಕಸಿ ಮಾಡುವ ಮೂಲಕ ಸುಟ್ಟಗಾಯಗಳಿಗೆ ಚಿಕಿತ್ಸೆ ಕೊಡುತ್ತಲೇ ವೈದ್ಯರು ಕೋವಿಡ್​-19ಕ್ಕೂ ಚಿಕಿತ್ಸೆ ಕೊಟ್ಟರು. ಇದೀಗ ಆಕೆ ಕರೊನಾ ಗೆದ್ದಿದ್ದು, ಸುಟ್ಟುಗಾಯಗಳಿಂದಲೂ ಚೇತರಿಸಿಕೊಳ್ಳುತ್ತಿದ್ದಾರೆ.
ಮೇ 9ರಂದು ಮನೆಯಲ್ಲಿ ಅಡುಗೆ ಮಾಡುತ್ತಿದ್ದಾಗ ಈ 23 ವರ್ಷದ ಮಹಿಳೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತು. ನೆರೆಹೊರೆಯವರು ಈಕೆಯನ್ನು ರಕ್ಷಿಸಿ ಅಹಮದಾಬಾದ್​ನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಶೇ.71 ಸುಟ್ಟುಗಾಯಗಳಾಗಿದ್ದವು. ಈಕೆಗೆ ಚರ್ಮ ಕಸಿ ಮಾಡಲು ವೈದ್ಯರು ಸಿದ್ಧರಾಗಿದ್ದರು. ಅದಕ್ಕಾಗಿ ಕರ್ನಾಟಕದ ಬೆಳಗಾವಿಯಲ್ಲಿದ್ದ ಆಕೆಯ ಸಂಬಂಧಿಕರಿಂದ ಚರ್ಮವೂ ಬಂದಿತ್ತು. ಆದರೆ ಅದಕ್ಕೂ ಮುನ್ನ ಆಕೆಯನ್ನು ಕೋವಿಡ್​ ಪರೀಕ್ಷೆಗೆ ಒಳಪಡಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತು.
ಈ ಹಿನ್ನೆಲೆಯಲ್ಲಿ ಮೇ 11ರಂದು ಆಕೆಯನ್ನು ಅಹಮದಾಬಾದ್​ನ ಎಸ್​ವಿಪಿ ಆಸ್ಪತ್ರೆಗೆ ಸ್ಥಳಾಂತರಿಸಿ ಕೋವಿಡ್​-19ಕ್ಕೆ ಚಿಕಿತ್ಸೆ ನೀಡಲಾಯಿತು. ಮೂರು ವಾರಗಳ ಚಿಕಿತ್ಸೆಯ ಬಳಿಕ ಆ ಮಹಿಳೆಯ ಕೋವಿಡ್​-19 ಪರೀಕ್ಷೆ ವರದಿ ನೆಗೆಟಿವ್​ ಎಂದು ಬಂದಿತು. ಆನಂತರದಲ್ಲಿ ಬೆಳಗಾವಿಯಿಂದ ಬಂದಿದ್ದ ಚರ್ಮವನ್ನು ಆಕೆಗೆ ಕಸಿ ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಇದನ್ನೂ ಓದಿ:ಕರೋನಾ ವೈರಾಣು ಸೋಂಕಿನಿಂದ ಚೇತರಿಸಿಕೊಳ್ಳತ್ತಲೇ ವ್ಯಕ್ತಿ ಹೀಗಾ ಮಾಡೋದು…!?
ಅಂದಾಜು ಎರಡೂವರೆಗೆ ತಿಂಗಳ ಅವಧಿಯಲ್ಲಿ ಈ ಮಹಿಳೆ 2 ಶಸ್ತ್ರಚಿಕಿತ್ಸೆಗಳಿಗೆ ಒಳಗಾದರು. 35 ಬಾರಿ ಗಾಯಗಳ ಪಟ್ಟಿಯನ್ನು ಬದಲಿಸಲಾಯಿತು. 14 ಬಾರಿ ರಕ್ತ ಪೂರೈಕೆ ಮಾಡಲಾಯಿತು. 40 ಆಲ್ಬುಮಿನ್​ ಪೂರೈಕೆಯನ್ನು ಮಾಡಲಾಯಿತು ಎಂದು ವೈದ್ಯರು ತಿಳಿಸಿದ್ದಾರೆ.
ಇವರ ವಯೋಮಿತಿಯಲ್ಲಿ ಶೇ.71 ಸುಟ್ಟುಗಾಯಗಳಾಗಿದ್ದರೆ ಬದುಕುಳಿಯುವ ಸಾಧ್ಯತೆ ಶೇ.18-20 ಇರುತ್ತದೆ. ಕೋವಿಡ್​-19 ಸೋಂಕು ತೀರಾ ಇತ್ತೀಚಿನದ್ದಾಗಿದ್ದು, ದೇಹದ ವಿವಿಧ ಭಾಗಗಳ ಮೇಲೆ ಅದು ಬೀರುವ ಪರಿಣಾಮದ ಬಗ್ಗೆ ಯಾವುದೇ ಮಾಹಿತಿ ಲಭ್ಯವಿಲ್ಲ. ಅಷ್ಟೇ ಅಲ್ಲ, ಅದಕ್ಕೊಂದು ನಿರ್ದಿಷ್ಟವಾದ ಚಿಕಿತ್ಸೆಯೂ ಇಲ್ಲ. ಸುಟ್ಟುಗಾಯಗಳು ರೋಗನಿರೋಧಕ ಶಕ್ತಿಯನ್ನು ಕುಂದಿಸುತ್ತವೆ. ಹಾಗಾಗಿ ಅವರ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು. ಇಷ್ಟಾದರು ಅವರು ಕೋವಿಡ್​ನಿಂದ ಸಂಪೂರ್ಣ ಚೇತರಿಸಿಕೊಂಡಿದ್ದು, ಸುಟ್ಟಗಾಯಗಳಿಗೆ ಚರ್ಮ ಕಸಿ ಶಸ್ತ್ರಚಕಿತ್ಸೆಗೆ ಒಳಗಾಗಿ, ಸುಧಾರಿಸಿಕೊಂಡಿದ್ದು ಒಂದು ಪವಾಡವೇ ಸರಿ ಎಂದು ವೈದ್ಯರು ಅಭಿಪ್ರಾಯಪಟ್ಟಿದ್ದಾರೆ.
ಕರೋನಾ ವೈರಾಣು ಸೋಂಕಿನಿಂದ ಚೇತರಿಸಿಕೊಳ್ಳತ್ತಲೇ ವ್ಯಕ್ತಿ ಹೀಗಾ ಮಾಡೋದು…!?
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 + 15 =
Remember me
