ನವದೆಹಲಿ:ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚಿನ ಮನ್​ ಕಿ ಬಾತ್​ ಕಾರ್ಯಕ್ರಮದಲ್ಲಿ ಭಾರತದೊಳಗೆ ಡೆಸ್ಟಿನೇಷನ್​ ವೆಡ್ಡಿಂಗ್​ ಆಯ್ಕೆ ಮಾಡಿಕೊಳ್ಳುವಂತೆ ಮನವಿ ಮಾಡಿಕೊಂಡ ಬೆನ್ನಲ್ಲೇ ಡೆಸ್ಟಿನೇಷನ್​ ವೆಡ್ಡಿಂಗ್​ ಪ್ರವೃತ್ತಿ ಭಾರತದಲ್ಲಿ ಹೆಚ್ಚು ಜನಪ್ರಿಯ ಎಂಬ ಅಂಶ ಬೆಳಕಿಗೆ ಬಂದಿದೆ. ಮದುವೆಗಾಗಿ ವಿದೇಶಗಳಿಗಿಂತ ದೇಶದೊಳಗೇ ರೊಮ್ಯಾಂಟಿಕ್​ ಮತ್ತು ಐತಿಹಾಸಿಕ ಸ್ಥಳಗಳನ್ನು ಹುಡುಕುವವರು ಹೆಚ್ಚು ಇದ್ದಾರೆ ಎಂದು ಉದ್ಯಮಿಗಳು ಹೇಳಿದ್ದಾರೆ.
ಗೋವಾ, ಲೋನಾವಾಲಾ, ಮಹಾಬಲೇಶ್ವರ, ಮುಂಬೈ, ಶಿರಡಿ, ನಾಸಿಕ್​, ಮಹಾರಾಷ್ಟ್ರದ ನಾಗ್ಪುರ, ಗುಜರಾತ್​ನ ದ್ವಾರಕಾ, ಅಹಮದಾಬಾದ್​, ಜೈಪುರ, ಜೋಧಪುರ, ಉದಯಪುರ, ಜೈಸಲ್ಮೇರ್​ದಂತಹ ಡೆಸ್ಟಿನೇಷನ್​ ವೆಡ್ಡಿಂಗ್​ ಹಾಟ್​ಸ್ಪಾಟ್​ಗಳಲ್ಲಿ ಹೆಚ್ಚಿನ ಸಂಖ್ಯೆಯ ವಿವಾಹಗಳು ನಡೆಯುತ್ತಿವೆ. ಹಾಗಾಗಿ ಶ್ರೀಮಂತರ ಪೈಕಿ ಶೇ.10ರಷ್ಟು ಡೆಸ್ಟಿನೇಷನ್​ ವೆಡ್ಡಿಂಗ್​ಗಾಗಿ ವಿದೇಶಕ್ಕೆ ಹೋಗುತ್ತಿದ್ದಾರೆ ಎಂದು ವೆಡ್ಡಿಂಗ್​ ಸೂತ್ರ ಡಾಟ್​ಕಾಮ್​ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಾರ್ಥಿಪ್​ ತ್ಯಾಗರಾಜನ್​ ತಿಳಿಸಿದ್ದಾರೆ.
ಪ್ರತಿ ವರ್ಷ ವಿದೇಶದಲ್ಲಿ ಸುಮಾರು 5,000 ಡೆಸ್ಟಿನೇಷನ್​ ವೆಡ್ಡಿಂಗ್​ಗಳು ನಡೆಯುತ್ತವೆ ಎಂದು ಅಂದಾಜಿಸಲಾಗಿದ್ದು, ಅಂದಾಜು 50,000 ಕೋಟಿ ರೂ. ವೆಚ್ಚವಾಗುತ್ತದೆ. ಭಾರತದ ಹಣ ದೇಶದೊಳಗೆ ವಿನಿಯೋಗಿಸುವ ಉತ್ಸಾಹದಲ್ಲಿ ಡೆಸ್ಟಿನೇಷನ್​ ವೆಡ್ಡಿಂಗ್​ ಆಯೋಜಿಸಿದರೆ, ಭಾರತೀಯ ಮೌಲ್ಯಗಳು ಅಭಿವೃದ್ಧಿ ಹೊಂದುವುದು ಮಾತ್ರವಲ್ಲದೆ ದೇಶದ ವ್ಯಾಪಾರ ಮತ್ತು ಆರ್ಥಿಕತೆಯು ಉತ್ತೇಜನ ಪಡೆಯುತ್ತದೆ. ಹೆಚ್ಚಿನ ಸಂಖ್ಯೆಯ ಶಾಶ್ವತ ಮತ್ತು ತಾತ್ಕಾಲಿಕ ಉದ್ಯೋಗಾವಕಾಶಗಳು ಲಭ್ಯವಿರುತ್ತವೆ ಎಂದು ಅಖಿಲ ಭಾರತ ವ್ಯಾಪಾರಿಗಳ ಒಕ್ಕೂಟದ (ಸಿಎಐಟಿ) ಪ್ರಧಾನ ಕಾರ್ಯದರ್ಶಿ ಪ್ರವಿಣ್​ ಖಂಡೇಲ್ವಾಲ್​ ಹೇಳಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fourteen − 7 =
Remember me
