ಬಜೆಟ್ ಎಂದ ಕೂಡಲೇ ಜನರ ನಿರೀಕ್ಷೆಗಳು ಗರಿಗೆದರುವುದು ಸಹಜ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರಿಗೂ ಆಯಾ ಕ್ಷೇತ್ರಗಳ ಸುಧಾರಣೆಗೆ ಸರ್ಕಾರದ ಕ್ರಮಗಳೇನಿರಬಹುದು ಎಂಬ ಕುತೂಹಲ, ಇಂಥದ್ದಾಗಬೇಕು ಎಂಬ ನಿರೀಕ್ಷೆಗಳಿರುತ್ತವೆ. ಅದರಲ್ಲೂ, ಸಾಮಾನ್ಯ ಜನರಿಗೆ ನೆನಪಾಗುವುದು ಆದಾಯ ತೆರಿಗೆ. ಕೋವಿಡ್ ಸಂಕಷ್ಟದ ಕಾರಣ ಎಲ್ಲರೂ ಒಂದಿಲ್ಲೊಂದು ಪರಿಹಾರ, ತೆರಿಗೆ ವಿನಾಯಿತಿ ಸಿಗಬಹುದೇ ಎಂಬ ನಿರೀಕ್ಷೆಯಲ್ಲಿದ್ದಾರೆ.
ಕರೊನಾದಿಂದ ನಷ್ಟಕ್ಕೆ ಒಳಗಾಗಿರುವ ರಂಗಗಳ ಪುನಶ್ಚೇತನದ ಕಡೆಗೆ ಕೇಂದ್ರ ಸರ್ಕಾರ ಗಮನಹರಿಸಿದೆ. ಹಂತ-ಹಂತವಾಗಿ ಆರ್ಥಿಕ ಪ್ಯಾಕೇಜ್ ಘೋಷಿಸಲಾಗುತ್ತದೆ. ಇನ್ನಷ್ಟು ಪ್ಯಾಕೇಜ್ ಮತ್ತು ತೆರಿಗೆ ವಿನಾಯಿತಿಗಳ ನಿರೀಕ್ಷೆಯಲ್ಲಿದೆ ಉದ್ಯಮ, ವ್ಯಾಪಾರೀ ವಲಯ. ಷೇರುಪೇಟೆಯಲ್ಲೂ ಅದಕ್ಕೆ ತಕ್ಕಂತೆ ಏರಿಳಿತ ದಾಖಲಾಗಿದ್ದು, ನಿರೀಕ್ಷೆಗಳನ್ನು ಇರಿಸಿಕೊಂಡ ಹೂಡಿಕೆದಾರರ ಗಮನ ಬಜೆಟ್ ಕಡೆಗೆ ನೆಟ್ಟಿದೆ.
ಕರೊನಾ ಸೋಂಕಿನ ಪ್ರಸರಣ ತಡೆಯಲು ಲಾಕ್​ಡೌನ್ ಮಾಡಿದ್ದರಿಂದ ಉಂಟಾದ ಉದ್ಯೋಗ ನಷ್ಟದ ಪ್ರಮಾಣ ತೀವ್ರ. 2020ರ ಏಪ್ರಿಲ್​ನಲ್ಲಿ ಉದ್ಯೋಗ ಕಳೆದುಕೊಂಡವರಲ್ಲಿ ಮಹಿಳೆಯರ ಪಾಲು ಶೇಕಡ 13.9. ನವೆಂಬರ್ ವೇಳೆಗೆ ಇದು ಶೇ.49ಕ್ಕೆ ಏರಿಕೆಯಾಗಿದೆ ಎಂದು ಸೆಂಟರ್ ಫಾರ್ ಮಾನಿಟರಿಂಗ್ ಇಂಡಿಯನ್ ಇಕಾನಮಿಯ ಡೇಟಾ ಉಲ್ಲೇಖಿಸಿದೆ. ಆದ್ದರಿಂದ ಮಹಿಳೆಯರಿಗೆ ಮತ್ತೆ ಉದ್ಯೋಗ ದೊರಕಿಸಿಕೊಡುವ, ಅವಕಾಶಗಳನ್ನು ಸೃಷ್ಟಿಸುವುದಕ್ಕೆ ಅನುಕೂಲ ಮಾಡಿಕೊಡುವ ಕ್ರಮಗಳನ್ನು ಬಜೆಟ್ ಘೋಷಿಸಬೇಕಾಗಿದೆ.
ಕೋವಿಡ್ ಕಾರಣ ಹೆಚ್ಚು ಸಂಕಷ್ಟಕ್ಕೆ ಒಳಗಾದವರು ಹಿರಿಯ ನಾಗರಿಕರು. ದೇಶದಲ್ಲಿ ಶೇಕಡ 8ರಿಂದ 9 ಹಿರಿಯ ನಾಗರಿಕರಿದ್ದು, ಅವರ ಪೈಕಿ 60 ಲಕ್ಷಕ್ಕೂ ಹೆಚ್ಚು ಜನ ತೆರಿಗೆ ಪಾವತಿದಾರರು. ಅವರ ಆದಾಯವನ್ನು ಸಂಪೂರ್ಣ ತೆರಿಗೆ ಮುಕ್ತವನ್ನಾಗಿಸಿದರೆ ಒಳ್ಳೆಯದೆಂದು ಆಶಿಸುತ್ತಿದ್ದಾರೆ. ಅದಾಗದೇ ಹೋದರೆ, ಹಿರಿಯ ನಾಗರಿಕರ ಬಡ್ಡಿ ಆದಾಯ ವಿನಾಯಿತಿಯನ್ನು ಸೆಕ್ಷನ್ 80ಟಿಟಿಬಿ ಪ್ರಕಾರ ಈಗಿರುವ -ಠಿ; 50 ಸಾವಿರದಿಂದ -ಠಿ; 1.5 ಲಕ್ಷಕ್ಕೆ ಏರಿಸಿದರೆ ನಿವೃತ್ತರ ಬದುಕು ಇನ್ನಷ್ಟು ಸರಾಗವೆನಿಸಲಿದೆ. ಅದೇ ರೀತಿ ಉಳಿತಾಯಕ್ಕೆ ಹೆಚ್ಚಿನ ಬಡ್ಡಿದರವನ್ನೂ ನಿರೀಕ್ಷಿಸುತ್ತಿದ್ದಾರೆ.
ದೇಶವನ್ನು ಕಾಡುತ್ತಿರುವ ನಿರುದ್ಯೋಗ ಸಮಸ್ಯೆ 2020ರ ನವೆಂಬರ್​ನಲ್ಲಿ ಶೇಕಡ 7.8ಕ್ಕೆ ತಲುಪಿದೆ. ಈ ಪೈಕಿ ಯುವಕರ ಪಾಲು ಶೇಕಡ 20ಕ್ಕೂ ಹೆಚ್ಚು. ಬಜೆಟ್​ನಲ್ಲಿ ಶಿಕ್ಷಣ ಮತ್ತು ಕೌಶಲ ಅಭಿವೃದ್ಧಿಗೆ ಹಣ ಮೀಸಲಿಡುವುದರ ಜತೆಗೆ ಗ್ರಾಮೀಣ ಯುವಜನರಲ್ಲಿ ಉದ್ಯಮಶೀಲತೆ, ತರಬೇತಿ ಮತ್ತು ಇತರ ಸವಲತ್ತು ನೀಡುವತ್ತ ಗಮನಹರಿಸಬೇಕು. ಇದು ಗ್ರಾಮೀಣ ಪ್ರದೇಶದಲ್ಲಿ ಕಿರು ಉದ್ಯಮ ಶುರುವಾಗಲು, ಹೆಚ್ಚಿನ ಉದ್ಯೋಗಾವಕಾಶ ಸೃಷ್ಟಿಗೆ ಕಾರಣವಾದೀತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
