ಬ್ರಸೆಲ್ಸ್:ಚೀನಾದ ಬೆಲ್ಟ್ ರೋಡ್ ಉಪಕ್ರಮಕ್ಕೆ ಸೆಡ್ಡು ಹೊಡೆಯುವಂತೆ ಯುರೋಪ್ ಒಕ್ಕೂಟ ಕೂಡ ಈಗ 30,000 ಕೋಟಿ ಯೂರೋ ಮೊತ್ತದ ಮೂಲಸೌಕರ್ಯ ನಿಧಿಯನ್ನು ಸ್ಥಾಪಿಸುವುದಾಗಿ ಘೋಷಿಸಿದೆ. ಜಗತ್ತಿನೆಲ್ಲೆಡೆ ಮೂಲಸೌಕರ್ಯ ವೃದ್ಧಿಗೆ ಇದನ್ನು ಬಳಸುವುದಾಗಿ ಅದು ತಿಳಿಸಿದೆ. ‘ಗ್ಲೋಬಲ್ ಗೇಟ್​ವೇ’ ಎಂಬ ಯೋಜನೆ ಇದಾಗಿದ್ದು, 2021 ಮತ್ತು 2027ರ ನಡುವೆ ವಿವಿಧೆಡೆ 300 ಶತಕೋಟಿ ಯೂರೋ ಹೂಡಿಕೆ ಮಾಡಿಸುವುದು ಇದರ ಉದ್ದೇಶ. ಯುರೋಪ್​ನ ಸದಸ್ಯ ರಾಷ್ಟ್ರಗಳು, ಹಣಕಾಸು ಸಂಸ್ಥೆಗಳು ಮತ್ತು ರಾಷ್ಟ್ರೀಯ ಅಭಿವೃದ್ಧಿ ಹಣಕಾಸು ಸಂಸ್ಥೆಗಳು ಇದನ್ನು ಮಾಡಲಿವೆ ಎಂದು ಒಕ್ಕೂಟ ತಿಳಿಸಿದೆ.
ಟೀಮ್ ಯುರೋಪ್​ ಉಪಕ್ರಮ:ಗ್ಲೋಬಲ್ ಗೇಟ್​ವೇಗೆ ಜಾಗತಿಕ ಪ್ರಾಮುಖ್ಯತೆ ಇದೆ. ವಿವಿಧ ಪ್ರದೇಶಗಳಲ್ಲಿ ಇದನ್ನು ಅನ್ವಯಿಸು ವಲ್ಲಿಯೂ ವ್ಯೂಹಾತ್ಮಕ ಹಿತಾಸಕ್ತಿಗಳಿವೆ. ಆರಂಭದಲ್ಲಿ ಅಂದರೆ 2018ರಲ್ಲೇ ಯುರೋಪ್ ಒಕ್ಕೂಟ-ಏಷ್ಯಾ ಸಂಪರ್ಕದ ವ್ಯೂಹಾತ್ಮಕ ತಂತ್ರವನ್ನು ಇದು ಸಾಧಿಸಿದೆ. ಇತ್ತೀಚೆಗೆ ಇದರ ವ್ಯಾಪ್ತಿಯಲ್ಲೇ ಜಪಾನ್ ಮತ್ತು ಭಾರತದ ಜತೆಗೂ ಸಂಪರ್ಕ ಪಾಲುದಾರಿಕೆಯನ್ನು ಒಕ್ಕೂಟ ಖಾತರಿಪಡಿಸಿಕೊಂಡಿದೆ. ಇದರಲ್ಲಿ ಆರ್ಥಿಕ ಮತ್ತು ಹೂಡಿಕೆಯ ಯೋಜನೆಗಳಿವೆ. ಟೀಮ್ ಯುರೋಪ್ ವಿಧಾನದ ಮೂಲಕ ಗ್ಲೋಬಲ್ ಗೇಟ್​ವೇ ಅನುಷ್ಠಾನವಾಗುತ್ತಿದೆ.
ಗ್ಲೋಬಲ್ ಗೇಟ್​ವೇ ಮೂಲಕ ಮೂಲಸೌಕರ್ಯ ಅಭಿವೃದ್ಧಿಗೆ ನೆರವು ಪಡೆಯುವ ರಾಷ್ಟ್ರವನ್ನು ಒಕ್ಕೂಟ ಸಮಾನ ಪಾಲುದಾರ ರಾಷ್ಟ್ರವಾಗಿ ಪರಿಗಣಿಸುತ್ತದೆ. ಅದರ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುವುದಿಲ್ಲ. ಅಥವಾ ಅದು ಯುರೋಪ್ ಒಕ್ಕೂಟವನ್ನೇ ಅವಲಂಬಿಸುವಂತಹ ಸನ್ನಿವೇಶವನ್ನು ಸೃಷ್ಟಿಸುವುದಿಲ.
|ಟೀಮ್ ಯುರೋಪ್
ಸುಸ್ಥಿರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ:ಇತ್ತೀಚೆಗೆ ನಡೆದ ಸಿಒಪಿ-26 ಶೃಂಗದ ಉದ್ದೇಶದ ಪ್ರಕಾರ ಸುಸ್ಥಿರ ಅಭಿವೃದ್ಧಿ ಕಡೆಗೆ ಜಗತ್ತು ಗಮನಹರಿಸ ಬೇಕಾಗಿದೆ. ಕಡಿಮೆ ಮತ್ತು ಮಧ್ಯಮ ಆದಾಯದ ರಾಷ್ಟ್ರಗಳು ಮೂಲಸೌಕರ್ಯ ಕೊರತೆ ಎದುರಿಸುತ್ತಿವೆ. ವಿಶ್ವಬ್ಯಾಂಕ್ ಅಂದಾಜು ಪ್ರಕಾರ 2019ರಲ್ಲಿ 2.70 ಲಕ್ಷ ಕೋಟಿ ಡಾಲರ್​ಗೂ ಅಧಿಕ ಕೊರತೆ ಅವುಗಳನ್ನು ಕಾಡುತ್ತಿದೆ. ಜಾಗತಿಕವಾಗಿ ಸುಸ್ಥಿರ ಅಭಿವೃದ್ಧಿ, ಹವಾಮಾನ ವೈಪರೀತ್ಯ ತಡೆಗೆ ಪೂರಕವಾದ ಮೂಲಸೌಕರ್ಯ ಅಭಿವೃದ್ಧಿ ಪಡಿಸುವಲ್ಲಿ ಗ್ಲೋಬಲ್ ಗೇಟ್​ವೇ ಪ್ರಮುಖ ಪಾತ್ರವಹಿಸಲಿದೆ.
ಹೊಸ ಆರ್ಥಿಕ ಸಂಪನ್ಮೂಲ:ಯುರೋಪ್ ಒಕ್ಕೂಟದ ಈ ಉಪಕ್ರಮದಲ್ಲಿ ನೇಬರ್​ಹುಡ್ ಡೆವಲಪ್​ವೆುಂಟ್ ಆಂಡ್ ಇಂಟರ್​ನ್ಯಾಷನಲ್ ಕೋಆಪರೇಷನ್ ಇನ್​ಸ್ಟ್ರುಮೆಂಟ್ (ಎನ್​ಡಿಐಸಿಐ-ಗ್ಲೋಬಲ್ ಯುರೋಪ್) ಅನ್ನು ಈ ವರ್ಷ ಜೂನ್​ನಲ್ಲಿ ಸ್ಥಾಪಿಸಲಾಗಿದೆ. ಇದಕ್ಕಾಗಿ ಯುರೋಪ್ ಒಕ್ಕೂಟ 79 ಶತಕೋಟಿ ಯೂರೋವನ್ನು ಬಜೆಟ್​ನಲ್ಲಿ ಮೀಸಲಿಟ್ಟಿದೆ. ಇದಲ್ಲದೇ ಇನ್ನೂ ಕೆಲವು ಆರ್ಥಿಕ ಸಂಪನ್ಮೂಲವನ್ನು ಇದಕ್ಕಾಗಿ ಕ್ರೋಡೀಕರಿಸಿದೆ. ಯುರೋಪಿಯನ್ ಫಂಡ್ ಫಾರ್ ಸಸ್ಟೇನಬಲ್ ಡೆವಲಪ್​ವೆುಂಟ್ ಪ್ಲಸ್ ಅನ್ನು ವಿಶೇಷವಾಗಿ ಸ್ಥಾಪಿಸಿದೆ. ಇದಕ್ಕೆ ಹೊರತಾಗಿ 14ಶತಕೋಟಿ ಯೂರೋ ಮೌಲ್ಯದ ಇನ್​ಸ್ಟ್ರುಮೆಂಟ್ ಫಾರ್ ಪ್ರೀ-ಆಕ್ಸೆಷನ್ ಅಸಿಸ್ಟೆನ್ಸ್ (ಐಪಿಎ) ಮೂರನ್ನು ಕೂಡ ಸೇರಿಸಿದೆ. ಇನ್​ವೆಸ್ಟ್​ಇಯು, ಇಯು ಸಂಶೋಧನಾ ಮತ್ತು ನವೋನ್ವೇಷಣೆ ಯೋಜನೆ ಹಾರಿಜಾನ್ ಯುರೋಪ್ ಮುಂತಾದವು ಆದ್ಯತೆಯ ಕ್ಷೇತ್ರಗಳಲ್ಲಿ ಖಾಸಗಿ ಹೂಡಿಕೆಗೆ ಅನುವು ಮಾಡಿಕೊಡುತ್ತದೆ.
ಚೀನಾದ ಬಿಆರ್​ಐ:ಒನ್​ಬೆಲ್ಟ್ ಒನ್​ರೋಡ್ (ಒಬಿಆರ್) ಎಂಬ ಯೋಜನೆಯೇ ಚೀನಾ ಅಧ್ಯಕ್ಷ ಷಿ ಜಿನ್​ಪಿಂಗ್ ಅವರ ಕನಸಿನ ಕೂಸು ‘ಸಿಲ್ಕ್ ರೂಟ್ ಪ್ರಾಜೆಕ್ಟ್’. 2013ರಲ್ಲಿ ಜಿನ್​ಪಿಂಗ್ ಅಧಿಕಾರಕ್ಕೆ ಬರುತ್ತಲೇ ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಸದರಿ ಯೋಜನೆ ಮೂಲಕ ಏಷ್ಯಾ, ಯುರೋಪ್ ಹಾಗೂ ಆಫ್ರಿಕನ್ ದೇಶಗಳ ಜತೆಗೆ ನೇರ ಸಂಪರ್ಕ ಸಾಧಿಸುವ ರಸ್ತೆ, ಜಲ, ರೈಲ್ವೆ ಸಂಪರ್ಕ ಕಲ್ಪಿಸುವುದು ಚೀನಾದ ಉದ್ದೇಶ. ತನ್ಮೂಲಕ ಪುರಾತನ ಕಾಲದ ಸಿಲ್ಕ್ ರೂಟ್​ಗೆ ಪುನಶ್ಚೇತನ ನೀಡುವ ಕೆಲಸ ಮಾಡುತ್ತಿದ್ದು, ಹಲವು ದೇಶಗಳು ಇದಕ್ಕೆ ಕೈ ಜೋಡಿಸಿವೆ. ಸಾಲ ತೀರಿಸಲಾಗದ ರಾಷ್ಟ್ರಗಳು ಈಗ ಅಸ್ತಿತ್ವ ಉಳಿಸಿಕೊಳ್ಳಲು ಚೀನಾದ ಎದುರು ಮಂಡಿಯೂರಿವೆ. ಭಾರತ ಈ ಯೋಜನೆಯನ್ನು ಆರಂಭದಿಂದಲೂ ವಿರೋಧಿಸುತ್ತ ಬಂದಿದೆ. ಇದು ಅನಿಶ್ಚಿತ ಕಾಲಮಿತಿಯ ಯೋಜನೆಯಾಗಿರುವುದರಿಂದ, ಇದರ ಒಟ್ಟಾರೆ ಖರ್ಚು ವೆಚ್ಚ 4 ಲಕ್ಷ ಕೋಟಿ ಡಾಲರ್​ನಿಂದ 8 ಲಕ್ಷ ಕೋಟಿ ಡಾಲರ್ ಆಗಿರಲಿದೆ ಎಂಬು ಅಂದಾಜಿದೆ.
ಭಾರತಕ್ಕೆ ಮೊದಲ ಒಮಿಕ್ರಾನ್​ ತಂದಿಟ್ಟವ ಈಗ ದೇಶದಲ್ಲೇ ಇಲ್ಲ, ಅಸಲಿಗೆ ಆತ ಭಾರತೀಯನೇ ಅಲ್ಲ?: ಬೆಂಗ್ಳೂರಿಗೆ ಸುಮ್ನೆ ಕಳಂಕ!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 × 4 =
Remember me
