ಕೇಂದ್ರ ಮುಂಗಡಪತ್ರ ಮಂಡನೆಗೆ ಸಂಬಂಧಿಸಿದ ಸಿದ್ಧತೆ ಅಂತಿಮ ಹಂತ ತಲುಪಿದೆ. ಈ ವರ್ಷದ ಮುಂಗಡಪತ್ರ ಕುರಿತಂತೆ ನಿರೀಕ್ಷೆಗಳೂ ಹೆಚ್ಚಾಗಿವೆ. ಪಂಚರಾಜ್ಯ ಚುನಾವಣೆ ಒಂದೆಡೆ, 2024ರಲ್ಲಿ ಲೋಕಸಭೆ ಚುನಾವಣೆ ನಡೆಯುವ ಕಾರಣ ಅದಕ್ಕೂ ಮುಂಚಿನ ಪೂರ್ಣಪ್ರಮಾಣದ ಬಜೆಟ್ ಇದು. ಜತೆಗೆ ಭಾರತದ ಆರ್ಥಿಕತೆಗೆ ಪುನಶ್ಚೇತನ ಒದಗಿಸುತ್ತ, ಹೊಸ ದಿಶೆಯಲ್ಲಿ ದೇಶವನ್ನು ಮುನ್ನಡೆಸುವುದಕ್ಕೆ ಬೇಕಾದ ಮಾರ್ಗಸೂಚಿ ಈ ಬಜೆಟ್​ನಲ್ಲಿ ವ್ಯಕ್ತವಾಗಬಹುದು ಎಂಬ ನಿರೀಕ್ಷೆ ದೇಶವಾಸಿಗಳಲ್ಲಿದೆ. ಕರೊನಾ ಸಂಕಷ್ಟದಿಂದ ಬಹುತೇಕ ಕ್ಷೇತ್ರಗಳು ಚೇತರಿಸಿಕೊಳ್ಳುತ್ತಿರುವ ಸಂದರ್ಭ ಇದು. ಹೀಗಾಗಿ ಆರೋಗ್ಯ, ಫಾರ್ವ, ಕೃಷಿ, ಎಂಎಸ್​ಎಂಇ, ವಾಯುಯಾನ, ರಿಯಲ್ ಎಸ್ಟೇಟ್, ಬೃಹತ್ ಉದ್ಯಮಗಳು ಸೇರಿ ಹಲವು ರಂಗಗಳು ಆಶಾಭಾವನೆಯೊಂದಿಗೆ ಈ ಸಲದ ಮುಂಗಡಪತ್ರವನ್ನು ಎದುರುನೋಡುತ್ತಿವೆ.
ಕೃಷಿ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ?
ಕೃಷಿ ಕ್ಷೇತ್ರದ ಸುಧಾರಣೆಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿದ್ದ ಮೂರು ಕೃಷಿ ಮಸೂದೆಗಳನ್ನು ರೈತರ ಪ್ರತಿಭಟನೆಯ ಕಾರಣ ಕೇಂದ್ರ ಹಿಂಪಡೆಯಿತು. ವರ್ಷದಿಂದ ವರ್ಷಕ್ಕೆ ಕೇಂದ್ರ ಸರ್ಕಾರ ಬೆಂಬಲ ಬೆಲೆ ಏರಿಸುತ್ತ ಬಂದಿದೆ. ಇದಲ್ಲದೆ ಹಲವು ಪ್ರಗತಿಪರ ಉಪಕ್ರಮಗಳನ್ನೂ ಜಾರಿಗೊಳಿಸಿದೆ. ಕೃಷಿ ಇಳುವರಿ ಹೆಚ್ಚಳಕ್ಕೆ ಸಾವಯವ ಕೃಷಿ, ಶೂನ್ಯ ಬಂಡವಾಳ ಕೃಷಿ ಮುಂತಾದವುಗಳಿಗೆ ಆದ್ಯತೆ ನೀಡುತ್ತಿರುವ ಸರ್ಕಾರ, ರಸಗೊಬ್ಬರಗಳ ಸಬ್ಸಿಡಿಯನ್ನೂ ಹೆಚ್ಚಿಸಿದೆ. ಈ ವರ್ಷ ಈ ಬಗ್ಗೆ ಇನ್ನಷ್ಟು ನಿರೀಕ್ಷೆಗಳು ಹುಟ್ಟಿಕೊಂಡಿವೆ. ಕೃಷಿ ಕ್ಷೇತ್ರದಲ್ಲಿ ತಂತ್ರಜ್ಞಾನದ ಬಳಕೆಗೆ ಉತ್ತೇಜನ, ಅಗ್ರಿಟೆಕ್ ವೇದಿಕೆಗಳಿಗೆ ಬೆಂಬಲ, ಕೃಷಿ ನವೋದ್ಯಮಗಳಿಗೆ ಉತ್ತೇಜನ ಮುಂತಾದವುಗಳನ್ನು ಕೃಷಿ ಕ್ಷೇತ್ರ ನಿರೀಕ್ಷಿಸುತ್ತಿದೆ.
ಮೂಲಸೌಕರ್ಯ ಕ್ಷೇತ್ರ:ಸಂಕಷ್ಟದ ಕಾಲದಲ್ಲೂ ಬೇಡಿಕೆ ಕಳೆದುಕೊಳ್ಳದ ಕ್ಷೇತ್ರಗಳ ಪೈಕಿ ಮೂಲಸೌಕರ್ಯ ಕ್ಷೇತ್ರವೂ ಒಂದು. ಮೂಲಸೌಕರ್ಯ ವೃದ್ಧಿಯ ಕೆಲಸ ಸದ್ದಿಲ್ಲದೆ ನಡೆಯುತ್ತ ಬಂದಿದೆ. ಈ ವರ್ಷ ಮಾರುಕಟ್ಟೆ ಚೇತರಿಕೆ ಹಾದಿಯಲ್ಲಿದ್ದು, ಈ ಸಲದ ಮುಂಗಡಪತ್ರದ ಮೂಲಕ ಅದಕ್ಕೆ ಇನ್ನಷ್ಟು ವೇಗ ಸಿಗಬಹುದು. ಮೂಲಸೌಕರ್ಯ ಕ್ಷೇತ್ರ ಮತ್ತು ಪೂರಕ ವಹಿವಾಟಿನಲ್ಲಿ ತೊಡಗಿರುವವರು ಉದ್ಯಮದ ಪುನಶ್ಚೇತನಕ್ಕಾಗಿ ಒಂದಷ್ಟು ವಿನಾಯಿತಿಗಳು ಮತ್ತು ತೆರಿಗೆ ಪ್ರಯೋಜನಗಳನ್ನು ಎದುರು ನೋಡುತ್ತಿದ್ದಾರೆ.
ಪೇಪರ್​ಲೆಸ್ ಬಜೆಟ್:ಸತತ ಮೂರನೇ ವರ್ಷ ಪೇಪರ್​ಲೆಸ್ ಬಜೆಟ್ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ. ಆದರೆ ಇದೇ ಮೊದಲ ಸಲ, ಸಾಂಪ್ರದಾಯಿಕ ಹಲ್ವಾ ಸೆರಮನಿಯನ್ನು ರದ್ದುಗೊಳಿಸಲಾಗಿದೆ. ಬಜೆಟ್ ಮುದ್ರಣಕ್ಕೆ ಹೋಗುವ ಮೊದಲು ನಾರ್ತ್ ಬ್ಲಾಕ್​ನಲ್ಲಿ ಈ ಸಂಪ್ರದಾಯ ನೆರವೇರುತ್ತದೆ. ವಿತ್ತ ಸಚಿವರು ಮತ್ತು ಹಣಕಾಸು ಇಲಾಖೆಯ ಪ್ರಮುಖರು, ಬಜೆಟ್ ಸಿದ್ಧಪಡಿಸುವ ಉದ್ಯೋಗಿಗಳು ಇದರಲ್ಲಿ ಭಾಗವಹಿಸುತ್ತಾರೆ. ಆದರೆ ಈ ಸಲ ಬಜೆಟ್ ಸಿದ್ಧಪಡಿಸುವ ಉದ್ಯೋಗಿಗಳಿಗೆ ಅವರು ಇರುವಲ್ಲಿಯೇ ಸಿಹಿ ಹಂಚಲು ಸರ್ಕಾರ ತೀರ್ವನಿಸಿದೆ.
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × 1 =
Remember me
