ನವದೆಹಲಿ:ಈಗಾಗಲೆ ಬಹಿರಂಗವಾಗಿರುವಂತೆ ಮುಂಬೈ ಮೂಲದ ಗ್ಲೆನ್​ಮಾರ್ಕ್​ ಫಾರ್ಮಸ್ಯುಟಿಕಲ್ಸ್​ ಕಂಪನಿಯು ಕೋವಿಡ್​ ಔಷಧ ಫಾವಿಪಿರಾವಿರ್​ ಔಷಧವನ್ನು ಫ್ಯಾಬಿಫ್ಲೂ ಎಂಬ ಬ್ರ್ಯಾಂಡ್​ ಹೆಸರಿನಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡುತ್ತಿದೆ. ಇದಕ್ಕಾಗಿ ಅದು ಭಾರತೀಯ ಔಷಧ ಪ್ರಧಾನ ನಿಯಂತ್ರಕರಿಂದ (ಡಿಸಿಜಿಐ) ಅನುಮತಿಯನ್ನೂ ಪಡೆದುಕೊಂಡಿದೆ. ಆರಂಭಿಕ ಹಂತದಿಂದ ತೀವ್ರ ಗಂಭೀರವಲ್ಲದ ಹಂತದ ಕರೊನಾ ಸೋಂಕಿತರ ಚಿಕಿತ್ಸೆಗೆ ಬಳಸಬಹುದಾದ ಫ್ಯಾಬಿಫ್ಲೂ ಮಾತ್ರೆ ಕೆಲವೇ ದಿನಗಳಲ್ಲಿ ಮಾರುಕಟ್ಟೆ ಬಿಡುಗಡೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಫ್ಲಾಬಿಫ್ಲೂ ಬಗೆಗಿನ ಮಾಹಿತಿಯನ್ನು ಇಲ್ಲಿ ಕೊಡಲಾಗುತ್ತಿದೆ.
ಫ್ಯಾಬಿಫ್ಲೂ ಮಾತ್ರೆ ತಲಾ 200 ಎಂಜಿಯ 34 ಮಾತ್ರೆಗಳ ಒಂದು ಬಾಕ್ಸ್​ನಲ್ಲಿ ಲಭ್ಯವಾಗಲಿದೆ. ಇದರ ದರ 3,500 ರೂ. ಆಗಿದೆ. ಅಂದರೆ ಒಂದು ಮಾತ್ರೆಗೆ 103 ರೂ. ಆಗಲಿದೆ. ಆರಂಭಿಕ ಹಂತದ ಸೋಂಕಿತರಿಗೆ ಮೊದಲ ದಿನ ದಿನಕ್ಕೆ ಎರಡು ಬಾರಿಯಂತೆ 9 ಮಾತ್ರೆಗಳನ್ನು (1800 ಎಂಜಿ) ಕೊಡಬೇಕಾಗುತ್ತದೆ. 14ನೇ ದಿನದ ಚಿಕಿತ್ಸೆಯಲ್ಲಿ ದಿನಕ್ಕೆ ಎರಡು ಬಾರಿಯಂತೆ 4 ಮಾತ್ರೆಗಳು (800 ಎಂಜಿ) ಕೊಡಬೇಕಾಗುತ್ತದೆ.
ಇದನ್ನೂ ಓದಿ:ಬಂಧಿಸುವ ಮುನ್ನ ಆರೋಪಿಗಳ ಸ್ನಾನ ಕಡ್ಡಾಯ: ಪೊಲೀಸರಿಗೆ ಕಮಿಷನರ್ ಕಟ್ಟಪ್ಪಣೆ
ಭಾರತದ 11 ಸ್ಥಳಗಳಲ್ಲಿ 90 ಆರಂಭಿಕ ಮತ್ತು ತೀವ್ರ ಗಂಭೀರವಲ್ಲದ ಕರೊನಾ ಸೋಂಕಿತರಿಗೆ ಈ ಮಾತ್ರೆಗಳನ್ನು ಕೊಟ್ಟು ಪರೀಕ್ಷಿಸಲಾಗಿದೆ. ಇವರಲ್ಲಿ ಶೇ.80 ಸೋಂಕಿತರು ತುಂಬಾ ಬೇಗನೆ ಚೇತರಿಸಿಕೊಂಡಿದ್ದಾಗಿ ಹೇಳಲಾಗಿದೆ.
ಬೆಂಗಳೂರು ಮೂಲದ ಸ್ಟ್ರೈಡ್ಸ್​ ಫಾರ್ಮ, ಹೈದರಾಬಾದ್​ ಮೂಲದ ಆಪ್ಟಿಮಸ್​ ಫಾರ್ಮ, ಮುಂಬೈ ಮೂಲದ ಲಾಸಾ ಸೂಪರ್​ಜೆರ್ನಿಕ್ಸ್​ ಮತ್ತು ದೆಹಲಿ ಮೂಲದ ಬ್ರಿಂಟನ್​ ಫಾರ್ಮಸ್ಯೂಟಿಕಲ್ಸ್​ ಕಂಪನಿಗಳು ಕೂಡ ಇದೀಗ ಫ್ಲಾಬಿಫ್ಲೂ ಮಾತ್ರೆಗಳನ್ನು ತಮ್ಮದೇ ಬ್ರ್ಯಾಂಡ್​ ನೇಮ್​ಗಳಲ್ಲಿ ಬಿಡುಗಡೆ ಮಾಡಲು ಡಿಸಿಜಿಐಗೆ ಅನುಮತಿ ಕೋರಿವೆ. ಹೀಗಾಗಿ ಮುಂದಿನ ದಿನಗಳಲ್ಲಿ ಫಾವಿಪಿರಾವಿರ್​ ಔಷಧ ಭಾರತದ ಮಾರುಕಟ್ಟೆಯಲ್ಲಿ ಯಥೇಚ್ಚವಾಗಿ ಸಿಗುವುದು ನಿಶ್ಚಿತವಾಗಿದೆ.
https://www.vijayavani.net/shashi-tharoor-backs-chinas-fictitious-claim-on-casualties-likes-propaganda-on-twitter/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − eight =
Remember me
