ಬಳ್ಳಾರಿ: ಆಂಧ್ರ ಪ್ರದೇಶದ ಕರ್ನೂಲು ಜಿಲ್ಲೆ ಆಲೂರು ತಾಲೂಕಿನ ದೇವರಗಟ್ಟು ಗ್ರಾಮದಲ್ಲಿ ನಿಷೇಧದ ನಡುವೆಯೂ ಸೋಮವಾರ ರಾತ್ರಿ ಬಡಿಗೆ ಜಾತ್ರೆ ನಡೆದಿದೆ.
ಕರೊನಾ ಕಾರಣಕ್ಕೆ ಪ್ರಸಕ್ತ ವರ್ಷ ಆಂಧ್ರಪ್ರದೇಶ ಸರ್ಕಾರ ದೇವರಗಟ್ಟು ಗ್ರಾಮದ ಮಾಳ ಮಲ್ಲೇಶ್ವರಸ್ವಾಮಿ ಉತ್ಸವಕ್ಕೆ ನಿಷೇಧ ಹೇರಿತ್ತು. ಕರ್ನೂಲು ಜಿಲ್ಲಾಡಳಿತ ನಿಷೇಧದ ಬಗ್ಗೆ ಸುಮಾರು 15 ದಿನಗಳಿಂದ ಜನರಲ್ಲಿ ಜಾಗೃತಿ ಮೂಡಿಸಿತ್ತು. ಆದರೆ, ಸರ್ಕಾರದ ಆದೇಶ ಹಾಗೂ ಜಿಲ್ಲಾಡಳಿತ ಸೂಚನೆ ಕಡೆಗಣಿಸಿ ಗ್ರಾಮದಲ್ಲಿ ಬಡಿಗೆ ಉತ್ಸವ ನಡೆದಿದೆ.
ನೂರಾರು ಜನರು ರಾತ್ರಿ ಗುಡ್ಡಕ್ಕೆ ಆಗಮಿಸಿ ಪ್ರತಿ ವರ್ಷದಂತೆ ಪೂಜಾ ಕಾರ್ಯಕ್ರಮಗಳನ್ನು ನಡೆಸಿದರು. ದೇವರ ಪಲ್ಲಕ್ಕಿ ಮೆರವಣಿಗೆ ವೇಳೆ ನಡೆದ ಬಡಿಗೆ ಉತ್ಸವದಲ್ಲಿ 40 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಭಾರಿ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಪೊಲೀಸರು ಸಾಂಪ್ರದಾಯಿಕ ಆಚರಣೆಗೆ ತಡೆಯೊಡ್ಡಲಾಗದೆ ಮೂಕ ಪ್ರೇಕ್ಷಕರಾಗಿದ್ದರು.
ಹಾಥರಸ್​ ಕೇಸ್​: ಅಲಹಾಬಾದ್ ಹೈಕೋರ್ಟ್​ ನಿಗಾದಲ್ಲಿ ನಡೆಯಲಿದೆ ಸಿಬಿಐ ತನಿಖೆ ಎಂದ ಸುಪ್ರೀಂ ಕೋರ್ಟ್
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 11 =
Remember me
