ಬೆಂಗಳೂರು:ಕೇರಳದಲ್ಲಿನ ಜೆಡಿಎಸ್ ಘಟಕವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ಸೋಮವಾರ ವಜಾಗೊಳಿಸಿದ್ದು, ಅಲ್ಲಿಗೆ ಅಡ್ಹಾಕ್ ಸಮಿತಿ ರಚಿಸಿದ್ದಾರೆ.
ಪಕ್ಷ ಸಂಘಟನೆ ಕೆಲಸವನ್ನು ಕೇರಳದಲ್ಲಿ ಸಮರ್ಪಕವಾಗಿ ಮಾಡುತ್ತಿಲ್ಲ. ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂಬ ಆರೋಪ ಕೇರಳ ಜೆಡಿಎಸ್ ಘಟಕದ ಅಧ್ಯಕ್ಷ ಸಿ.ಕೆ.ನಾಣು ಅವರಿಗೆ ಪಕ್ಷದ ರಾಷ್ಟ್ರೀಯ ಕಾರ್ಯಾಧ್ಯಕ್ಷ ಬಿ.ಎಂ.ಫಾರೂಕ್​ ಇತ್ತೀಚೆಗೆ ನೋಟಿಸ್ ನೀಡಿದ್ದರು. ಈ ನೋಟಿಸ್​ಗೆ ಸಿ.ಕೆ.ನಾಣು ಅವರು ಪ್ರತಿಕ್ರಿಯೆ ನೀಡಿಲ್ಲ. ಹೀಗಾಗಿ ಕೇರಳದ ಜೆಡಿಎಸ್ ಘಟಕವನ್ನು ವಜಾಗೊಳಿಸಿ ಅಲ್ಲಿ ಅಡ್ಹಾಕ್ ಸಮಿತಿ ರಚಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಇದನ್ನೂ ಓದಿ:ಗದ್ದುಗೆ ಒಳಗೆ ಮಗು ಅಳುವ ಶಬ್ದ ಕೇಳಿಸುತ್ತಿತ್ತು… ಕುತೂಹಲದಿಂದ ಹೋದವರಿಗೆ ಶಾಕ್​ ಕಾದಿತ್ತು!
ಅಡ್ಹಾಕ್ ಸಮಿತಿಯಲ್ಲಿ ಯಾರು?:ಮ್ಯಾಥ್ಯೂ ಟಿ.ಥಾಮಸ್ (ಅಧ್ಯಕ್ಷ), ಜೋಸೆ ಥೇಟ್ಟಯಿಲ್ ಹಾಗೂ ಜಮೀಲಾ ಪ್ರಕಾಶಂ (ಉಪಾಧ್ಯಕ್ಷರು), ಬೆನ್ನಿ ಮೂಂಜೆಲಿ, ವಿ.ಮುರುಗಾದಾಸ್ ಮತ್ತು ಬೆಜ್ಲಿ ಜೋಸೆಫ್ (ಪ್ರಧಾನ ಕಾರ್ಯದರ್ಶಿಗಳು) ಹಾಗೂ ಮೊಹಮ್ಮದ್ ಷಾ (ಖಜಾಂಚಿ) ಅಡ್ಹಾಕ್ ಸಮಿತಿಯಲ್ಲಿದ್ದಾರೆ.
‘ಆಸೆಯೇ ದುಃಖಕ್ಕೆ ಮೂಲ’ ಎನ್ನಲಿದ್ದಾರಾ ಬಿಗ್​-ಬಿ ಅಮಿತಾಭ್ ಬಚ್ಚನ್​?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 5 =
Remember me
