ನವದೆಹಲಿ:ಕರೊನಾ ಪಿಡುಗು ಜೋರಾದ ನಂತರದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿ ಕೇಂದ್ರ ಸರ್ಕಾರದ ಎಲ್ಲ ಸಚಿವರು, ಅಧಿಕಾರಿಗಳು ಜೂಮ್​ ಆ್ಯಪ್​ ಬಳಸಿ ವಿಡಿಯೋ ಕಾನ್ಫರೆನ್ಸಿಂಗ್​ ಮಾಡುತ್ತಿದ್ದರು. ಆದರೆ, ಜೂಮ್​ ಆ್ಯಪ್​ನಲ್ಲಿ ಹಲವು ನ್ಯೂನತೆಗಳಿದ್ದು, ಗೌಪ್ಯ ಮಾಹಿತಿ ಸೋರಿಕೆಯಾಗುವ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ವಿಡಿಯೋ ಕಾನ್ಫರೆನ್ಸಿಂಗ್​ಗಾಗಿ ಜೂಮ್​ ಆ್ಯಪ್​ ಅನ್ನು ಬಳಸದಂತೆ ಎಲ್ಲರಿಗೂ ಸೂಚಿಸಿದೆ.
ಹಾಗಾದರೆ, ಮುಂದೇನು? ಮುಂದೆ ಏನೆಂದರೆ ಮೇಕ್​ ಇನ್​ ಇಂಡಿಯಾ ಅಭಿಯಾನದ ಭಾಗವಾಗಿ ದೇಶಿಯವಾಗಿ, ಹೆಚ್ಚು ಸುರಕ್ಷತಾ ವ್ಯವಸ್ಥೆ ಹೊಂದಿರುವ ವಿಡಿಯೋ ಕಾನ್ಫರೆನ್ಸಿಂಗ್​ ಆ್ಯಪ್​ ಅನ್ನು ಅಭಿವೃದ್ಧಿಪಡಿಸುವುದು ಸರ್ಕಾರದ ನಿರ್ಧಾರವಾಗಿದೆ. ಈ ಹಿನ್ನೆಲೆಯಲ್ಲಿ ಅದು ವಿಡಿಯೋ ಕಾನ್ಫರೆನ್ಸಿಂಗ್​ ಆ್ಯಪ್​ ಅಭಿವೃದ್ಧಿಪಡಿಸಿ, 1 ಕೋಟಿ ರೂ. ಬಹುಮಾನ ಗೆಲ್ಲಿ ಯೋಜನೆಯನ್ನು ಘೋಷಿಸಿದೆ.
ಈ ಆ್ಯಪ್​ ಹೇಗಿರಬೇಕು, ಹೇಗೆ ಕಾರ್ಯನಿರ್ವಹಿಸಬೇಕು ಎಂಬ ಬಗ್ಗೆ ಕೇಂದ್ರ ಸರ್ಕಾರ ಪೂರ್ವಷರತ್ತುಗಳನ್ನು ಹಾಕಿದೆ.
* ಈ ಆ್ಯಪ್​ ಕಡಿಮೆ ವಿದ್ಯುತ್​ ಮತ್ತು ಪ್ರೊಸೆಸರ್​ ಅನ್ನು ಬಳಸುವಂತಿರಬೇಕು* ಯಾವುದೇ ಬಾಹ್ಯ ಉಪಕರಣದ ಅವಲಂಬನೆ ಇರಬಾರದು* ಯಾವುದೇ ಕಂಪ್ಯೂಟರ್​ ಅಥವಾ ಉಪಕಣದಲ್ಲಿ ಕಾರ್ಯನಿರ್ವಹಿಸುವಂತಿರಬೇಕು. ಬಹುವ್ಯಕ್ತಿಗಳ ಕಾನ್ಫರೆನ್ಸ್​ ಸೇರಿ ಎಲ್ಲ ಕಾನ್ಫರೆನ್ಸ್​ಗಳಲ್ಲೂ ಬಳಕೆ ಯೋಗ್ಯವಾದ ಚಾಟ್​ ಸೌಲಭ್ಯ ಹೊಂದಿರಬೇಕು.* ಕಾನ್ಫರೆನ್ಸ್​ಗೆ ಸೇರ್ಪಡೆಗೊಳ್ಳಲು ಸೈನ್​ ಇನ್​ ಮತ್ತು ನಾನ್​ ಸೈನ್​ಇನ್​ ಸೌಲಭ್ಯ ಹೊಂದಿರಬೇಕು. ಅದು ಬ್ರೌಷರ್​ ಅಥವಾ ಯಾವುದೇ ಆ್ಯಪ್​ನ ಇಂಟರ್​ಫೇಸ್​ ಆಗಿರಬಹುದು* ಅದು ಎನ್​ಕ್ರಿಪ್ಟೆಡ್​ ನೆಟ್​ವರ್ಕ್​ ಕಮ್ಯುನಿಕೇಷನ್​ ಹೊಂದಿರಬೇಕು* ಆಡಿಯೋ ಮತ್ತು ವಿಡಿಯೋ ರೆಕಾರ್ಡಿಂಗ್​ ಸೌಲಭ್ಯ ಇರಬೇಕು
ಆಸಕ್ತ ಡೆವೆಲಪರ್​ ಅಥವಾ ಡೆವೆಲಪರ್​ಗಳ ತಂಡಏಪ್ರಿಲ್​ 30ರೊಳಗೆಅರ್ಜಿ ಸಲ್ಲಿಸಬೇಕು.
ತಾವೇ ವಿನ್ಯಾಸಗೊಳಿಸಿದ ಮಾಸ್ಕ್​ ಧರಿಸಿ ಮಿಂಚುತ್ತಿರುವ ಸಚಿನ್​, ದ್ರಾವಿಡ್​, ಗಂಗೂಲಿ… ಏಕೆ ಗೊತ್ತೇ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven + 4 =
Remember me
