ಮುಂಬೈ:ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಮತ್ತು ಶಿವಸೇನೆ ಮುಖ್ಯಸ್ಥ ಸಂಜಯ್ ರಾವತ್​ ಅವರು ಶನಿವಾರ ಹೋಟೆಲ್​ವೊಂದರಲ್ಲಿ ಗುಟ್ಟಾಗಿ ಭೇಟಿಯಾಗಿದ್ದು ರಾಜಕೀಯ ವಲಯದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದೆ.
ಈ ಬಗ್ಗೆ ಬಿಜೆಪಿ ವಕ್ತಾರ ಸ್ಪಷ್ಟನೆ ಕೊಟ್ಟು, ಇವರಿಬ್ಬರ ಭೇಟಿಗೆ ರಾಜಕೀಯ ಕಾರಣವಿಲ್ಲ. ಶಿವಸೇನೆ ಮುಖವಾಣಿ ಸಾಮ್ನಾಕ್ಕೆ ಸಂದರ್ಶನ ಕೊಡುವ ವಿಚಾರಕ್ಕೆ ಸಂಬಂಧಪಟ್ಟಂತೆ ಚರ್ಚಿಸಲು ಭೇಟಿಯಾಗಿದ್ದರು ಎಂದು ಹೇಳಿದ್ದರು. ಆದರೂ ಗುಸುಗುಸು, ಪಿಸುಪಿಸು ನಿಂತಿಲ್ಲ.
ಈ ಮಧ್ಯೆ ಶಿವಸೇನೆ ಎಂಪಿ ಸಂಜಯ್​ ರಾವತ್​ ಬಾಯ್ಬಿಟ್ಟಿದ್ದಾರೆ. ಕೆಲವು ಸಮಸ್ಯೆಗಳ ಬಗ್ಗೆ ಚರ್ಚಿಸುವುದಕ್ಕೋಸ್ಕರ ದೇವೇಂದ್ರ ಫಡ್ನವೀಸ್​ ಅವರನ್ನು ಭೇಟಿಯಾಗಿದ್ದಷ್ಟೇ. ಬಿಜೆಪಿ ಹಾಗೂ ಶಿವಸೇನೆ ಮಧ್ಯೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇರಬಹುದು. ಆದರೆ ಎರಡೂ ಪಕ್ಷಗಳ ಮುಖಂಡರು ಎಂದಿಗೂ ಶತ್ರುಗಳಲ್ಲ ಎಂದು ಹೇಳಿದ್ದಾರೆ.ಇದನ್ನೂ ಓದಿ:ಕರಣ್​ ಜೋಹರ್​ ಹೆಸರು ಹೇಳಿದರೆ ಬಿಟ್ಟುಬಿಡ್ತೀವಿ ಎಂದರಂತೆ ಎನ್​ಸಿಬಿ ಅಧಿಕಾರಿಗಳು …
ದೇವೇಂದ್ರ ಫಡ್ನವೀಸ್​ ಅವರು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ. ಹಾಗೇ ಈಗ ಪ್ರತಿಪಕ್ಷದ ನಾಯಕ. ಬಿಹಾರ ಚುನಾವಣೆಯ ಉಸ್ತುವಾರಿ. ನಮ್ಮ ಮಧ್ಯೆ ವೈಯಕ್ತಿಕ ಜಗಳ, ಭಿನ್ನಮತಗಳಿಲ್ಲ. ಆಡಳಿತ ಪಕ್ಷ ಮತ್ತು ಪ್ರತಿಪಕ್ಷಗಳ ನಡುವೆ ಸಭೆಗಳು ಸಾಮಾನ್ಯ. ನಾವು ಬಿಜೆಪಿಯೊಂದಿಗೆ ಮೈತ್ರಿಯಲ್ಲಿದ್ದಾಗಲೂ, ಎನ್​ಸಿಪಿಯ ಶರದ್​ ಪವಾರ್​ ಅವರನ್ನು ಭೇಟಿಯಾಗುತ್ತಿದ್ದೆ ಎಂದು ಸಮಜಾಯಿಶಿ ನೀಡಿದ್ದಾರೆ.
ಹಾಗೇ ಈ ಬಗ್ಗೆ ಫಡ್ನವೀಸ್​ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮಿಬ್ಬರ ಭೇಟಿಯಲ್ಲಿ ರಾಜಕೀಯ ವಿಚಾರಗಳು ಏನೂ ಇಲ್ಲ. ನಾವು ಶಿವಸೇನೆಯೊಂದಿಗೆ ಕೈ ಜೋಡಿಸುತ್ತಿಲ್ಲ. ನಮಗೆ ಅಧಿಕಾರಕ್ಕೆ ವಾಪಸ್​ ಬರಲು ಆತುರವಿಲ್ಲ. ನಾವು ಸಮರ್ಥ ಪ್ರತಿಪಕ್ಷವಾಗಿ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. (ಏಜೆನ್ಸೀಸ್​)
ಬಿಜೆಪಿ ಸಂಸದ ಉಮೇಶ್​ ಜಾಧವ್​ ಆಸ್ಪತ್ರೆಗೆ ದಾಖಲು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + twelve =
Remember me
