ವಾರಣಾಸಿ:ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ದಿನಗಣನೆ ಆರಂಭಗೊಂಡಿದ್ದು, ಭಗವಂತನ ದರ್ಶನ ಪಡೆಯಲು ಸಹಸ್ರಾರು ಸಂಖ್ಯೆಯ ಭಕ್ತಾಧಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಇದರ ಬೆನ್ನಲ್ಲೇ ವಾರಣಾಸಿಯ ಎಲ್ಲಾ 84 ಗಂಗಾ ಘಾಟ್‌ಗಳಲ್ಲಿ ಭಕ್ತರು ಮತ್ತು ಪ್ರವಾಸಿಗರಿಗೆ ಉಚಿತ ಸವಾರಿ ನೀಡಲು ಇದೀಗ ದೋಣಿ ಸವಾರರು ನಿರ್ಧರಿಸಿದ್ದಾರೆ.
ಇದನ್ನೂ ಓದಿ:ಅಧಿಕಾರಿಗಳಿಗೆ ತಲೆನೋವು ತಂದ ಕೋಳಿ; ಕಾರಣ ಕೇಳಿದರೆ ನಕ್ಕು ಸುಸ್ತಾಗುವುದು ಪಕ್ಕಾ
ಈ ಕುರಿತಂತೆ ಮಾತನಾಡಿದ ಮಾ ಗಂಗಾ ನಿಷಾದ್ ರಾಜ್ ಸೇವಾ ಟ್ರಸ್ಟ್‌ನ ಕಾರ್ಯದರ್ಶಿಯಾದ ಶಂಭು ಸಾಹ್ನಿ, “ಪ್ರಮುಖವಾಗಿ ದೋಣಿ ನಡೆಸುವವರನ್ನು ಒಳಗೊಂಡಿರುವ ನಿಶಾದ್ ಸಮುದಾಯವು ಶ್ರೀರಾಮನೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿದೆ. ಕಾಡಿಗೆ ಹೋಗುವಾಗ ಭಗವಂತ ಶ್ರೀರಾಮ, ಲಕ್ಷ್ಮಣ ಮತ್ತು ಸೀತೆ ಮಾತೆ ಬಳಿ ಏನನ್ನು ಸ್ವೀಕರಿಸದೆ ತನ್ನ ದೋಣಿಯಲ್ಲಿ ನದಿಯನ್ನು ದಾಟಲು ಸಹಾಯ ಮಾಡುತ್ತಾರೆ” ಎಂದರು.
“ಈ ಸಂಪ್ರದಾಯವನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ನಿಟ್ಟಿನಲ್ಲಿ ರಾಮಮಂದಿರದ ಪ್ರತಿಷ್ಠಾಪನೆ ಸಮಾರಂಭಕ್ಕೆ ಬನಾರಸ್‌ನ ಎಲ್ಲಾ 84 ಘಾಟ್‌ಗಳಲ್ಲಿ ಗಂಗಾನದಿಯ ಒಂದು ತುದಿಯಿಂದ ಇನ್ನೊಂದು ತುದಿಗೆ ಹೋಗುವ ಭಕ್ತರಿಗೆ ಮತ್ತು ಪ್ರವಾಸಿಗರಿಗೆ ಉಚಿತ ದೋಣಿ ಸೇವೆಯನ್ನು ಒದಗಿಸಲಾಗುವುದು” ಎಂದು ಸಾಹ್ನಿ ಹೇಳಿದ್ದಾರೆ.
ಟ್ರಸ್ಟ್‌ನ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ ಎಂದು ಶಂಭು ಸಾಹ್ನಿ ಹೇಳಿದ್ದಾರೆ,(ಏಜೆನ್ಸೀಸ್).
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:thirteen − 4 =
Remember me
