ಬಳ್ಳಾರಿ:ಸಾಮಾನ್ಯವಾಗಿ ಜಾತ್ರೆ ಹಬ್ಬಹರಿದಿನಗಳು ಅಂದರೆ ದೇವರ ಪೂಜೆ ಪುನಸ್ಕಾರ, ರಥೋತ್ಸವ ಮಾಡಿ ಸಂಭ್ರಮಾಚರಣೆ ಮಾಡುತ್ತಾರೆ. ಆದರೆ, ಕರ್ನಾಟಕ-ಆಂಧ್ರ ಗಡಿಭಾಗದ ಮಾಳ ಮಲ್ಲೇಶ್ವರ ದೇವಸ್ಥಾನದಲ್ಲಿ ನಡೆಯುವ ದಸರಾ ಜಾತ್ರೆಯ ಸಂದರ್ಭದಲ್ಲಿ ದೇವರ ಉತ್ಸವಮೂರ್ತಿಯನ್ನು ತಂತಮ್ಮೂರಿಗೆ ಒಯ್ಯಲು ಭಕ್ತರು ಬಡಿದಾಡಿಕೊಳ್ಳುತ್ತಾರೆ.
ಎರಡು ಗ್ರಾಮಗಳ ಜನರು ಬಡಿಗೆ ಹಿಡಿದು ಬಡಿದಾಡಿಕೊಳ್ಳುವ ಈ ಆಚರಣೆ ಹಲವಾರು ಬಾರಿ ರಕ್ತಚರಿತ್ರೆಯನ್ನೇ ಬರೆಯುತ್ತದೆ. ಇಂತಹುದೇ ಜಾತ್ರೆಯು ಈ ಬಾರಿಯೂ ಆಂಧ್ರದ ಗಡಿ ಗ್ರಾಮವಾದ ದೇವರಗುಡ್ಡದಲ್ಲಿ ನಿನ್ನೆ ರಾತ್ರಿ ನಡೆದಿದೆ. ಜಾತ್ರೆಯಲ್ಲಿ 20 ಸಾವಿರಕ್ಕೂ ಹೆಚ್ಚು ಜನ ಭಾಗಿಯಾಗಿದ್ದು, ರಾತ್ರಿ 1 ಗಂಟೆಯಿಂದ ಬೆಳಗ್ಗೆ 5 ರವರಗೆ ಭಕ್ತರು ಬಡಿಗೆ ಹಿಡಿದು ಬಡಿದಾಡಿಕೊಂಡಿದ್ದಾರೆ. ಬಡಿದಾಟದಲ್ಲಿ ಈ ಬಾರಿಯೂ ಹಲವರಿಗೆ ಗಾಯಗಳಾಗಿವೆ.

ಮಧ್ಯರಾತ್ರಿ ಅರಕೇರ ಮತ್ತು ನೇರಣಿಕಿ ಗ್ರಾಮಸ್ಥರ ನಡುವೆ ನಡೆದ ಸಾಂಪ್ರದಾಯಿಕ ಬಡಿಗೆ ಬಡಿದಾಟದಲ್ಲಿ ಭಾಗಿಯಾದ 80ಕ್ಕೂ ಹೆಚ್ಚು ಜನರಿಗೆ ಗಾಯಗಳುಂಟಾಗಿವೆ. ಗಾಯಾಳುಗಳನ್ನು ಆಲೂರು ಮತ್ತು ಕರ್ನುಲ್ ಆಸ್ಪತ್ರೆಗಳಿಗೆ ರವಾನೆ ಮಾಡಲಾಗಿದ್ದು, ಇವರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿದೆ. 5 ಜನರಿಗೆ ಕಣ್ಣಿಗೆ ಗಾಯವಾಗಿದ್ದರೆ, 20 ಜನರಿಗೆ ತಲೆಗೆ ಏಟು ಬಿದ್ದಿದೆ.
ಇದನ್ನೂ ಓದಿ:ಆನೇಕಲ್‌ನಲ್ಲಿ ವಿಜೃಂಭಣೆಯ ಅಂಬಾರಿ ಉತ್ಸವ, ವಿವಿಧ ಕಲಾ ತಂಡಗಳ ಪ್ರದರ್ಶನ, ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಭಾಗಿ
ಪೊಲೀಸರು ಮೂಕ ಪ್ರೇಕ್ಷಕರು:ಈ ಮಾಳ ಮಲ್ಲೇಶ್ವರನ ಜಾತ್ರೆಯಲ್ಲಿ ವಿಜಯದಶಮಿ ಹಬ್ಬದ ದಿನ ಪೂಜೆ ಬಳಿಕ ರಾತ್ರಿ ಉತ್ಸವ ಮೂರ್ತಿಯನ್ನು ಹೊರಗೆ ತರಲಾಗುತ್ತದೆ. ಆಗ ಅರಕೇರ ಮತ್ತು ನೇರಣಿಕಿ ಗ್ರಾಮಸ್ಥರು ದೇವರ ಉತ್ಸವ ಮೂರ್ತಿಗಾಗಿ ಬಡಿದಾಡಿಕೊಳ್ಳುತ್ತಾರೆ. ಮೂರ್ತಿಯನ್ನು ತಮ್ಮ ಊರಿಗೆ ತೆಗೆದುಕೊಂಡು ಹೋದರೆ ಒಳ್ಳೆಯದಾಗ್ತದೆ ಎನ್ನುವ ನಂಬಿಕೆಯಲ್ಲಿ ಕಾದಾಡುತ್ತಾರೆ. ಸಾಮಾನ್ಯವಾಗಿ ಮಧ್ಯರಾತ್ರಿಯಿಂದ ಬೆಳಗಿನ ಜಾವದವರೆಗೆ ಈ ಬಡಿದಾಟ ನಡೆಯುತ್ತದೆ. ಈ ಆಚರಣೆ ಮಧ್ಯೆ ಪೊಲೀಸರು ಮೂಕ ಪ್ರೇಕ್ಷಕರು.
ಈ ಭಯಾನಕ ಬಡಿಗೆ ಬಡಿದಾಟ ಜಾತ್ರೆಯಲ್ಲಿ ಸೇಡಿನ ಹೊಡೆದಾಟಗಳೂ ಆಗುವುದುಂಟು. ಕೆಲವು ಜನರು ವೈಷಮ್ಯ ತೀರಿಸಿಕೊಳ್ಳಲು ಜಾತ್ರೆಯನ್ನೇ ವೇದಿಕೆ ಮಾಡಿಕೊಳ್ಳುತ್ತಾರೆ ಎಂಬ ಆರೋಪ ಕೇಳಿಬಂದಿದೆ. ಜಾತ್ರೆ ಆಂಧ್ರದಲ್ಲಿ ನಡೆದರೂ ನೇರ ಪರಿಣಾಮ ಕರ್ನಾಟಕದ ಮೇಲೆ. ಈ ಜಾತ್ರೆಯಲ್ಲಿ ಭಾಗಿಯಾಗುವ ಶೇಕಡ 60 ರಷ್ಟು ಜನ ಕರ್ನಾಟಕದವರೇ. ಕರೊನಾ ಹಿನ್ನೆಲೆ ಜಾತ್ರೆಗೆ ಆಂಧ್ರ ಸರ್ಕಾರ ಬ್ರೇಕ್ ಹಾಕಿದ್ದರೂ ನಿನ್ನೆ ಅದ್ದೂರಿ ಜಾತ್ರೆ ನಡೆದಿದೆ. ಹೆಸರಿಗೆ ಮಾತ್ರ ಜಾತ್ರೆ ರದ್ದು ಎಂದು, ಪರೋಕ್ಷವಾಗಿ ಜಾತ್ರೆಗೆ ಅವಕಾಶ ಮಾಡಿಕೊಟ್ಟ ಆಂಧ್ರ ಸರ್ಕಾರ, ಅವಶ್ಯವಿದ್ದಷ್ಟು ಪೊಲೀಸ್ ನಿಯೋಜನೆ ಮಾಡದೇ ನಿರ್ಲಕ್ಷ್ಯ ತೋರಿದೆ ಎನ್ನಲಾಗಿದೆ.
ನಡುರಸ್ತೆಯಲ್ಲಿ ಖಡ್ಗಗಳನ್ನು ಹಿಡಿದು ನೃತ್ಯ ಮಾಡಿದ ಕಾರ್ಯಕರ್ತರು!

ಭಾರತ ಕ್ರಿಕೆಟ್​ ತಂಡದ ಹೆಡ್​ ಕೋಚ್​ ಆಗಲಿದ್ದಾರೆ, ರಾಹುಲ್​ ದ್ರಾವಿಡ್​

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:13 − 12 =
Remember me
