ಸೂರತ್:ಸಾಮಾನ್ಯವಾಗಿ ದೇವರಿಗೆ ಹಣ್ಣು, ಕಾಯಿ, ಹಾಲು, ಸಿಹಿ ತಿಂಡಿ ನೈವೇದ್ಯ ಮಾಡುವುದು ವಾಡಿಕೆ. ಆದರೆ ಈ ಶಿವದೇಗುಲದಲ್ಲಿ ಜೀವಂತ ಏಡಿಗಳನ್ನು ದೇವರಿಗೆ ಅರ್ಪಿಸುತ್ತಾರೆ. ಹೌದು, ಇಂತಹುದೊಂದು ದೇವಾಲಯ ಗುಜರಾತಿನಲ್ಲಿದೆ! ಅದು ಸೂರತ್ ಜಿಲ್ಲೆಯ ಉಮ್ರ ಗ್ರಾಮದಲ್ಲಿರುವ ರಾಮನಾಥ ಶಿವ ಘೇಲಾ ದೇವಸ್ಥಾನ. ಇಲ್ಲಿ ಮಕರ ಸಂಕ್ರಾಂತಿಯ ದಿನ ಶಿವಲಿಂಗಕ್ಕೆ ಜೀವಂತ ಏಡಿಗಳನ್ನು ಅರ್ಪಿಸುವ ಪ್ರತೀತಿ ಬೆಳೆದುಬಂದಿದೆ. ನೂರಾರು ವರ್ಷಗಳಿಂದ ಈ ಪರಂಪರೆ ನಡೆದುಬಂದಿದೆ.
ಇಲ್ಲಿನ ಶಿವಲಿಂಗವನ್ನು ಸ್ವತಃ ಶ್ರೀರಾಮನೇ ಪ್ರತಿಷ್ಠಾಪಿಸಿದ್ದು ಎಂಬ ನಂಬಿಕೆ ಇದೆ. ಒಂದು ದಿನ ಸಾಗರದಂಡೆಯಲ್ಲಿ ಶ್ರೀ ರಾಮನ ಪಾದಗಳ ಮೇಲೆ ಬಂದ ಏಡಿಯೊಂದನ್ನು ನೋಡಿ ಆನಂದಪಟ್ಟು, ದೇವರ ಪೂಜೆಯಲ್ಲಿ ಏಡಿಗೆ ಸ್ಥಾನ ಕೊಟ್ಟನಂತೆ. ಪೂಜೆ ಮಾಡಿದ ನಂತರ, ರಾಮನು ಈ ಶಿವಲಿಂಗಕ್ಕೆ ಏಡಿಗಳನ್ನು ಅರ್ಪಿಸುವವರಿಗೆ ಇಷ್ಟಾರ್ಥಗಳು ಸಿದ್ಧಿಸುವುದಾಗಿ ಹೇಳಿದನಂತೆ. ಆಗಿನಿಂದ ಜನಪ್ರಿಯವಾಗಿದೆ ಈ ರೂಢಿ.ಏಡಿಗಳನ್ನು ಅರ್ಪಿಸುವುದರಿಂದ ಅದೃಷ್ಟ ಒಲಿಯುತ್ತದೆ. ಸಂಪತ್ತು ಹೆಚ್ಚುವುದರೊಂದಿಗೆ ಆರೋಗ್ಯದ ಸಮಸ್ಯೆಗಳು ನಿವಾರಣೆಯಾತ್ತವೆ ಎಂದು ಭಕ್ತರು ನಂಬಿದ್ದಾರೆ.
ಸಂಕ್ರಾಂತಿಯಂದು ಸಾವಿರಾರು ಸಂಖ್ಯೆಯಲ್ಲಿ ಇಲ್ಲಿಗೆ ಆಗಮಿಸುವ ಭಕ್ತರು ಹಣ್ಣುಕಾಯಿ ಕೊಂಡಂತೆ ಏಡಿಗಳನ್ನು ಕೊಂಡು ದೇವರಿಗೆ ನೀಡುತ್ತಾರೆ. ಮತ್ತೆ ಆ ಏಡಿಗಳ ಗತಿ ಏನು ಎಂದಿರಾ? ದೇವಾಯಲದ ಅಧಿಕಾರಿಗಳು ಅವುಗಳನ್ನೆಲ್ಲಾ ಸಂಗ್ರಹಿಸಿ ಹತ್ತಿರದ ಸಮುದ್ರದಂಡೆಯಲ್ಲಿ ವಾಪಸ್ ಬಿಟ್ಟುಬರುತ್ತಾರಂತೆ.
ಸಂಸಾರ ಮಾಡಲು ಗಂಡ ಒಪ್ಪದಿದ್ದರೆ ಏನಾದರೂ ಪರ್ಯಾಯ ಮಾರ್ಗಗಳಿವೆಯೆ?

ಮಾಸ್ಕ್ ಧರಿಸಿಯೇ ಇದ್ದರೆ ನಿಮ್ಮ ಕಣ್ಣಿಗೂ ಅಪಾಯ… ಜೋಕೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:19 − 8 =
Remember me
