ಚೆನ್ನೈ:ಯಾವುದಾದರೊಂದು ಉತ್ತಮ ಕೆಲಸ ಮಾಡುವ ಮುನ್ನ ದೇವರಲ್ಲಿ ಪ್ರಾರ್ಥನೆ ಮಾಡುವುದು ಸಾಮಾನ್ಯ. ಆದರೆ, ಚೆನ್ನೈನಲ್ಲಿರುವ ಕಳ್ಳನೊಬ್ಬ ಎಲ್ಲರಿಗಿಂತಲೂ ವಿಭಿನ್ನ ಎಂಬುದನ್ನು ತೋರಿಸಿಕೊಟ್ಟಿದ್ದಾನೆ. ಸದ್ಯ ಆ ವಿಶೇಷ ಕಳ್ಳನಿಗಾಗಿ ಚೆನ್ನೈ ಪೊಲೀಸರು ಸಹ ಹುಡುಕಾಟ ನಡೆಸುತ್ತಿದ್ದಾರೆ.
ತಿರುವನ್ಮಿಯೂರ್ ದೇವಸ್ಥಾನದಲ್ಲಿ ಇರುವ ಎರಡು ಹುಂಡಿಗಳನ್ನು ಲೂಟಿ ಮಾಡುವ ಮುನ್ನ ಖದೀಮ ದೇವರ ಮುಂದೆ ಮಂಡಿಯೂರಿ ಮನಸಾರೆ ಪ್ರಾರ್ಥಿಸಿದ್ದಾನೆ. ಕಳ್ಳನ ಕಳ್ಳಾಟವೆಲ್ಲವೂ ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆತನ ಮುಖಚಹರೆ ಪತ್ತೆಗೆ ಪೊಲೀಸರು ಯತ್ನಿಸುತ್ತಿದ್ದಾರೆ. ತಿರುವನ್ಮಿಯೂರ್ ಈಸ್ಟ್​ ಕೋಸ್ಟ್​ ರಸ್ತೆಯಲ್ಲಿ ಮರುಂಡೀಶ್ವರರ್​ ದೇವಸ್ಥಾನದಲ್ಲಿ ಶುಕ್ರವಾರ ಮುಂಜಾನೆ ಈ ಪ್ರಸಂಗ ಜರುಗಿದೆ.
ಇದನ್ನೂ ಓದಿ:VIDEO| ಸಾವಿರಾರು ಜನ್ರ ಮುಂದೆ ಆರ್​ ಆರ್​ ನಗರ ಜೆಡಿಎಸ್​ ಅಭ್ಯರ್ಥಿ ಬಿಕ್ಕಿಬಿಕ್ಕಿ ಅಳುತ್ತಾ ಹೇಳಿದ್ದೇನು?
ಲೂಟಿ ಮಾಡುವ ಮುನ್ನ ಆತ ದೇವಸ್ಥಾನದ ಹತ್ತಿರದಲ್ಲೇ ಇದ್ದ ಕಟ್ಟಡದಿಂದ ದೇವಸ್ಥಾನದ ಕಾಂಪೌಂಡ್​ ಹಾರಿ ಒಳಗೆ ಬಂದಿದ್ದಾನೆ. ಹುಂಡಿಯಲ್ಲಿ ದೋಚುವ ಮುನ್ನ ದೇವರಿಗೆ ಪ್ರಾರ್ಥನೆಯನ್ನೂ ಸಲ್ಲಿಸಿದ್ದಾನೆ. ಸುಮಾರು 1 ಲಕ್ಷ ರೂ. ದೋಚಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಇದೀಗ ಪ್ರಕರಣ ದಾಖಲಿಸಿರುವ ಪೊಲೀಸರು ಕಳ್ಳನ ಹುಡುಕಾಟದಲ್ಲಿದ್ದಾರೆ.(ಏಜೆನ್ಸೀಸ್​)
A CCTV footage of a theft at Durga Bhavani Mandir in Gunfoundry, Secunderabad. A crown of Durga mata was stolen from the temple. Interesting to see how the thief apologizes first to the mata, prays and then steals the crown. Case registered, investigation underway.#Hyderabadpic.twitter.com/kZ06DZpI4W
— Paul Oommen (@Paul_Oommen)November 21, 2019

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + 15 =
Remember me
